ಆಲಮೇಲ:ಜೂ.13:ಮೋದಲು ಗರಡಿ ಮನೆಗಳಲ್ಲಿ ಯೋಗಾಶನ ಮತ್ತು ತಾಲಿಮು ಮಾಡುತ್ತಿದ್ದರು ಇಂದು ನಾವೇಲ್ಲರು ಜಿಮ್‍ಗಳಲ್ಲಿ ವರ್ಕೌಟ್ ಮಾಡಲು ಹೋಗುತ್ತವೆ ಪಾಶ್ಚಿಮಾತ್ಯರು ನಮ್ಮ ಭಾರತದ ಸಂಸ್ಕøತಿಯನ್ನು ಅಳಡಿಸಿಕೊಳ್ಳುತ್ತಿರುವಾಗ ನಾವೇಕೆ ಅವರ ಸಂಸ್ಕøತಿ ಅಳವಡಿಸಿ ಕೋಳ್ಳಬೇಕು ನಾವು ಯೋಗ ಮಾಡುವದರೊಂದಿಗೆ ನಮ್ಮ ಆರೋಗ್ಯವನ್ನು ಕಾಪಡಿಕೊಳೊನ್ನ ಎಂದು ಆಲಮೇಲದ ಖ್ಯಾತ ಆರ್ಯವೇದ ತಜ್ಞೆಯರಾದ ಶ್ರೀಮತಿ ಶಾರದ ರಾಜೇಶ ಪಾಟೀಲ್ ಹೇಳಿದರು.
ಇಂದು ಆಲಮೇಲ ಪಟ್ಟಣದಲ್ಲಿ ಯೋಗೋತ್ಸವ ಸಮಿತಿ ಆಲಮೇಲ ಅವರು 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸತತ 21 ದಿನಗಳ ಕಾಲÁ ಆಲಮೇಲದ ಯು.ಕೆ.ಪಿ ಕ್ಯಾಂಪ್ ಹನುಮಾನ ಮಂದಿರ ಆವರಣದಲ್ಲಿ ಹಮ್ಮಿಕೊಂಡಿರುವ ಯೋಗಾಸನ ಶಿಬಿರವನ್ನು ಸಸಿಗೆ ನೀರು ಹಾಕುವುದರÀ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರಶಾಂತವಾದ ಮುಂಜಾನೆ ವಾತವರಣದಲ್ಲಿ ಯೋಗ ಮಾಡುವದರಿಂದ ಶರೀರ ಆರೋಗ್ಯವಾಗಿ ಮತ್ತು ಮನಸ್ಸಿಗೆ ನೆಮ್ಮದಿ ಇರುತ್ತದೆ ಎಂದು ಹೇಳಿದರು
ಇನ್ನೂ ಡಾ|| ಮಂಜುಶಾ ಸಂದೀಪ ಪಾಟೀಲ ಮಾತನಾಡಿ ನಮ್ಮ ಜೀವನ ಒಂದು ತೋಟ ವಿದ್ದಂತೆ ನಾವು ಅದರಲ್ಲಿ ಏನು ಬೇಳೆಯುತ್ತೆವೋ ಅದರ ಫಲ ನಮ್ಮಗೆ ಸಿಗುತ್ತದೆ ಅದಕ್ಕೆ ನಮ್ಮ ಜೀವನದಲ್ಲಿ ಆರೋಗ್ಯವಾಗಿರಲ್ಲು ಯೋಗ ಧ್ಯಾನ ಹಾಗೂ ಆದ್ಯಾತ್ಮಿಕ ಪ್ರವಚನದಲ್ಲಿ ಪಾಲಗೋಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಿಮಾಲಯದಲ್ಲಿ ಯೋಗ ಸಾಧನೆ ಮಾಡಿರುವ ಯೋಗಗುರು ಪರಮ ಪೂಜ್ಯ ನಿರಂಜನ ಶ್ರೀಗಳು ಸಾನಿದ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಭಾವತಿ ಮೇತ್ರಿ ಡಾ ಶ್ರೀಶೈಲ ಪಾಟೀಲ ಸ್ವಾಗತ ಮಾಡಿಕೊಂಡರು ಶ್ರೀಶೈಲ ಮಠಪತಿ ನಿರೂಪಣೆ ಮಾಡಿದ್ದರು ಡಾ ಚನ್ನಬಸು ನಿಂಬಾಳ ಡಾ ರಾಜೇಶ ಪಾಟೀಲ ಅಶೋಕ ಸದ್ಲಾಪೂರ ಮುಂತಾದವರು ಇದ್ದರು