ಯೋಗದಲ್ಲಿ ಮುದ್ರೆಗಳಿಂದ ಹಲವು ಲಾಭಗಂಗಾವತಿಯ ವೈದ್ಯ ಎಸ್.ಬಿ.ಹಂದ್ರಾಳ್ ಸಲಹೆ


ಸಂಜೆವಾಣಿ ವಾರ್ತೆ
ಹೊಸಪೇಟೆ:ಮೇ,21- ನಿತ್ಯ ಯೋಗಾಭ್ಯಾಸ ಒಂದು ಉತ್ತಮ ಕ್ರಮವಾಗಿದ್ದು, ಯೋಗದಲ್ಲಿ ಮುದ್ರೆಗಳನ್ನು ಬಳಸುವುದರಿಂದ ಹಲವಾರು ಲಾಭಗಳಿಗೆ ಎಂದು ಪತಂಜಲಿ ಸಂಘದ ವಿಜಯನಗರ ಹಾಗೂ ಗದಗ ಜಿಲ್ಲೆಯ ಉಸ್ತವಾರಿ ಗಂಗಾವತಿಯ ಡಾ.ಎಸ್.ಬಿ.ಹಂದ್ರಾಳ್ ಸಲಹೆ ನೀಡಿದರು.
ನಗರದ ಸ್ವಾತಂತ್ರ್ಯೋತ್ಸವ ಉದ್ಯಾನವನದಲ್ಲಿ ಸ್ಥಳೀಯ ಪತಂಜಲಿ ಯುವ ಭಾರತ ಸಮಿತಿ ಭಾನುವಾರ ಆಯೋಹಿಸಿದ್ದ ತಿಂಗಳ ವಿಶೇಷ ಯೋಗಾ ಶಿಬಿರದಲ್ಲಿ ಮಾತನಾಡಿದರು. ಯೋಗ ಉತ್ತಮ ಸಾಧನವಾಗಿದ್ದು, ಕ್ರಮಬದ್ಧ ಯೋಗಾಭ್ಯಾಸ ದಿಂದ ಹತ್ತಾರು ರೋಗಗಳು ದೂರವಾಗಿಸಿಕೊಳ್ಖಬಹುದು. ಯೋಗದಲ್ಲಿ ಬರುವ ಚಿನ್ಮಯ ಮುದ್ರೆ, ಅಪನ್ನಾವಾಯು ಮುದ್ರೆ ಹಾಗೂ ಪ್ರಾಣ ಮುದ್ರೆ ನಮ್ಮ ದೇಹಕ್ಕೆ ಬಹು ಉಪಯುಕ್ತವಾಗಿವೆ ಎಂದರು.
ಪತಂಜಲಿ ಯುವ ಭಾರತ ರಾಜ್ಯ ಪ್ರಭಾರಿ ಕಿರಣಕುಮಾರ್, ಜಿಲ್ಲಾ ಪ್ರಭಾರಿ ಎಫ್.ಟಿ.ಹಳ್ಳಿಕೇರಿ, ಅಶೋಕ ಚಿತ್ರಗಾರ, ಡಾ.ಹೇಮ ಸುಂದರ, ಫ್ರೀಡಂ ಪಾರ್ಕ್ ಸಂಚಾಲಕ  ಶ್ರೀರಾಮ ಹಾಗೂ ನಗರದ ವಿವಿಧ ಯೋಗಾ ಕೇಂದ್ರದ ಶಿಕ್ಷಕರು, ಶಿಬಿರಾರಾರ್ಥಿಗಳು ಇದ್ದರು.
ಪೂವಭಾವಿ ಸಭೆ: ತಿಂಗಳ ವಿಶೇಷ ಶಿಬಿರದ ಬಳಿಕ ಜೂ.21ರಂದು ನಡೆಯಲಿರುವ ಯೋಗ ದಿನದ ನಿಮಿತ್ತ ಪೂರ್ವಭಾವಿ ಸಭೆ ನಡೆಸಲಾಯಿತು. ವಿವಿಧ ಚರ್ಚೆಗಳ ಬಳಿಕ ಯೋಗ ದಿನದ ಅಂಗವಾಗಿ ನಗರದ ವಿವಿಧ ವಾಡ್೯ಗಳಲ್ಲಿ ಯೋಗ ತರಬೇತಿ ಹಾಗೂ ಶಿಬಿರಗಳನ್ನು ನಡೆಸಲು ನಿರ್ಧರಿಸಲಾಯಿತು.

One attachment • Scanned by Gmail