ಯೋಗದಿಂದ ಆರೋಗ್ಯಪೂರ್ಣ ವಿಶ್ವ ನಿರ್ಮಾಣ

ಬೀದರ್:ಜೂ.27: ಯೋಗದಿಂದ ಆರೋಗ್ಯಪೂರ್ಣ ವಿಶ್ವ ನಿರ್ಮಾಣ ಸಾಧ್ಯವಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಇಲ್ಲಿಯ ಅಮಲಾಪುರ ರಸ್ತೆಯಲ್ಲಿ ಇರುವ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪತಂಜಲಿ ಯೋಗ ಸಮಿತಿ ವತಿಯಿಂದ ಆಯೋಜಿಸಿದ್ದ ಯೋಗ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಯೋಗವು ಭಾರತದ ಅತ್ಯಮೂಲ್ಯ ಕೊಡುಗೆಯಾಗಿದೆ. ಜಾಗತಿಕ ಸ್ವಾಸ್ಥ್ಯಕ್ಕೆ ನೆರವಾಗಿದೆ. ನಿಯಮಿತ ಯೋಗದಿಂದ ಸದೃಢ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು.

ಋಷಿ, ಮುನಿಗಳು ನೀಡಿದ ಯೋಗ ಒಂದು ಶಿಸ್ತಾಗಿದೆ. ಆತ್ಮವಿಶ್ವಾಸ ಇಮ್ಮಡಿಗೊಳಿಸುವ ಹಾಗೂ ಸ್ವಯಂ ಸಾಕ್ಷಾತ್ಕಾರದ ಮಾರ್ಗವಾಗಿದೆ ಎಂದು ತಿಳಿಸಿದರು.

ಯೋಗ ದೈಹಿಕ ಹಾಗೂ ಮಾನಸಿಕ ರೋಗಗಳಿಗೆ ಪರಿಹಾರ ಕಲ್ಪಿಸುತ್ತದೆ. ಶಾಂತಿ, ಸಮಾಧಾನದ ಜೀವನಕ್ಕೆ ನೆರವಾಗುತ್ತದೆ. ನಿತ್ಯ ಯೋಗ ಮಾಡುವುದರಿಂದ ಯಾವುದೇ ರೋಗ ಬರುವುದಿಲ್ಲ ಎಂದು ಸಾನಿಧ್ಯ ವಹಿಸಿದ್ದ ಖೇರ್ಡಾ(ಬಿ) ಶಿವಲಿಂಗೇಶ್ವರ ಸಂಸ್ಥಾನ ವಿರಕ್ತ ಮಠದ ಶಿವಲಿಂಗ ಸ್ವಾಮೀಜಿ ನುಡಿದರು.

ಸ್ವಸ್ಥ ಸಮಾಜಕ್ಕಾಗಿ ಯೋಗ ಪರಂಪರೆ ಮುಂದುವರಿಸಿಕೊಂಡು ಹೋಗಬೇಕಿದೆ. ದೇಶದ ಸಂಸ್ಕøತಿ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕಿದೆ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗುರುನಾಥ ರಾಜಗೀರಾ ಹೇಳಿದರು.

ಇಂದಿನ ಒತ್ತಡದ ಜೀವನಕ್ಕೆ ಯೋಗವೇ ಪರಿಹಾರವಾಗಿದೆ. ಯೋಗ ನಮ್ಮನ್ನು ಮಾರಣಾಂತಿಕ ರೋಗಗಳಿಂದ ರಕ್ಷಿಸುತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುತ್ತದೆ. ಹೀಗಾಗಿ ಯೋಗ ನಮ್ಮ ಜೀವನದ ಭಾಗವಾಗಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಯೋಗ ಶಿಕ್ಷಕ ಯೋಗೇಂದ್ರ ಯದಲಾಪುರೆ ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಗನ್ನಾಥ ರೆಡ್ಡಿ ಮೈಲೂರ, ಸೂರ್ಯಕಾಂತ ಕುರುಬಖೇಳಗಿ, ಶಿವಕುಮಾರ ಭಾಲ್ಕೆ ಹಾಗೂ ಸರ್ಕಾರಿ ಐಟಿಐ ನಿವೃತ್ತ ಪ್ರಾಚಾರ್ಯ ಶಿವಶಂಕರ ಟೋಕರೆ ಅವರನ್ನು ಸನ್ಮಾನಿಸಲಾಯಿತು.

