ಯೇಸುವಿನ ಸಂದೇಶಗಳು ಸಾರ್ವಕಾಲಿಕ ಸತ್ಯ: ಸ್ಟೀಫನ್ ಶಿರೋಮಣಿ

ಇಂಡಿ: ಡಿ.26:ಬೈಬಲಿನಲ್ಲಿ ಉಲ್ಲೇಖಿಸಿದಂತೆ ಯೇಸುವಿನ ಸಂದೇಶಗಳು ಆಳವಾದ ನಂಬಿಕೆ ಆತ್ಮವಿಶ್ವಾಸ ಸತ್ಯದ ಕುರಿತು ನಂಬಿಕೆ ಇಂದಿಗೂ ಸರ್ವಕಾಲಿಕ ಸತ್ಯ ಎಂದು ಆರ್.ಡಿ.ಸಂಸ್ಥೆಯ ಅಧ್ಯಕ್ಷರಾದ ಸ್ಟೀಫನ್ ಶಿರೋಮಣಿ ಹೇಳಿದರು.

ಪಟ್ಟಣದ ಆಯ್,ಎಂ ಎಸ್ ಚರ್ಚನಲ್ಲಿ ಕ್ರಿಸ್ ಮಸ್ ಹಾಗೂ ಉಜ್ಜೀವನಕೂಟ ಅಂಗವಾಗಿ ಮಾತನಾಡಿದ ಅವರು ಜಗತ್ತಿಗೆ ಶಾಂತಿ ಸಂದೇಶ ಸಾರಿದ ಯೇಸುಕ್ರಿಸ್ತ ತನ್ನನ್ನು ಶಿಲುಬೆಗೆ ಏರುಸಿದಾಗಲೂ ಅವರು ತಿಳಿಯದೆ ಏನೂ ಮಾಡುತ್ತಿದ್ದಾರೆ ಎಂದು ಅರಿಯರು ಅವರ ಬಗ್ಗೆ ಕನಿಕರ ತೋರಿದ ಕರುಣಾಮಯಿ ಎಂದು ಹೇಳಿದರು. ದೇವರ ಭಯವೇ ಜ್ಞಾನಕ್ಕೆ ಮೂಲ ದೇವರ ಬಗ್ಗೆ ವಿಶ್ವಾಸ ಇಡುವವರಿಗೆ ಎಲ್ಲವೂ ಒಳ್ಳೇಯದಾಗುತ್ತದೆ ಆದ್ದರಿಂದ ಯೇಸುವನ್ನು ನಂಬಿದವರು ಸದಾ ಧಾನ ,ಧರ್ಮ, ದೀನ ಬಡವರಿಗೆ ಪರೋಕಾರ ಮಾಡುವ ಮೂಲಕ ಪುಣ್ಯ ಕಟ್ಟಿಕೊಳ್ಳಬೇಕು.ಪಾಪಕ್ಕೆ ಸಂಬಳ ಮರಣ ಎಂದು ಯೇಸು ನುಡಿದಿದ್ದಾರೆ. ಯೇಸುವಿನ ಜೀವನ ಪವಾಡ ಮಾನವೀಯ ಕಾಳಜಿ ಸಹಜೀವಿಗಳಿಗೆ ಅನುಕಂಪ ಪ್ರೀತಿ ಆಧಾರ ದೇವನೆಡೆಗೆ ದೃಷ್ಠಿಯನ್ನು ತಿರುಗಿಸುವ ಗುರಿ ತೋರಿಸುತ್ತದೆ ಎಂದರು. ಜೀಸಸ್ ಅಲೌಕೀಕ ಚಮತ್ಕಾರಗಳು ಹಲವಾರು ಮಸಣಯಾತ್ರೆಯಲ್ಲಿ ಸಾಗಿದ್ದ ಶವವನ್ನು ಜೀವಂತಗೋಳಿಸಿದ್ದಾರೆ. ನಂತರ ಮಿತ್ರ ಮರಣಿಸಿದಾಗ ಆತನನ್ನು ಬದುಕಿಸಿದ್ದು ಹೀಗೆ ಅಲೌಕೀಕ ಪರಿಣಾಮ ಸಾಕಷ್ಟು, ಎಂದು ಹೇಳಿದರು.
ಆಯ್.ಎಂ .ಎಸ್ ಚರ್ಚಿನ ಪಾದ್ರಿ ರಾಜಶೇಖರ ದಿನಕರನ್ ಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.
ಆಯ್.ಎಂ ಎಸ್ ಚರ್ಚಿನ ಪಾದ್ರಿ ರಾಜಶೇಖರ ದಿನಕರನ್, ಆರ್.ಡಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಡಿ.ಶಿರೋಮಣಿ, ರೂಬಿ ದಿನಕರನ್,ಪೂರ್ಣೀಮಾ ಶಿರೋಮಣಿ, ಕ್ರೀಸ್ ಜ್ಯೋಯಲ್, ಕ್ರೀಸ್ ನೋಯೇಲ್,ಕ್ರೀಸ್ ಏಂಜೀಲ್, ಮ್ಯಾಥ್ಯೂ ಹಾಗೂ ಆಯ್,ಸಿ ಪೂಜಾರ ,ಶರಣಬಸಪ್ಪ.ಎನ್ ಕೆ ಸೇರಿದಂತೆ ಅನೇಕರು ನೂರಾರು ಕ್ರೀಸ್ ವಿಶ್ವಾಸಿಗಳಿದ್ದರು.