ಯೂತ್ ಫಾರ್ ಬಡ್ರ್ಸ್ ಅಭಿಯಾನಕ್ಕೆ ಚಾಲನೆ

ಹುಬ್ಬಳ್ಳಿ,ಮಾ29: ಭಾರತೀಯ ಜನತಾ ಪಕ್ಷ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ವಾರ್ಡ ಸಂಖ್ಯೆ 57, ವೀರಾಪುರ ಓಣಿಯಲ್ಲಿ ಹು-ಧಾ ಪೂರ್ವ ಯುವ ಮೋರ್ಚಾ ಉಪಾಧ್ಯಕ್ಷ ಪ್ರವೀಣ ಕುಬಸದ ಇವರ ನೇತೃತ್ವದಲ್ಲಿ “ಯೂತ್ ಫಾರ್ ಬಡ್ರ್ಸ” ಎಂಬ ವಿಶಿಷ್ಟ ಹಾಗೂ ವಿನೂತನ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬೇಸಿಗೆಯ ಸಂದರ್ಭದಲ್ಲಿ ಪಕ್ಷಿಗಳಿಗೆ ನೀರು ಸಿಗುವುದು ಕಷ್ಟಕರವಾಗಿರುವುದರಿಂದ ಮನೆ ಮನೆಗಳಿಗೆ ತೆರಳಿ ಪ್ಲಾಸ್ಟಿಕ್ ಟ್ರೆ ಹಾಗೂ ದವಸ ಧಾನ್ಯಗಳನ್ನು ವಿತರಿಸಲಾಯಿತು.

ಹು-ಧಾ ಪೂರ್ವ ಮಂಡಲದ ಅಧ್ಯಕ್ಷರಾದ ಪ್ರಭು ನವಲಗುಂದಮಠ ರವರು ಮಾತುನಾಡತ್ತ ನಿಮ್ಮ ನಿಮ್ಮ ಮನೆಯ ಮುಂದೆ, ಟೆರಸ್ ಮೇಲೆ, ಅಕ್ಕ ಪಕ್ಕದ ಗಾರ್ಡನ್ ಗಳಲ್ಲಿ ನೀರಿನ್ನಿಟ್ಟು ನಿಮ್ಮ ಕೈಲಾದಷ್ಟು ಪಕ್ಷಿಗಳನ್ನ ಉಳಿಸುವ ಕೆಲಸ ಮಾಡಿ.ಇದು ಮನಸ್ಸಿಗೆ ಖುಷಿಕೊಡುತ್ತದೆ ಒಂದು ಜೀವ ಉಳಿಸಿದೆ ಎನ್ನುವ ನೆಮ್ಮದಿ ಕೂಡ ಸಿಗುತ್ತೆ ಎಂದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ತಾಪಮಾನ ಜಾಸ್ತಿ. ಆಗಿದ್ದರಿಂದ ಸ್ವಲ್ವ ದಿನದಲ್ಲಿ ಬೆಸಿಲಿನ ಪ್ರಮಾಣ ಕೂಡ ಜಾಸ್ತಿಯಾಗಲಿದ್ದು ಆಗ ಪಕ್ಷಿಗಳು ಬಾಯಾರಿಕೆಯಿಂದ ಸಾವನ್ನಪ್ಪುವ ಸ್ಥಿತಿ ಇರುತ್ತೆ. ಹೀಗಾಗಿ ಮನೆಯ ಮುಂದೆ ಗಾರ್ಡನ್ ಗಳಲ್ಲಿ ಖುಲ್ಲಾ ಜಾಗಗಳಲ್ಲಿ ಪಾತ್ರೆಗಳಲ್ಲಿ, ಡಬ್ಬಿಗಳಲ್ಲಿ ನೀರಿನ್ನ ಹಾಕಿಟ್ಟರೆ ಅದನ್ನ ಕುಡಿದು ಪಕ್ಷಿಗಳು ಕೂಡ ಬದುಕುಳಿಯುತ್ತವೆ. ಪಕ್ಷಿ ಸಂಕುಲ ಉಳಿಸುವ ನಿಟ್ಟಿನಲ್ಲಿ ಇಂದು ಬಿಜೆಪಿ ಯುವ ಮೋರ್ಚಾದವರು ನಾಗರಿಕರಿಗೆ ಮಕ್ಕಳಿಂದ ಅರಿವೂ ಮೂಡಿಸುವುದರ ಜೊತೆಗೆ ಪ್ಲಾಸ್ಟಿಕ್ ಟ್ರೆ ಹಾಗೂ ದವಸ ಧಾನ್ಯಗಳನ್ನು ನೀಡಿ ಒಂದೊಳ್ಳೆ ಮಹತ್ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ ಕುಡಿದು ಬಿಸಾಡಿರುವ ಪ್ಲಾಸ್ಟಿಕ್ ಬಾಟಲ್ ಗಳನ್ನ ತೆಗೆದುಕೊಂಡು ಅದಕ್ಕೆ ಪುಟ್ಟ ಪುಟ್ ರಂದ್ರಗಳನ್ನ ಮಾಡಿ ಒಂದು ಪ್ಲಾಸ್ಟಿಕ್ ಪ್ಲೇಟ್ ನಲ್ಲಿ ಅದನ್ನ ಉಲ್ಟಾ ಹಾಕಿ. ಇದರಿಂದ ಹನಿ ಹನಿಯಾಗಿ ನೀರು ಪ್ಲಾಸ್ಟಿಕ್ ಪ್ಲೆಟ್ ನಲ್ಲಿ ಬಂದು ಸಂಗ್ರಹವಾಗುತ್ತೆ ಎಂದರು.

ಈ ಸಂಧರ್ಭದಲ್ಲಿ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರಕಾಶ ಶೃಂಗೇರಿ,ಮಾಜಿ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಪ್ರೀತಮ್ ಅರಕೇರಿ, ವಿನಯ ಸಜ್ಜನರ, ಅಣ್ಣಪ್ಪ ಗೋಕಾಕ, ಅನುಪ ಬಿಜವಾಡ, ಮಂಜು ಬಿಜವಾಡ, ಮಾರುತಿ ಚಾಕಲಬ್ಬಿ, ಜಸ್ವಂತ ಜಾಧವ, ಈರಣ್ಣ ಶಿಂತ್ರಿ, ಶಿವಣ್ಣ ಹೆಬ್ಬಳ್ಳಿ, ಹರೀಶ ಹಳ್ಳಿಕೇರಿ, ಶಿವು ಕೋಟಬಾಳ, ವಿಶ್ವನಾಥ ಛಬ್ಬಿ, ಮಣಿ ರಾಜ್ ಗೋಕಾಕ್, ಪ್ರವೀಣ ಪಾಟೀಲ್, ಚೇತನ್, ಮನು, ಸಿದ್ದು ಹಾಗೂ ಯುವ ಮಿತ್ರರು ಉಪಸ್ಥಿತರಿದ್ದರು.