ಯೋಗಥಾನ್ 2022: ಪೂರ್ವಭಾವಿ ಸಭೆ

ಧಾರವಾಡ, ಜು.22: ಬರುವ ಆಗಸ್ಟ್ 28 ರಂದು ರಾಜ್ಯದಾದ್ಯಂತ ಆಯೋಜಿಸುತ್ತಿರುವ ಬೃಹತ್ ಯೋಗಥಾನ್ 2022 ಅನ್ನು ಯಶಸ್ವಗೊಳಿಸಲು ಜಿಲ್ಲೆಯ ಎನ್ ಎಸ್ ಎಸ್ ಹಾಗೂ ಎನ್ ಸಿ ಸಿ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸುವುದು ಮುಖ್ಯವಾಗಿದೆ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಯೋಗಥಾನ್ 2022 ರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಯೋಗಥಾನ್ 2022 ರಲ್ಲಿ ಧಾರವಾಡ ಜಿಲ್ಲೆಯಿಂದ ಸುಮಾರು ಇಪ್ಪತ್ತು ಸಾವಿರ ಯೋಗಪಟುಗಳು ಭಾಗವಹಿಸಬೇಕಾಗುತ್ತದೆ. ಈ ಕುರಿತು ಈಗಾಗಲೇ ಸಭೆ ಜರುಗಿಸಿ, ಸಂಭವಿಸಿದ ಇಲಾಖೆ ಹಾಗೂ ಸಂಘಟನೆಗಳಿಗೆ ಮಾಹಿತಿ ನೀಡಲಾಗಿದೆ. ಯೋಗಾಸನಗಳನ್ನು ಈಗಿನಿಂದಲೇ ತರಬೇತಿ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.

ಅಂತರಾಷ್ಟ್ರೀಯ ಯೋಗದಿನದಂದು ಮಾಡುವ ಯೋಗ ಆಸನಗಳನ್ನೇ ಯೋಗಥಾನ್‍ದಲ್ಲಿಯೂ ಮಾಡಲು ತಿಳಿಸಲಾಗಿದೆ. ಆದ್ದರಿಂದ ಯೋಗ ಪಠ್ಯ ಲಭ್ಯವಿರುವದರಿಂದ ಮುಂದಿನ ಭಾನುವಾರದಿಂಲೇ ಯೋಗ ಪ್ರ್ಯಾಕ್ಟೀಸ್ ಮಾಡಬೇಕೆಂದು ಅವರು ಹೇಳಿದರು.

ಯೋಗಥಾನ್ 2022 ನ್ನು ಯಶಸ್ವಿಯಾಗಿ ಆಯೋಜಿಸಲು ಸಂಘಟನಾ ಸಮಿತಿ, ವೇದಿಕೆ ಮತ್ತು ಕಾರ್ಯಕ್ರಮ ಸಮಿತಿ, ಪ್ರಚಾರ ಸಮಿತಿ, ಉಪಹಾರ, ಬ್ಯಾರಿಕೆಡ್, ಎಕ್ಸಿಟ್ ಹಾಗೂ ಎಂಟನ್ರ್ಸ್‍ಗಳ ಭದ್ರತೆಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಎಲ್ಲರೂ ಆಸಕ್ತಿಯಿಂದ ಕ್ರಿಯಾಶೀಲವಾಗಿ ಭಾಗವಿಸಬೇಕು ಎಂದರು.
ಎನ್‍ಎಸ್‍ಎಸ್, ಎನ್‍ಸಿಸಿ, ಯೋಗ ಸಂಸ್ಥೆಗಳು, ವಿವಿಧ ಸಾರ್ವಜನಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಯೋಗಥಾನ್‍ದಲ್ಲಿ ಭಾಗವಹಿಸಲು ಅನುವು ಆಗುವಂತೆ ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆ ಮಾಡಲು ಯೋಚಿಸಲಾಗಿದೆ. ಯೋಗಥಾನ್‍ದಲ್ಲಿ ಎಲ್ಲ ಪ್ರೌಢಶಾಲಾ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಕ್ರಮವಹಿಸಬೇಕೆಂದು ಅವರು ಸೂಚಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಸರಶಟ್ಟಿ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.

ಸಭೆಯಲ್ಲಿ ಆಯುμï ಟಿವಿ ಕೋಆಡಿನೆಟರ್ ಶ್ರೀನಿವಾಸಮೂರ್ತಿ ಕೊರ್ಲಹಳ್ಳಿ, ಕರ್ನಾಟಕ ಯೋಗಾಸನ ಕ್ರೀಡಾಸಂಸ್ಥೆ ಹಾಗೂ ಪತಂಜಲಿ ಯೋಗಾಪೀಠದ ರಾಜ್ಯಧ್ಯಕ್ಷ ಭವಾರಲಾಲ್ ಆರ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ, ಕೃಷಿ ವಿಶ್ವ ವಿದ್ಯಾಲಯದ ಸ್ಥಳನಿಯುಕ್ತಿ ಕೋಶಧಿಕಾರಿ ಡಾ.ಅರವಿಂದ ಕುಮಾರ, ಕವಿವಿ ಎನ್‍ಎಸ್‍ಎಸ್ ಅಧಿಕಾರಿ ಡಾ.ಎಂ.ಬಿ.ದಳಪತಿ, ಪೆÇಲೀಸ್ ವಸತಿ ಶಾಲೆಯ ಯೋಗ ಶಿಕ್ಷಕ ಪ್ರಕಾಶ ಪವಾಡಶೆಟ್ಟಿ, ಆಯುμï ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪತಂಜಲಿ ಯೋಗ ಕೇಂದ್ರ, ವಿವಿಧ ಶಾಲಾ ಕಾಲೇಜು, ವಿವಿಗಳ ಪ್ರತಿನಿಧಿಗಳು, ಯೋಗ ಸಂಘಟನೆಗಳ ಪ್ರಮುಖರು, ಎನ್.ಎಸ್.ಎಸ್, ಯೋಗ ಅಧ್ಯಯನ ವಿಭಾಗದ ಅಧ್ಯಾಪಕರು ಹಾಗೂ ಆಯುμï ಟಿವಿ ಪ್ರತಿನಿಧಿಗಳು ಭಾಗವಹಿಸಿ, ಸಲಹೆ ಸೂಚನೆ ನೀಡಿದರು.