ಯೋಗದಿಂದ ಜಗತ್ತು ಭಾರತಕ್ಕೆ ತಲೆ ಬಾಗಿದೆ

ವಿಜಯಪುರ :ಜೂ.22: ನಗರದ ಶ್ರೀ ರುಕ್ಮಾಂಗದ ಶಿಕ್ಷಣ ಸಂಸ್ಥೆಯಲ್ಲಿ 9ನೆ ಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಷೇಶವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಯೋಗಪಟು ವೈ.ಕೆ. ದೇಶಪಾಂಡೆ ಮಾತನಾಡಿ, ಯೋಗವು ಮನಸ್ಸನ್ನು ನಿಯಂತ್ರಿಸಲು ಸಹಕಾರಿಯಾಗಿದ್ದು, ಯೋಗದಿಂದ ಜಗತ್ತು ಭಾರತಕ್ಕೆ ತಲೆ ಬಾಗಿದೆ ಅದಕ್ಕಾಗಿ ಇಂದು ಶಾಲಾ ಮಕ್ಕಳಿಗೆ ಆತ್ಮಸ್ಥೈರ್ಯ ಬೆಳೆಸಲು ಯೋಗ ಬೇಕೆಂದರು.
ಶಿಕ್ಷಕರು ಕೆಲಸದ ಒತ್ತಡಗಳನ್ನು ಕಡಿಮೆಮಾಡಿ ಆರೋಗ್ಯದಿಂದರಲು ಯೋಗ ಬೇಕು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಯೋಗ ಮಕ್ಕಳ ದಿನ ನಿತ್ಯದ ಚಟುವಟಿಕೆಗಳಲ್ಲಿ ಒಂದಾಗಿರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ರುಕ್ಮಾಂಗದ ಹೈಸ್ಕೂಲಿನ ಮುಖ್ಯ ಗುರುಗಳಾದ ಎಲ್.ಎಚ್. ಕುಲಕರ್ಣಿ ಇವರು ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಯೋಗದ ಸಾರವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಶ್ರೀ ರುಕ್ಮಾಂಗದ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಎಮ್.ಎಸ್. ಕುಲಕರ್ಣಿ ಮಾತನಾಡಿ, ಇಂದು ಯೋಗವನ್ನು 170 ದೇಶಗಳು ಆಚರಿಸುತ್ತಿವೆ. ಯೋಗವು ಮನಸ್ಸು ಮತ್ತು ಶರೀರವನ್ನು ಜೋಡಿಸುವ ಸಾದನವಾಗಿದೆ. ದುರ್ಬಲ ಮನಸ್ಸನ್ನು ಹೋಗಲಾಡಿಸಲು ಯೋಗ ಬೇಕು. ಯೋಗವನ್ನು ಕೇವಲ ದಿನಾಚರಣೆ ಸೀಮಿತ ಮಾಡದೇ ಪ್ರತಿ ದಿನ ಯೋಗ ಮಾಡಿ ಆರೋಗ್ಯವನ್ನು ಉತ್ತಮಗೊಳಿಸಬೇಕೆಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ವಿ.ಎಸ್. ಗಾಯಿ, ಜಂಟಿ ಗೌರವಕಾರ್ಯದರ್ಶಿಗಳಾದ ಆರ್.ಎಸ್. ದೇಶಪಾಂಡೆ, ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಆನಂದ ಕುಲಕರ್ಣಿ, ಬಾಲಕೀಯರ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಪಿ.ಎ. ದೀಕ್ಷಿತ, ದೈಹಿಕ ಶಿಕ್ಷಕರಾದ ಎಲ್.ಕೆ. ಕುಲಕರ್ಣಿ, ಮುಂತಾದ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.