ಅಥಣಿ :ಜೂ.22: ಯೋಗ, ವ್ಯಾಯಾಮ, ಪ್ರಾಣಾಯಾಮ ಮತ್ತು ಧ್ಯಾನ ಕೇವಲ ವಿಶ್ವಯೋಗ ದಿನಾಚರಣೆಗೆ ಸೀಮಿತವಾಗಬಾರದು. ಆರೋಗ್ಯವಂತ ಜೀವನಕ್ಕೆ ಪ್ರತಿಯೊಬ್ಬರು ಪ್ರತಿನಿತ್ಯ ಯೋಗವನ್ನು ರೂಪಿಸಿಕೊಂಡು, ಯೋಗದ ಆಸನಗಳನ್ನು ಕ್ರಮಬದ್ಧವಾಗಿ ಮಾಡಬೇಕೆಂದು ಯೋಗ ಗುರುಗಳಾದ ಶಿವಕುಮಾರ್ ಕಲ್ಯಾಣ ಮಠ ಅವರು ಹೇಳಿದರು.
ಅವರು ಬುಧವಾರ ಆದರ್ಶ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ವೈಭವ ನಗರ ಅಥಣಿಯಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯ ನಿಮಿತ್ಯವಾಗಿ ಯೋಗ ಕಾರ್ಯಕ್ರಮಕ್ಕೆ ಚಾಲನೆಯಲ್ಲಿ ಮಾತನಾಡಿದರು.
ನಮ್ಮೆಲ್ಲರ ಜೀವನದಲ್ಲಿ ಆರೋಗ್ಯವಾಗಿರಲು ಮತ್ತು ಸದಾ ಸಕ್ರಿಯವಾಗಿರಲು ಯೋಗಭ್ಯಾಸ ಬಹಳ ಸಹಾಯಕವಾಗುತ್ತದೆ ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದನ್ನು ರೂಡಿ ಮಾಡಿಕೊಳ್ಳಬೇಕು ಇದರಿಂದ ಮಾನಸಿಕ ಒತ್ತಡ ದೇಹದ ಸದೃಢತೆ ಮಕ್ಕಳ ಬೆಳವಣಿಗೆಗೆ ಹೆಚ್ಚು ಸಹಕಾರಿವಾಗುತ್ತದೆ ಎಂದು ಹೇಳಿದರು.
ಈ ವೇಳೆ ಆದರ್ಶ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ರಾವಸಾಬ ಐಹೊಳೆ ಮಾತನಾಡಿ ಆರೋಗ್ಯ ರಕ್ಷಣೆಯಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಬೆಳಗ್ಗಿನ ಆರಂಭವನ್ನು ಯೋಗದಿಂದ ಮಾಡುವುದು ಬಹಳ ಒಳ್ಳೆಯದು. ಅದರಲ್ಲೂ ಮಕ್ಕ???ಂದಿಗೆ ಸೇರಿ ಯೋಗಾಭ್ಯಾಸ ಮಾಡುವುದರಿಂದ ಮಕ್ಕಳಿಗೆ ಆ ಕುರಿತು ಜಾಗೃತಿ ಮೂಡಿಸಿದಂತಾಗುವುದು ಮಾತ್ರವಲ್ಲ
ಸಣ್ಣ ವಯಸ್ಸಿನಲ್ಲೇ ಯೋಗ ಮಾಡುವುದು ಕಲಿತರೆ ಮಾಂಸಖಂಡಗಳು ಶಕ್ತಿಯುತವಾಗುತ್ತವೆ. ಉಸಿರಾಟದ ವ್ಯವಸ್ಥೆ ಉತ್ತಮಗೆuಟಿಜeಜಿiಟಿeಜಳ್ಳುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹದ ತೂಕ ಸಮತೋಲನದಲ್ಲಿರುತ್ತದೆ. ಹೃದಯ, ರಕ್ತನಾಳಗಳ ಸಮಸ್ಯೆ ಉಂಟಾಗುವುದಿಲ್ಲ. ಆಟಪಾಠಗಳಲ್ಲಿ ಹೆಚ್ಚು ತಲ್ಲೀನತೆ ಮೂಡುತ್ತದೆ. ಮಾನಸಿಕ ಉದ್ವೇಗ, ಒತ್ತಡ ಕಡಿಮೆಯಾಗುತ್ತದೆ. ಹೀಗಾಗಿ ಮಕ್ಕಳನ್ನು ಯೋಗದಲ್ಲಿ ಜತೆಯಾಗಿಸುವುದು ಅವರ ಆರೋಗ್ಯಕ್ಕೂ ಅತ್ಯುತ್ತಮ. ಎಂದರು
ಈ ಯೋಗ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ರಾವಸಾಬ ಐಹೊಳೆ. ಮುಖ್ಯೋಪಾಧ್ಯಾಯ ಹನುಮಂತ್ ಸರ್ ಹಾಗೂ ವೈಭವ ಐಹೊಳೆ ಮತ್ತು ಸತೀಶ್ ಕುಲಕರ್ಣಿ ಮಹಾಂತೇಶ್ ಶಾಬನವರ, ಅಶೋಕ್ ಗೌರಗೊಂಡ. ಅಪ್ಪು ಹಳದಮಳ. ಹಾಗೂ ಶಾಲಾ ಶಿಕ್ಷಕರು ಸಿಬ್ಬಂದಿ ವರ್ಗ ಆಡಳಿತ ಮಂಡಳಿ ಉಪಸ್ಥಿತರಿದ್ದರು