ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಲೋನ್ ಪಾಯಿಂಟ್ ಉದ್ಘಾಟನೆ

ಕಲಬುರಗಿ:ಮಾ.29: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಛೇರಿ ಕಲಬುರಗಿ ವತಿಯಿಂದ ರಿಟೇಲ್ ಲೋನ್ ಪಾಯಿಂಟ್ ಹಾಗೂ ಎಂ.ಎಸ್.ಎಂ.ಇ. ಲೋನ್ ಪಾಯಿಂಟ್‍ನ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಉದ್ಘಾಟಕರಾಗಿ ಶ್ರೀ. ಮ.ನಿ.ಪ್ರ. ಸ್ವರೂಪಿ ಗುರುಪಾದಲಿಂಗ ಶಿವಯೋಗಿಗಳು ಸುಕ್ಷೇತ್ರ ಮುತ್ಯಾನ ಬಬಲಾದ ಅವರು ಆಗಮಿಸಿ ಆಶೀರ್ವದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀ ಅರವಿಂದ ಹೆಗಡೆಯವರು ಮಾತನಾಡಿ, ಈ ಲೋನ್ ಪಾಯಿಂಟ್‍ಗಳು ಸಾಲ ಮಂಜೂರಾತಿಯಲ್ಲಿ ವೇಗ ನೀಡುವುದರ ಜೊತೆಗೆ ಈ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿಯಾಗಲಿವೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಕೆಕೆಸಿಸಿಐನ ಅಧ್ಯಕ್ಷರಾದ ಪ್ರಶಾಂತ ಮಾನಕರ್ ಅವರು ಮಾತನಾಡಿ, ಈ ಭಾಗದ ಜನರು ಲೋನ್ ಪಾಯಿಂಟ್‍ಗಳ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಕೈಗಾರಿಕಾ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಲೋನ್ ಪಾಯಿಂಟ್‍ಗಳ ಮುಖ್ಯಸ್ಥರಾದ ಶ್ರೀ ಪ್ರವೀಣಕುಮಾರ್ ಹಾಗೂ ಶ್ರೀ ರಾಜೇಂದ್ರ ರವರು ಯೂನಿಯನ್ ಬ್ಯಾಂಕ್‍ನ ಸಾಲ ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಪ್ರಾದೇಶಿಕ ಉಪ- ಮುಖ್ಯಸ್ಥರಾದ ಶ್ರೀ ಎಸ್.ಜಿ. ರಾಜಕುಮಾರ ರವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ವ್ಯವಸ್ಥಾಪಕರುಗಳಾದ ಶ್ರೀ ಪುನೀತ ತ್ರಿವೇದಿ, ಶ್ರೀ ಎಸ್. ಪ್ರಶಾಂತ, ಶ್ರೀ ಶಶಿಧರ, ಶ್ರೀ ಮಹಮ್ಮದ್, ಶ್ರೀ ನಿರ್ಮಲಬಾಬು, ಹಿರಿಯ ವ್ಯವಸ್ಥಾಪಕರುಗಳಾದ ಶ್ರೀ ಸತೀಶ ಜೋಶಿ, ಶ್ರೀ ಪ್ರಮೋದ ಕಮತಿ, ಶ್ರೀ ಸಂತೋಷ, ಶ್ರೀ ವಿನೋದ ಬಿದರಿ ಹಾಗೂ ಇತರೆ ಸಿಬ್ಬಂದಿ ವರ್ಗದವರು ಮತ್ತು ಗ್ರಾಹಕ ಮಿತ್ರರು ಭಾಗವಹಿಸಿದ್ದರು.