ಯೂರಿಯಾ ಪೂರೈಕೆಗೆ ಜಯವಂತರಾವ್ ಆಗ್ರಹ

ರಾಯಚೂರು.ಸೆ.16- ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಬೆಳೆಗೆ ಯೂರಿಯಾ ರಸಗೊಬ್ಬರದ ಕೊರತೆಯಾಗದಂತೆ ಸರ್ಕಾರದ ಗಮನ ಸೆಳೆಯುವಂತೆ ನಾಫೆಡ್ ನಿರ್ದೇಶಕ ಪತಂಗೆ ಜಯವಂತ ರಾವ್ ಒತ್ತಾಯಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿರುವ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಪತ್ರ ಬರೆದು ಒತ್ತಾಯಿಸಿರುವ ಅವರು, ಉತ್ತಮ ಮಳೆಯಾಗಿದ್ದು, ರಸಗೊಬ್ಬರದ ಕೊರತೆ ಎದುರಾಗಿದೆ. ಮುಂದಿನ ವಾರ ಇಫ್ಯೋ ಕಂಪನಿಯ ಎರಡು ವೆಸೆಲ್ ತಮಿಳುನಾಡಿನ ಕರೈಕಲ್ ಬಂದವರಿಗೆ ಬರಲಿವೆ. ಹಾಗಾಗಿ, ರಸಗೊಬ್ಬರ ಖಾತೆ ಸಚಿವರ ಜೊತೆ ಚರ್ಚಿಸಿ, ಜಿಲ್ಲೆಗೆ 2 ರೇಕ್ ಯೂರಿಯಾ ಪೂರೈಕೆಗೆ ವ್ಯವಸ್ಥೆ ಮಾಡಲು ಕೋರಿದ್ದಾರೆ. ರೈತರ ಉತ್ತಮ ಬೆಳೆಗೆ ಗೊಬ್ಬರ ಪೂರೈಕೆ ಮಾಡಲು ಕ್ರಮ ಜರುಗಿಸಲು ಜಯವಂತ ರಾವ್ ಕೋರಿದ್ದಾರೆ.