ಯೋಗಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ:ಎಂವೈಪಾ

ಕರಜಗಿ:ಜ.22:ಯೋಗಕ್ಕೆ ಬಹಳ ಮಹತ್ವದ ಸ್ಥಾನವಿದೆ. ಯೋಗದಲ್ಲಿ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಅನೇಕ ಯೋಗ ಸಾಧಕರು ಸಾಧನೆ ಮಾಡಿದ್ದಾರೆ ಎಂದು ಶಾಸಕ ಎಂ ವೈ ಪಾಟೀಲ ಹೇಳಿದರು.
ಅವರು ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಅಚಲ ಸನಾತನ ವಿಶ್ವ ಆಧ್ಯಾತ್ಮಿಕ ವಿಜ್ಞಾನ ಯೋಗಾಶ್ರಮದಲ್ಲಿ 41 ದಿನಗಳ ಪಯರ್ಂತ ಕೈಗೊಂಡ ಕುಂಡಲಿನಿ ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯೋಗದಲ್ಲಿ ಸಾಧನೆ ಮಾಡುವುದು ಸಾಮಾನ್ಯ ಮಾತಲ್ಲ.41 ದಿನಗಳವರೆಗೆ ಮೂರು ಜನ ತಾಯಂದಿರು ಆಹಾರ ಗಾಳಿ ಬೆಳಕು ಇಲ್ಲದೆ ತುಂಬಾ ಕಠಿಣವಾದ ಕುಂಡಲಿನಿ ಯೋಗ ಮಾಡಿದ್ದಾರೆ.
ಇದೊಂದು ಪವಾಡವೇ ಆಗಿದೆ.ಅವರೇನೂ ತಮಗಾಗಿ ಈ ಸಾಧನೆ ಮಾಡಿಲ್ಲ.ಲೋಕ ಕಲ್ಯಾಣಕ್ಕಾಗಿ ನಾವೆಲ್ಲರೂ ಒಳ್ಳೆಯ ರೀತಿಯಿಂದ ಬಾಳಿ ಬದುಕಬೇಕೆಂಬ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದ್ದಾರೆ.ನಮಗೆಲ್ಲರಿಗೂ ಹಿರಿಯರ ಗುರುಗಳ ಆಶೀರ್ವಾದ ಮಾರ್ಗದರ್ಶನ ಬಹಳ ಅವಶ್ಯಕವಾಗಿದೆ.ಜೀವನದಲ್ಲಿ ನಾವು ದಾರಿ ತಪ್ಪಿದಾಗ ನಮ್ಮನ್ನು ತಿದ್ದಿ ನಾವು ಒಳ್ಳೆಯ ಮಾರ್ಗದಲ್ಲಿ ನಡೆಯಲು ಗುರುಗಳ ಆಶೀರ್ವಾದ ಬೇಕು ಎಂದು ಹೇಳಿದರು.ಚಿನ್ಮಯಗಿರಿಯ ಷ ಬ್ರ ಸಿದ್ದರಾಮ ಶಿವಾಚಾರ್ಯರು ಸುಕ್ಷೇತ್ರ ಗೊಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ನಾಗಣಸೂರದ ಮ ನಿ ಪ್ರ ಅಭಿನವ ಬಸವಲಿಂಗ ಮಹಾಸ್ವಾಮಿಗಳು ಕೇದಾರ ಶ್ರೀಗಳು ಗಂಗಾನ ಕರೇಸಿದ್ದ ಮಹಾರಾಯರು ಶಿವಾನಂದ ಸ್ವಾಮೀಜಿ ನಂಜುಂಡಯ್ಯಾ ಸ್ವಾಮಿ ಸಾನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ಕುಂಡಲಿನಿ ಯೋಗ ಮಾಡಿದ ಸಕ್ಕುಬಾಯಿ ಅಲ್ಲಾಪೂರ ರುಕ್ಮಿಣಿ ಚಣೇಗಾಂವ ಶಾಂತಾಬಾಯಿ ಬಿರಾದಾರ ಯಲ್ಲಮ್ಮ ದೇವಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಹಾದೇವಪ್ಪ ಕರೂಟಿ
ಗ್ರಾ, ಪಂ ಮಾಜಿ ಅಧ್ಯಕ್ಷ ರಮೇಶ ಬಾಕೆ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಪುಂಡಲೀಕ ಕಟ್ಟಿ ಮಲ್ಲಿಕಾರ್ಜುನ ಚಣೇಗಾಂವ ಸಿದ್ರಾಮಪ್ಪ ಹಿರೇಕುರುಬರ ಚಂದ್ರಶೇಖರ ಹೊಸೂರಕರ ತುಕಾರಾಮ ಚಣೇಗಾಂವ ಅಣ್ಣಾರಾವ ಮುಜಗೊಂಡ ಕಲ್ಲಪ್ಪ ಅಲ್ಲಾಪೂರ ಶಾಮರಾವ ಲಾಳಸಂಗಿ ತಿರುಪತಿ,
ಅಲ್ಲಾಪೂರ ಶ್ರೀಶೈಲ ಭುಯ್ಯಾರ ವಿಠ್ಠಲ ಹಳಿಮನಿ ಪೀರಪ್ಪ ನಿವರಗಿ ಸಂಜೀವಕುಮಾರ ನನ್ನಾಜಿ ಮಲ್ಲಪ್ಪ ನಿವರಗಿ ಶ್ರೀಕಾಂತ ನಿವರಗಿ ಬಸವರಾಜ ಅಳ್ಳಗಿ ವಿಠ್ಠಲ ಚೋಪಡೆ ಇತರರಿದ್ದರು