ಯೋಗದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ:ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ.ಜೂ.20: ಪ್ರತಿ ದಿನ ಯೋಗ ಮಾಡುವುದರಿಂದ ನಮ್ಮ ದೇಹದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ನಾವು ಸುಧಾರಿಸಬಹುದೆಂದು ಕಲಬುರಗಿ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ ಇಲಾಖೆ, ಪತಂಜಲಿ ಯೋಗ ಹಾಗೂ ನಾನಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜೂನ್ 21 ರಂದು ನಡೆಯುವ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮ ಅಂಗವಾಗಿ ಜಗತ್ ವ್ಯತ್ತದಲ್ಲಿ ಯೋಗ ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಜೀವನವನ್ನು ನಾವು ನೋಡಿಕೋಳಬೇಕು ಆರೋಗ್ಯವನ್ನು ನಾವು ಯೋಗದಿಂದ ಕಾಪಡುವಂತದ್ದು, ಯೋಗ ಮಾಡುವುದರಿಂದ ರೋಗಗಳನ್ನು ದೂರ ಮಾಡಿ ಆರೋಗ್ಯದಿಂದ ಜೀವಸಲು ಸಾಧ್ಯ ಎಂದು ತಿಳಿಸಿದರು.
ದಿನಾಲು ಯೋಗ ಮತ್ತು ವಾಕಿಂಗ್ ಮಾಡಬೇಕು ಆರೋಗ್ಯದ ಕಡೆ ಗಮನವನ್ನು ಹರಿಸಬೇಕು ಪ್ರತಿ ಒಬ್ಬ ಮಾನವನಿಗೆ ಅವಶ್ಯಕತೆ ಎಂದರೆ ಆಹಾರ ಎಂದರೆ ಯೋಗ ಎಂದು ಹೇಳಿದರು.
ನಾಳೆ ಬೆಳಿಗ್ಗೆ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಬೆಳಿಗ್ಗೆ 6.30 ಗಂಟೆಗೆ ಯೋಗ ಕಾರ್ಯಕ್ರಮ ಆರಂಭವಾಗಲಿದ್ದು, ನಗರದ ಎಲ್ಲಾ ಸಾರ್ವಜನಿಕರು ಸರಿಯಾದ ಸಮಯಕ್ಕೆ ಬಂದು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಅಪರ ಜಿಲ್ಲಾಧಿಕಾರಿ ಎಂ. ರಾಚಪ್ಪ ಅವರು ಮಾತನಾಡಿ, ಯೋಗ ಒಂದು ದೈನಂದಿನ ಚಟುವಟಿಕೆಯಾಗಿದೆ. ನಾವು ಪ್ರತಿ ದಿನ ಯೋಗದ ಕಡೆ ಗಮನ ಹರಿಸಬೇಕು. ನಾಳೆ ನಡೆಯುವ ಕಾರ್ಯಕ್ರಮ ತಾವೆಲ್ಲೂರು ಆಗಮಿಸಿ ಯಶಸ್ವಿಗೊಳಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯೋಗ ನಡಿಗೆ ಜಾಥಾ ಜಗತ್ ವೃತ್ತದಿಂದ ಪ್ರಾರಂಭವಾಗಿ ಸರ್ದಾರ ವಲ್ಲಭಬಾಯಿ ಪಟೇಲ್ ದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಕ್ತಾಯವಾಯಿತು. ವಿವಿಧ ಶಾಲಾ-ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಆಯುಷ್ ಇಲಾಖೆ ಅಧಿಕಾರಿ ಡಾ. ಗಿರೀಜಾ ಎಸ್.ಯು. ಅವರು ಮಾತನಾಡಿದರು. ಕಲ್ಯಾಣ ಕಾರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಮಾಜಿ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಸೇಡಂ, ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಮಾಲಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯಿತ್ರಿ ಸೇರಿದಂತೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರು, ಭೂಮಿ ಯೋಗ ಪೌಂಡೇಶನ ಅಧ್ಯಕ್ಷರು ಹೋಮಿಯೋಪತಿ, ಶರಣಬಸವೇಶ್ವರ ವಿದ್ಯಾವರ್ದಕ ಸಂಘ,ಆರ್ಯವೇದಿಕ್ ಕಾಲೇಜ್, ನರ್ಸಿಂಗ್ ಕಾಲೇಜಿ ಪ್ರಾಂಶುಪಾಲರು ಶಿಕ್ಷಕರು ಉಪಸ್ಥಿತರಿದ್ದರು.