ಬೀದರ:ಜೂ.30:ದೇಹ ಮತ್ತು ಮನಸ್ಸನ್ನು ಆರೋಗ್ಯದಿಂದ ಇಟ್ಟಿಕೊಳ್ಳಲು ದಿನಾಲು ಯೋಗ ಅಭ್ಯಾಸ ಮಾಡಬೇಕೆಂದು ನಗರದ ಗುರುನಾನಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಕ್ರಮಸಿಂಗ್ ಹೇಳಿದರು ಅವರು ಗುರುನಾನಕ ಪದವಿ ಪೂರ್ವ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ಒಂದುವಾರ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಯೋಗಕ್ಕೆ ದೇಹ ಮನಸ್ಸು ಮತ್ತು ಆತ್ಮವನ್ನು ಒಂದು ಗೂಡಿಸುವ ಆಗಾದವಾದ ಶಕ್ತಿ ಇದೆ. ಭಾರತ ದೇಶವು ಯೋಗ ವಿದ್ಯೆಯಲ್ಲಿ ಇಡೀ ಪ್ರಪಂಚಕ್ಕೆ ವಿಶ್ವಗುರುವಾಗಿದೆ. ಪ್ರತಿಯೊಬ್ಬರು ಯೋಗ ಅಭ್ಯಾಸ ಜೀವನದಲ್ಲಿ ರೂಢಿಸಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿರ ಹಾಗೂ ಸದೃಢವಾಗಿಟ್ಟುಕೊಳ್ಳಲು ಯೋಗ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿ ಯೋಗವನ್ನು ಅಳವಡಿಸಿಕೊಂಡರೆ ಜೀವನವೀಡಿ ರೋಗಮುಕ್ತರಾಗಿ ಆರಾಮವಾಗಿ ಜೀವನ ಸಾಗಿಸಬಹುದೆಂದು ಹೇಳಿದರು.
ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಸುಲ್ತಾನಪೂರೆ ಒತ್ತಡ ರಹಿತ ಜೀವನ ಶಾಂತಿ, ನೆಮ್ಮದಿಯಿಂದ ಬದುಕಲು ಯೋಗ ಸಹಕಾರಿಯಾಗುತ್ತದೆ. ಪ್ರತಿದಿನ ಯೋಗ ಮಾಡುವದರಿಂದ ಇಡೀ ದಿವಸ ಲವಲವಿಕೆಯಿಂದ ಇರಲು ಸಾಧ್ಯ ಯೋಗ ಮೂಲತಃ ಅತ್ಯಂತ ಪ್ರಾಚೀನ ಕಲೆ ಇದು. ಆರೋಗ್ಯಕರ ಮನಸ್ಸು ಬೆಳೆಸುವ ಗುರಿಯನ್ನು ಹೊಂದಿದೆ. ಯೋಗ ಮಾನವನ ದೇಹದ ದೈಹಿಕ, ಅಧ್ಯಾತ್ಮಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ. ಯೋಗ ಕಲೆಯಿಂದ ಮಕ್ಕಳಲ್ಲಿ ವೈಚಾರಿಕತೆ ಭಾವನಾತ್ಮಕ ರಚನೆ ಮತ್ತು ಸೃಜನ ಶೀಲತೆಯನ್ನು, ಏಕಾಗೃತೆಯನ್ನು ಬೆಳೆಸುತ್ತದೆಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಮಾತನಾಡಿದ ಯೋಗ ಶಿಕ್ಷಕ ಯೋಗೇಂದ್ರ ಯದಲಾಪುರೆ ಜಾಗತಿಕ ಮಟ್ಟದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಯೋಗದ ಜನಪ್ರಿಯತೆಯು ಭಾರತದ ಪುರಾತನ ಆರೋಗ್ಯಕರ ಜೀವನ ಪದ್ಧತಿಯನ್ನು ಇಂದು ಜಗತ್ತಿನೆಲೆಡೆ ಪ್ರಚಾರಪಡಿಸುವ ಸಾಧನವಾಗಿ ರೂಪಾಂತರಗೊಂಡಿ. ಈ ಬಾರಿಯ ಯೋಗ ದಿನಕ್ಕೆ ವಸುದೈವಕುಟುಂಬಕಂ ಎಂಬ ಥೀಮ ನೀಡಲಾಗಿದೆ. ಜಗತ್ತೆ ಒಂದು ಭಾವಿಸಿ ಎಲ್ಲರ ಯೋಗಕ್ಷೇಮವನ್ನು ಭಾವಿಸುವ ಭಾರತದ ಪುರಾತನದ ಜೀವನ ಮೌಲ್ಯವನ್ನು ಪ್ರತಿನಿಧಿಸುವ ಘೋಷವಾಕ್ಯವಿದು. ವಿಶ್ವದಲ್ಲಿ ಯೋಗದಿಂದ ವಿಶ್ವಶಾಂತಿ ನೆಲೆಸಲು ಸಾಧ್ಯವೆಂದು ಹೇಳಿದರು. ಯೋಗವು ಭಾರತೀಯ ಪರಂಪರೆಯ ತಾಯಿ ಬೇರಾಗಿದ್ದು, ಭಾರತವು ವಿಶ್ವಕ್ಕೆ ನೀಡಿದ ಬಹುದೊಡ್ಡ ಅತ್ಯಮೂಲ್ಯ ಕೊಡುಗೆಯಾದೆ. ಯೋಗವು ನಮಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಬೆಳವಣಿಗೆಗೆ ಸಹಾಯಕವಾಗುತ್ತದೆ. ಯೋಗವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ಸದೃಢ ದೇಶ ಕಟ್ಟಲು ಸಹಾಯಕವಾಗುತ್ತದೆಂದು ಹೇಳಿದರು.
ಒಂದು ವಾರ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕಿಯರಾದ ವಿಜಯಲಕ್ಷ್ಮೀ ಡೊಯಿಜೋಡೆ ಹಾಗೂ ಮಹಾದೇವಿ ಬಿರಾದಾರ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಯೋಗ ತರಬೇತಿ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಉಪನ್ಯಾಸಕರಾದ ಅರವಿಂದ ಸರ್ ಸಭೀಕರನ್ನು ಸ್ವಾಗತ ಕೋರಿದರು. ಶ್ರಧ್ಧಾನಂದ ನಾಗೂರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಗುರುನಾನಕ ಕಾಲೇಜಿನ ಬಾಲಕರ ವಸತಿ ನಿಲಯದ ಅನುಸಿಂಗ್ ಠಾಕೂರ, ಸದಾನಂದ ಸ್ವಾಮಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂಧಿವರ್ಗದವರು ಉಪಸ್ಥಿತರಿದ್ದರು.