ಯೋಗದಿಂದ ಕೊರೊನಾ ರೋಗ ಮುಕ್ತಿ

ಹುಬ್ಬಳ್ಳಿ,ಮಾ15: ಜಗತ್ತನ್ನು ಕಾಡುತ್ತಿರುವ ಕೊರೊನಾ ಸೋಂಕು ರೋಗವನ್ನು ಹೊಡೆದೋಡಿಸಲು ಯೋಗ ಒಂದೇ ರಾಮಬಾಣ ಎಂದು ಶ್ರೀ ಬಸವಾನಂದ ಗುರೂಜಿ ಹೇಳಿದರು.
ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್‍ಗಳ ಸಂಘ ಮತ್ತು ವಿಶ್ವಚೇತನ ಯೋಗ ಸಂಶೋಧನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಛಾಯಾಗ್ರಾಹಕರಿಗಾಗಿ ನಗರದ ಮೂರುಸಾವಿರಮಠ ಆವರಣದಲ್ಲಿ ಏರ್ಪಡಿಸಿದ್ದÀ ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಗಲಿರುಳು ಎನ್ನದೆ ಜಗತ್ತಿನ ನಾನಾ ದೃಶ್ಯಗಳನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯುವ ಛಾಯಾಗ್ರಾಹಕರಿಗೆ ಆರೋಗ್ಯ ರಕ್ಷಣೆ ಬಹಳ ಮುಖ್ಯ. ಅದಕ್ಕೆ ಸುಲಭ ಮಾರ್ಗ ಎಂದರೆ ನಿತ್ಯವೂ ಯೋಗ, ಪ್ರಾಣಾಯಾಮ ಮಾಡುವುದು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಸಂಘದ ಅಧ್ಯಕ್ಷ ಕಿರಣ ಬಾಕಳೆ ಮಾತನಾಡಿ ತಮಗೆ ಯೋಗದಿಂದ ಅದ ಅನುಭವವನ್ನು ಬಿಚ್ಚಿಟ್ಟರು. ಸಂಘದ ಎಲ್ಲ ಸದಸ್ಯರ ಮನೆಗಳು ಯೋಗಮಯ ಆಗಬೇಕು ಎಂಬ ಸದುದ್ದೇಶದಿಂದ ಶಿಬಿರ ಸಂಘಟಿಸಲಾಗಿದೆ. ಮಾರ್ಚ್ 28 ರವರೆಗೆ ನಿತ್ಯ ಬೆಳಿಗ್ಗೆ 6 ಕ್ಕೆ ನಡೆಯುವ ಶಿಬಿರದ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ದಿನೇಶ ದಾಬಡೆ, ಕಾರ್ಯದರ್ಶಿ ಜಯೇಶ ಇರಕಲ್, ನಿರ್ದೇಶಕ ಮಂಡಳಿ ಸದಸ್ಯರಾದ ಆನಂದ ರಾಜೊಳ್ಳಿ, ಪ್ರಕಾಶ ಬಸವಾ, ವಿನಾಯಕ ಸಫಾರೆ, ಶಿವಾನಂದ ಹಳಿಜೋಳ ಇತರರು ಇದ್ದರು.
ನಂತರ ಯೋಗ, ಪ್ರಾಣಾಯಾಮ, ಧ್ಯಾನ, ಸೂರ್ಯ ನಮಸ್ಕಾರ ಇತ್ಯಾದಿಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ ಅವರು, ಪ್ರತಿಯೊಬ್ಬರಿಗೂ ಕೂತಲ್ಲಿಯೇ ಹೋಗಿ ಆಸನದ ಭಂಗಿಯ ಬಗ್ಗೆ ಗುರುಗಳು ವಿವರಣೆ ನೀಡಿ, ಕಲಿಸಿಕೊಟ್ಟರು.