ಯೋಗಥಾನ್ 2022: ಪೂರ್ವಭಾವಿ ಸಭೆ

ಧಾರವಾಡ,ಜು.17: ಬರುವ ಆಗಸ್ಟ್ 28 ರಂದು ರಾಜ್ಯದಾದ್ಯಂತ ಆಯೋಜಿಸುತ್ತಿರುವ ಬೃಹತ್ ಯೋಗಥಾನ್ 2022 ಅನ್ನು ಯಶಸ್ವಗೊಳಿಸಲು ಜಿಲ್ಲೆಯ ಎಲ್ಲ ಯೋಗ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಯೋಗಥಾನ್ 2022 ರ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ, ಮಾತನಾಡಿದರು.
ಯೋಗಥಾನ್ 2022 ರಲ್ಲಿ ಧಾರವಾಡ ಜಿಲ್ಲೆಯಿಂದ ಸುಮಾರು ಇಪ್ಪತ್ತು ಸಾವಿರ ಯೋಗಪಟುಗಳು ಭಾಗವಹಿಸಬೇಕಾಗುತ್ತದೆ. ಈ ಕುರಿತು ಈಗಾಗಲೇ ಸಭೆ ಜರುಗಿಸಿ, ಸಂಭವಿಸಿದ ಇಲಾಖೆ ಹಾಗೂ ಸಂಘಟನೆಗಳಿಗೆ ಮಾಹಿತಿ ನೀಡಲಾಗಿದೆ. ಯೋಗಾಸನಗಳನ್ನು ಈಗಿನಿಂದಲೇ ತರಬೇತಿ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಸರಶಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಆಯುμï ಅಧಿಕಾರಿ ಬಿ.ಪಿ.ಪೂಜಾರ, ಕವಿವಿ ಎನ್‍ಎಸ್‍ಎಸ್ ಅಧಿಕಾರಿ ಡಾ.ಎಂ.ಬಿ.ದಳಪತಿ, ಪೊಲೀಸ್ ವಸತಿ ಶಾಲೆಯ ಯೋಗ ಶಿಕ್ಷಕ ಪ್ರಕಾಶ ಪವಾಡಶೆಟ್ಟಿ, ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪತಂಜಲಿ ಯೋಗ ಕೇಂದ್ರ, ವಿವಿಧ ಶಾಲಾ ಕಾಲೇಜು, ವಿವಿಗಳ ಪ್ರತಿನಿಧಿಗಳು, ಬಡಾವಣೆ ನಿವಾಸಿಗಳ ಸಂಘದ ಸದಸ್ಯರು, ಯೋಗ ಸಂಘಟನೆಗಳ ಪ್ರಮುಖರು, ಎನ್.ಎಸ್.ಎಸ್, ಯೋಗ ಅಧ್ಯಯನ ವಿಭಾಗದ ಅಧ್ಯಾಪಕರು ಹಾಗೂ ಆಯುಷ್ ಟಿವಿ ಪ್ರತಿನಿಧಿಗಳು ಭಾಗವಹಿಸಿ, ಸಲಹೆ ಸೂಚನೆ ನೀಡಿದರು.