ಕಲಬುರಗಿ:ಜೂ.19: ಯೋಗ ರೋಗ ಬರೋದನ್ನು ತಡೆಗಟ್ಟುತ್ತದೆಯಲ್ಲದೇ ಬಂದಿರುವ ರೋಗ ದೂರ ಮಾಡುತ್ತದೆ ಎಂದು ಹಿರಿಯ ತಜ್ಞ ವೈದ್ಯರು ಹಾಗೂ ಸಾಹಿತಿಗಳಾದ ಡಾ.ಎಸ್.ಎಸ್. ಗುಬ್ಬಿ ಹೇಳಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಸೇಡಂ ರಸ್ತೆಯ ಮೆಹತಾ ಲೇಔಟ್ ದಲ್ಲಿರುವ ವಂದನಾ ಯೋಗ ಮತ್ತು ಆಧ್ಯಾತ್ಮಿಕ ಕೇಂದ್ರದಲ್ಲಿ ಆಯೋಜಿಸಲಾದ ಯೋಗದಿಂದ ಆರೋಗ್ಯಕರ ಮನಸ್ಸು ಕುರಿತು ಅನುಭಾವ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಗದಿಂದ ದೈಹಿಕ ಸದೃಢತೆ ಜತೆ ಮಾನಸಿಕತೆ ದೂರವಾಗುತ್ತದೆ. ಪ್ರಮುಖವಾಗಿ ಮನಸ್ಸು ಆಧ್ಯಾತ್ಮಿಕ ಹೊಂದಿ ಸದಾ ಶಾಂತಿಯಿಂದ ಇರುವಂತೆ ಮಾಡುತ್ತದೆ ಎಂದು ಡಾ.ಗುಬ್ಬಿ ವಿವರಣೆ ನೀಡಿದರು.
ನಿಯಮಿತವಾಗಿ ಮೂರೋತ್ತು ಊಟ ಮಾಡಿ, ಸಾಕಷ್ಟು ನೀರು ಕುಡಿಯಿರಿ. ದಿನಕ್ಕೆ 6 ಲೀಟರ್ ನೀರನ್ನಾದರೂ ಕುಡಿಯಬೇಕು. ಕಣ್ತುಂಬ ನಿದ್ದೆ ಮಾಡಿ, ದಿನಾಲು ಯೋಗ ಮಾಡಿದರೆ ಯಾವ ರೋಗವು ಹತ್ತಿರ ಸುಳಿಯದು ಎಂದು ಡಾ. ಗುಬ್ಬಿ ಮಾರ್ಮಿಕವಾಗಿ ಹೇಳಿದರು.
ಖ್ಯಾತ ಹೃದಯ ತಜ್ಞ ಡಾ.ವೀರಾಜ್ ಕಲಬುರಗಿ ಸಹ ಕಾರ್ಯಕ್ರಮಕ್ಕೆ ಚಾಲನೆ, ವಿದ್ಯಾರ್ಥಿ ದೆಸೆಯಿಂದ ಲೇ ಮಧ್ಯಪಾನ, ಸಿಗರೇಟ್ ಸೇವನೆ ಹಾಗೂ ಸಾತ್ವಿಕ ಆಹಾರ ಬಿಟ್ಟು ಇನ್ನೇನು ಫಿಜ್ಜಾ ಮತ್ತಿತರ ತಿನ್ನಿಸುಗಳಿಂದ ಹೃಯಯಾಘಾತ ಮತ್ತಿತರ ರೋಗಗಳಿಗೆ ಆವ್ಹಾನ ನೀಡಿದಂತೆ ಎಂದು ವಾಸ್ತವಿಕ ವಾಗಿ ನುಡಿದರು.
ನಿವೃತ್ತ ಡಿಸ್ಟ್ರಿಕ್ಟ್ ಸರ್ಜನ್ ಡಾ. ಇಟಗಿ ಮಾತನಾಡಿ, ಗಂಟೆಗಟ್ಟಲೆ ಯೋಗ ಮಾಡುವುದರಕ್ಕಿಂತ ಸರಳ ಹಾಗೂ ಸಂಕ್ಷಿಪ್ತವಾಗಿ ಕೆಲವು ಆಸನಗಳನ್ನಾದರೂ ಮೈಗೂಡಿಸಿಕೊಳ್ಳಬೇಕೆಂದರು.
ವಂದನಾ ಯೋಗ ಮತ್ತು ಆಧ್ಯಾತ್ಮಿಕ ಕೇಂದ್ರದ ಸ್ಥಾಪಕರು, ಯೋಗ ಮತ್ತು ಆಧ್ಯಾತ್ಮಿಕತೆಯಲ್ಲಿ ಪರಿಣಿತ ಹೊಂದಿರುವ ಸವಿತಾ ಯರಗೋಳ ಮಾತನಾಡಿ, ಯೋಗ ಒಂದು ಸಾಧನ. ಯೋಗವು ನಿತ್ಯದ ದಿನಚರಿಯ ಒಂದು ಭಾಗವಾಗಬೇಕು. ಪ್ರಮುಖವಾಗಿ ಯೋಗದ ಜತೆಗೆ ಆಧ್ಯಾತ್ಮಿಕತೆ ಮೈಗೂಢಿಸಿಕೊಂಡಲ್ಲಿ ಮಾನಸಿಕ ರೋಗ ನಿವಾರಿಸಿಕೊಳ್ಳ ವಿಧಾನಗಳನ್ನು ಎಳೆ- ಎಳೆಯಾಗಿ ವಿವರಿಸಿದರು.
ಅಂಜನಾದೇವಿ, ಪುನೀತ ಕುಲಕರ್ಣಿ, ಶಿವಲೀಲಾ ಪಾಟೀಲ್ ಇತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿ, ತಮ್ಮ ಕಾಯಿಲೆ ಬಗ್ಗೆ ಎಲ್ಲ ಕಡೆ ತೋರಿಸಿ, ಸಾಕಷ್ಟು ಮೆಡಿಸಿನ್ ತೆಗದುಕೊಂಡು ಮಾನಸಿಕವಾಗಿ ಕುಗ್ಗಿಲಾಗಿತ್ತು. ಆದರೆ ಸವಿತಾ ಯರಗೋಳ ಅವರ ಬಂದ ನಂತರ ಎಲ್ಲ ಯೋಗ ಅಳವಡಿಸಿಕೊಂಡು ಆರೋಗ್ಯವಾಗಿಸಿಕೊಂಡು ಈಗ ಎಲ್ಲ ಮೆಡಿಸಿನ್ ತೊರೆದು ಸಂಪೂರ್ಣ ಗುಣಮುಖತೆ ಹೊಂದಲಾಗಿದೆ ಎಂದು ತಮ್ಮ ಅನುಭಾವ ಹಂಚಿಕೊಂಡರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ ಮರಗೋಳ ಸೇರಿದಂತೆ ಮುಂತಾದವರಿದ್ದರು. ಮಹೇಶ ಯರಗೋಳ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಂವಾದ ನಡೆಯಿತು.