
ಶಿವಮೊಗ್ಗ, ಮಾ.16; : ಉಡುಪಿಯಲ್ಲಿ ಮಾ18ನೇ ನ್ಯಾಷನಲ್ ಯೂತ್ ಅಥ್ಲೇಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ಕ್ರೀಡಾಶಾಲೆಯ ವಿದ್ಯಾರ್ಥಿನಿ ಗೌತಮಿ ಗೌಡ ಎತ್ತರ ಜಿಗಿತದಲ್ಲಿ ತೃತಿಯ ಸ್ಥಾನವನ್ನು ಪಡೆದಿದ್ದಾರೆ. ಅಥ್ಲೇಟಿಕ್ ತರಬೇತುದಾರ ಬಾಳಪ್ಪ ಮಾನೆಯವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಗೌತಮಿ ಗೌಡರವರಿಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕ ಮಂಜುನಾಥಸ್ವಾಮಿ ಎಂ.ಟಿ. ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.