ವಕೀಲ ಸಂಜುಕುಮಾರ ಸಜ್ಜನ್, ವಂದೇ ಮಾತರಂ ಸ್ಕೂಲ್ ಮುಖ್ಯಸ್ಥ ಸಂತೋಷ ಪಾಟೀಲ, ರೆಡ್ಡಿ ಮಲ್ಲಮ್ಮ ಸಮಾಜದ ನಿರ್ದೇಶಕ ಪೆಂಟಾರೆಡ್ಡಿ ಉಪ್ಪಿನ್, ಸಂಜೀವಕುಮಾರ ಜಂಪಾ ಬೆಳ್ಳೂರ, ಯೋಗ ಸಾಧಕರಾದ ಗಣಪತರಾವ್ ಖೂಬಾ, ವಿಶ್ವನಾಥ ಉಪ್ಪೆ, ರಾಘವೇಂದ್ರ ಕುಲಕರ್ಣಿ, ಶಿವಶಂಕರ ಚಿಕುರ್ತಿ, ಎಚ್. ಬೆಟ್ಟದ್ ಚಳಕಾಪುರ, ವೀರಸಂಗಯ್ಯ ಸ್ವಾಮಿ, ಶಿವಾನಂದ ಚಳಕಾಪುರ, ಶಿವಾಜಿ ಭೋಸ್ಲೆ, ವಿಜಯಕುಮಾರ ಪೋಲೆ, ಮಲ್ಲಿಕಾರ್ಜುನ ಬಿರಾದಾರ, ಮಲ್ಲಿಕಾರ್ಜುನ ಶೆಟಕಾರ್, ಗಣೇಶ ಬಿರಾದಾರ, ಶುಭಂ ಯಶವಂತ, ಗುಂಡಪ್ಪ ವಿ.ಡಿ, ಅಶೋಕ ಗಂದಿಗುಡಿ, ಪಂಡಿತ ಪಾಟೀಲ, ಅನಿತಾ ಯದಲಾಪುರೆ, ಲಲಿತಾ ನಾಗಶೆಟ್ಟಿ, ಶಂಕರಯ್ಯ ಸ್ವಾಮಿ, ಶೋಭಾ ರೆಡ್ಡಿ, ಜಗನ್ನಾಥ ಕೋಡಗೆ, ಶಿವಕುಮಾರ ಸಂಗೋಳಗಿ, ಅನಿತಾ ಸ್ವಾಮಿ, ಪ್ರದೀಪ್ ಪಾಟೀಲ, ಗುರುನಾಥ ಮೂಲಗೆ, ಸಂಜೀವಕುಮಾರ ದುಕಾನ್‍ದಾರ್, ಬಾಬು ದಿಗ್ವಾಲ್, ಬಸವರಾಜ ಬಶೆಟ್ಟಿ, ಮಹೇಶ ಶೆಗೆದಾರ್, ವಿಜಯಲಕ್ಷ್ಮಿ ಮಾನ್ವಿ, ಸಂಗೀತಾ ಪಾಂಚಾಳ, ಅನಿತಾ ಮೊಕಾಶಿ, ಮಲ್ಲಮ್ಮ ಬಿರಾದಾರ, ಮಂಗಲಾ ಕುಲಕರ್ಣಿ, ಸಂಗೀತಾ, ಜ್ಯೋತಿ, ಜಗದೇವಿ ಕಾಬಾ, ಲಲಿತಾ ಗೌರ, ಶ್ರೀನಿವಾಸ ಮಸ್ಕಲೆ, ಪ್ರಶಾಂತ ಹೊಳಸಮುದ್ರಕರ್ ಇದ್ದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಸ್ವಾಗತಿಸಿದರು. ಡಾ. ಚನ್ನಪ್ಪ ಗೌಡ ನಿರೂಪಿಸಿದರು. ಯೋಗ ಸಾಧಕ ಅರುಣ ಮೋಕಾಶಿ ವಂದಿಸಿದರು.