ಯೂನಿಟಿ ಬಿಲ್ಡಿಂಗ್​ನಿಂದ ಹಾರಿಮಹಿಳಾ ಮ್ಯಾನೇಜರ್ ಆತ್ಮಹತ್ಯೆ

ಬೆಂಗಳೂರು,ಏ.6-ನಗರದ ಯೂನಿಟಿ ಬಿಲ್ಡಿಂಗ್​ನಿಂದ ಹಾರಿ ಮಹಿಳಾ ಮ್ಯಾನೇಜರ್ ರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಸಂಜೆ ನಡೆದಿದೆ.
ಇಂಡಿಯನ್ ಆಯಿಲ್​ ಕಾರ್ಪೊರೇಷನ್​​ನ ಡಿವಿಷನಲ್​ ಆಫೀಸ್​ನ ಮ್ಯಾನೇಜರ್​​ ಅಪರ್ಣ ದೇವಿ‌ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಡಿವಿಷನಲ್​ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಪರ್ಣ ನಾಲ್ಕನೇ ಮಹಡಿಯಲ್ಲಿರುವ ಕಚೇರಿಯ ಕಿಟಕಿ ತೆಗೆದಿದ್ದಾರೆ. ಇದನ್ನು ಗಮನಿಸಿದ ಕಚೇರಿ ಸಿಬ್ಬಂದಿ ತಡೆಯಲು ಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲಾಗಲ್ಲೇ ಅಪರ್ಣ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಎಸ್​​.ಜೆ. ಪಾರ್ಕ್​ ಠಾಣೆ ಪೊಲೀಸರು ಭೇಟಿ ನೀಡಿದ್ದು ಮೃತ ಮಹಿಳೆಗೆ ಸಂಬಂಧಿಸಿದ ಮೊಬೈಲ್​ ಹಾಗೂ ಡೈರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂಬ ಪ್ರಶ್ನೆಗೆ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಿದೆ.