ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.25 ತಾಲೂಕಿನ ನಂದಿಪುರ ಕ್ಲಸ್ಟರ್ ಎಂಟು ಶಾಲೆಗಳಲ್ಲಿ ಮತ್ತು ಬ್ಯಾಸಿಗೆದೇರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಅಮೆರಿಕಾ ಮೂಲದ ಟೆಕ್ಸೋಸ್ ಇನ್ವೆಸ್ಟ್ಮೆಂಟ್ ಕಂಪನಿಯ ಬೆಂಗಳೂರು ಬ್ರಾಂಚ್ ನ ಪ್ರವೀಣ್ ಮತ್ತು ಕುಟುಂಬದವರು ಹಾಗೂ ಯೂತ್ ಸೇವಾ ಸಂಸ್ಥೆಯ ಸಹಯೋಗದಲ್ಲಿ ಕಲಿಕಾ ಸಾಮಾಗ್ರಿಗಳಾದ ನೋಟ್ ಪುಸ್ತಕ,ಸ್ಕೂಲ್ ಬ್ಯಾಗ್,ಪೆನ್ನು,ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಗಳನ್ನು ಸ. ಸು.400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು.
ಯೂತ್ ಸೇವಾ ಸಂಸ್ಥೆಯ ವರುಣ್ ಅವರು ಮಾತನಾಡಿ ಬಡ ಜನರ ಮಕ್ಕಳ ಶಿಕ್ಷಣ ಪ್ರಗತಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಟೆಕ್ಸಾಸ್ ಇನ್ವೆಸ್ಟ್ಮೆಂಟ್ ಸಂಸ್ಥೆಯ ಪ್ರವೀಣ್ ದಂಪತಿಗಳ ಸಹಕಾರದಿಂದ ನಮ್ಮ ಯೂತ್ ಸೇವಾ ಸಂಸ್ಥೆಯು ಹಲವು ವರ್ಷಗಳಿಂದ ರಾಜ್ಯದಲ್ಲಿ ಬೇರೆ ಬೇರೆ ಕಡೆ ಇರುವ ಶಾಲೆಗಳ ಅವಶ್ಯಕವಿರುವ ಬಡ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸುತ್ತಾ ಬಂದಿರುವುದಾಗಿ ಶಾಲೆಯ ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯಲ್ಲಿ ಪ್ರಗತಿ ಹೊಂದಿ ಉನ್ನತ ಸ್ಥಾನ ಅಲಂಕಾರಿಸಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದರು.
ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಹೊಸಳ್ಳಿ ಬಸಪ್ಪ ಮಾತನಾಡಿ ಶಿಕ್ಷಣ ಅಭಿವೃದ್ದಿ ಆದರೆ ದೇಶ ಅಭಿವೃದ್ದಿ ಆದಂತೆ ಎಂಬುದನ್ನು ಅರಿತ ಟೆಕ್ಸಾಸ್ ಇನ್ವೆಸ್ಟಮೆಂಟ್ ಸಂಸ್ಥೆ ಪ್ರವೀಣ್ ಕುಟುಂಬದವರು ಸಹಕಾರದೊಂದಿಗೆ ಯೂತ್ ಸೇವಾ ಸಂಸ್ಥೆಯವರು ನೀಡುತ್ತಿರುವ ಈ ಕಲಿಕಾ ಸಾಮಾಗ್ರಿಗಳು ಬಡ ಮಕ್ಕಳ ಶಿಕ್ಷಣ ಪ್ರಗತಿಗೆ ಪೂರಕವಾಗಿದ್ದು ನಮ್ಮಲ್ಲಿ ಹಲವು ಜನ ಶ್ರಿಮಂತರಿದ್ದರು ಸಹ ಇಂತಹ ಸೇವಾ ಮನೋಭಾವ ಹೊಂದಿರುವವರು ಸಿಗುವುದು ತೀರಾ ವಿರಳ ಇವರ ಸೇವಾ ಕಾರ್ಯ ವಿದ್ಯಾರ್ಥಿಗಳ ಕಲಿಕೆಗೆ ಸ್ಫೂರ್ತಿದಾಯಕವಾದದ್ದು ಶ್ಲಾಘನೀಯವಾದದ್ದು ಎಂದರು.
ಈ ವೇಳೆ ಯೂತ್ ಸೇವಾ ಸಂಸ್ಥೆಯ ಸತ್ಯಂ,ವಿಕ್ರಂ, ಮುಖ್ಯ ಶಿಕ್ಷಕಿ ಭಾಗ್ಯದೇವಿ,ಎಸ್. ಡಿ.ಎಂ.ಸಿ.ಅದ್ಯಕ್ಷ ಎಸ್ ಗುಡ್ಡಪ್ಪ,ಮುಖಂಡ ಹರಿಶ್ಚಂದ್ರಪ್ಪ,ಶಿಕ್ಷಕರಾದ ಶ್ರೀನಿವಾಸ ಶೆಟ್ಟಿ, ತಾವರೆನಾಯ್ಕ್, ಬಿ ಭಾರತಿ,ವಿದ್ಯಾವತಿ,ಕೊಟ್ರೇಶ್ ಇತರ ಶಿಕ್ಷಕರು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಭುವನೇಶ್ವರಿ ಪ್ರಾರ್ಥಿಸಿದರು.ಶ್ರೀನಿವಾಸ ಶೆಟ್ಟಿ ನಿರೂಪಿಸಿದರು.ಶಿವಣ್ಣ ವಂದಿಸಿದರು.