ಯೋಗದಿಂದ ದೈಹಿಕ ಮಾನಸಿಕ ಸದೃಢತೆ ಸಾಧ್ಯ: ಡಾ.ಮಹಾಂತ ಸ್ವಾಮೀಜಿ,    

ಸೊರಬ.ಜೂ.23; ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಯೋಗಕ್ಕೆ ವಿಶಿಷ್ಟವಾದ ಸ್ಥಾನವಿದೆ ಪ್ರತಿಯೊಬ್ಬರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುವ ಶಕ್ತಿ ಯೋಗಕ್ಕಿದೆ ಎಂದು ಜಡೆ ಸಂಸ್ಥಾನ ಮಠದ ಡಾ .ಮ,ನಿ,ಪ್ರ, ಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ಮುರುಘಾ ಮಠದಲ್ಲಿ ಬುಧವಾರ ಒಂಬತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮಾನವನ ಮಾನಸಿಕ ಹಾಗೂ ಶಾರೀರಿಕ ಸದೃಢತೆ ಗೆ ಯೋಗಾಸನ ಚಟುವಟಿಕೆಗಳು ಪೂರಕವಾಗಿರುತ್ತದೆ.ದೇಹ ಮತ್ತು ಮನಸ್ಸು ಅವಿನಾಭಾವ ಸಂಬಂಧವನ್ನು ಹೊಂದಿವೆ ಮನಸ್ಸಿನ ದುಗುಡವನ್ನು ದೂರ ಮಾಡಿ ಹೊಸ ಚೈತನ್ಯವನ್ನು ತುಂಬುವ ಮೂಲಕ ಸದೃಢ ಆರೋಗ್ಯವಂತ ವ್ಯಕ್ತಿಯನ್ನಾಗಿ ಮಾಡುವ ಶಕ್ತಿ ಯೋಗಕ್ಕಿದೆ ಎಂದು ಹೇಳಿದ ಅವರು ದೇಹವನ್ನು ಯೋಗದಿಂದ ಶಾಸ್ತ್ರೀಯವಾಗಿ ದಂಡಿಸುವುದರಿಂದ   ಅದರ ಪರಿಪೂರ್ಣತೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಯೋಗ, ಧ್ಯಾನ, ಪ್ರಾಣಾಯಾಮ,ದಾನ ಮೊದಲಾದ ಗುಣಗಳನ್ನು ಬೆಳೆಸಿಕೊಂಡಾಗ ಮನುಷ್ಯನ ಬದುಕು ಸುಂದರವಾಗುತ್ತದೆ ಹಾಗೂ ದೇಹದ ಸಾಮರ್ಥ್ಯಕ್ಕೆ ಆಳವಾದ ಯೋಗದ‌ ಅಗತ್ಯವಿದೆ ಎಂದರು.  ಯೋಗ ಪಟು ನಡಹಳ್ಳಿ ಶ್ರೀಧರ ಮೂರ್ತಿ ಮಾತನಾಡಿ ವಿಭಿನ್ನ ರೀತಿಯ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಮಾನವ ರೋಗಕ್ಕೆ ತುತ್ತಾಗುತ್ತಿದ್ದಾನೆ ಯೋಗದಿಂದ ರೋಗ ಮುಕ್ತನಾಗಿ ಸದೃಢ ನಾಗರೀಕನಾಗಿ ಹೊರಹೊಮ್ಮಿಲು ಸಾಧ್ಯ ಎಂದರು.ಈ ಸಂದರ್ಭದಲ್ಲಿ ವೀರಶೈವ ಸಮಾಜದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಟ್ರಸ್ಟ್ ತಾಲೂಕು ಅಧ್ಯಕ್ಷ ಅಶೋಕ್ ನಾಯಕ್ ಅಂಡಿಗೆ, ರೇಣುಕಮ್ಮ ಗೌಳಿ,ಡಿ.ಶಿವಯೋಗಿ, ನಾಗರಾಜ್ ಗುತ್ತಿ, ರವಿಶಂಕರ್,ಚಂದ್ರಣ್ಣ ನಿಜಗುಣ, ಮಹೇಶ್ ಖಾರ್ವಿ, ಸರಸ್ವತಿ ನಾವುಡ,ಸುಮಂಗಲಾ, ನಿರ್ಮಲಾ, ರಾಜೇಶ್ವರಿ, ವನಿತಾ, ಸಿದ್ದೇಶ್ವರ, ವಿಜಯ್ ಸೇರಿದಂತೆ ಮೊದಲಾದವರಿದ್ದರು.