ಯೋಗದಿಂದ ಅಸ್ತಮಾ ಪರಿಹಾರ


ವಿಶ್ವ ಅಸ್ತಮಾ ದಿನಾಚರಣೆ ಪ್ರಯುಕ್ತ ಲೇಖನ
ನದಿಗಿಳಿದವನಿಗೆ ಮಾತ್ರ ಚಳಿ ಗೊತ್ತು. ಹೊರಗಡೆ ನಿಂತು ನೋಡುವವನಿಗಲ್ಲ ಎನ್ನುವ ಮಾತಿದೆ. ಇದು ನಿಜ ಕೂಡ. ಯಾಕೆಂದರೆ ಯಾವುದೇ ರೋಗವಾದರೂ ಸರಿ. ಅದನ್ನು ಅನುಭವಿಸಿದವರಿಗೆ ಅದರ ಸಂಕಟಗಳು ತಿಳಿದಿರುತ್ತದೆ. ಬೇರೆಯವರಿಗೆ ಅದೆಲ್ಲಾ ಅರ್ಥವಾಗುವುದು ಕಷ್ಟ ಇಂತಹ ರೋಗಗಳಲ್ಲಿ ಅಸ್ತಮಾ ಕೂಡ ಒಂದಾಗಿದೆ.
ಅಸ್ತಮಾ ರೋಗಿಗಳಿಗೆ ಸರಿಯಾಗಿ ಉಸಿರಾಡಲು ಕಷ್ಟವಾಗುತ್ತದೆ ಮತ್ತು ಕೆಲವೊಂದು ಸಂದರ್ಭದಲ್ಲಿ ಇದರಿಂದ ತುಂಬಾ ಅಪಾಯ ಎದುರಿಸಬೇಕಾಗುತ್ತದೆ. ಆದರೆ ಅಸ್ತಮಾವನ್ನು ಯೋಗದ ಮೂಲಕ ಪರಿಹರಿಸಬಹುದು. ಅಸ್ತಮಾದ ರೋಗಲಕ್ಷಣಗಳಲ್ಲಿ ಪ್ರಮುಖವಾಗಿ ದಮ್ಮುಕಟ್ಟುವುದು, ತೀವ್ರ ಕೆಮ್ಮು, ಎದೆಯ ಬಿಗಿತ, ಆತಂಕ ಇತ್ಯಾದಿ ಬರುತ್ತದೆ. ಅಸ್ತಮಾದ ಹತೋಟಿಗೆ ವ್ಯಾಯಾಮ, ಯೋಗ, ಸಹಕಾರಿಯಾಗುತ್ತವೆ. ಯೋಗ, ಪ್ರಾಣಾಯಾಮಗಳಿಂದ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಯೋಗವು ಒತ್ತಡವನ್ನು ಕಡಿಮೆ ಮಾಡುತ್ತದೆ. ಅಸ್ತಮಾ ಇರುವ ಕೆಲವರು ಒತ್ತಡವನ್ನು ಕಂಡುಕೊಳ್ಳುತ್ತಾರೆ. ಯೋಗದಿಂದ ವಿಶ್ರಾಂತಿ ದೊರಕಿ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಆಸನ, ಪ್ರಾಣಾಯಾಮ, ಅರ್ಧಚಕ್ರಾಸನ, ವೀರಭದ್ರಾಸನ, ಪರ್ವತಾಸನ, ವಜ್ರಾಸನ, ಶಶಾಂಕಾಸನ, ಉಷ್ಟ್ರಾಸನ, ಸರ್ವಾಂಗಾಸನ, ಅರ್ಧ ಹಲಾಸನ, ಮಕರಾಸನ, ಭುಜಂಗಾಸನ, ಧನುರಾಸನ, ಶವಾಸನ ಮತ್ತು ಕಪಾಲಭಾತಿ ಕ್ರಿಯೆ. ನಾಡಿಶುದ್ಧಿ, ಉಜ್ಜಯೀ, ಸೂರ್ಯಭೇದನ, ಭಸ್ತಿಕಾ. ಇಪ್ಪತ್ತು ನಿಮಿಷ ಅಭ್ಯಾಸ ಮಾಡಿ. ಆಸನ, ಪ್ರಾಣಾಯಾಮ, ಸಾಧ್ಯವಾದವುಗಳನ್ನು ಅಭ್ಯಾಸ ನಡೆಸಿ. ಗುರುಮುಖೇನ ಕಲಿತು ಅಭ್ಯಾಸ ಮಾಡಿದರೆ ಕ್ಷೇಮ. ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ.
ಥೈರಾಯ್ಡ ಸಮಸ್ಯೆಯಿಂದ ಬಳಲುತ್ತಿದ್ದವರು ಅಸ್ತಮಾ ಹೋಗಲಾಡಿಸಬಹುದು. ಅನುಲೋಮ ವಿಲೋಮ ಪ್ರಾಣಾಯಾಮ ಇದೊಂದು ಉಸಿರಾಟ ವ್ಯವಸ್ಥೆಯನ್ನು ಬಲಗೊಳಿಸಲು ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರುವ ಯೋಗಾಭ್ಯಾಸ ಆಗಿದೆ. ಇತ್ತೀಚಿನ ಜನರು ಬಳಲುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಅದು ಮಾನಸಿಕ ಖಿನ್ನತೆ ಮತ್ತು ಮಾನಸಿಕ ಒತ್ತಡ. ಆದರೆ ಅನುಲೋಮ ವಿಲೋಮ ಪ್ರಾಣಾಯಾಮದಿಂದ ಇಂತಹ ಸಮಸ್ಯೆಗಳು ಹತ್ತಿರಕ್ಕೂ ಸುಳಿಯುವುದಿಲ್ಲ ಎಂದು ಹೇಳುತ್ತಾರೆ. ಅಸ್ತಮಾ ರೋಗಿಗಳಿಗಂತೂ ಇದೊಂದು ಹೇಳಿ ಮಾಡಿಸಿದ ಯೋಗಾಭ್ಯಾಸ ಅಂತಾ ಹೇಳುತ್ತಾರೆ ಡಾ. ಶ್ರೀಧರ ಹೊಸಮನಿ.
ಶವಾಸನ ಈ ಯೋಗಾಭ್ಯಾಸದಲ್ಲಿ ವ್ಯಕ್ತಿಯು ಶವದಂತೆ ಮಲಗಿಕೊಂಡು ದೀರ್ಘವಾಗಿ ಉಸಿರಾಡಬೇಕು. ಇದರಿಂದ ಮೆದುಳು ಮತ್ತು ದೇಹ ಎರಡೂ ಶಾಂತಗೊಳ್ಳುತ್ತವೆ. ಜೊತೆಗೆ ಇದರಲ್ಲಿ ಮಾನಸಿಕ ಏಕಾಗ್ರತೆ ಹೆಚ್ಚಾಗಿ, ಮಾನಸಿಕ ಆರೋಗ್ಯ ಉತ್ತಮಗೊಂಡು ದೇಹದ ಮಾಂಸ ಖಂಡಗಳು ವಿಶ್ರಾಂತಗೊಂಡು ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಬಹುದು. ಯೋಗ ಮಾಡಿ ಅಸ್ತಮಾ ಹೋಗಲಾಡಿಸಿ ಅಂತಾ ಹೇಳುತ್ತಾರೆ ಡಾ. ಶ್ರೀಧರ ಹೊಸಮನಿ.
ಡಾ. ಶ್ರೀಧರ ಹೊಸಮನಿ