ಯು-ವಿನ್ ಪೋರ್ಟಲ್ ನಲ್ಲಿ ಎಲ್ಲಾ ಶಿಶುಗಳ ಸಾರ್ವತ್ರಿಕ ಲಸಿಕಾಕರಣ ಮಾಹಿತಿ ತಪ್ಪದೇ ಎಂಟ್ರಿ ಮಾಡಿ- ಡಾ.ಹೆಚ್.ಎಲ್ ಜನಾರ್ದನ್,


ಸಂಜೆವಾಣಿ ವಾರ್ತೆ
ಸಂಡೂರು: ಜು: 22: ತಾಲೂಕಿನ ತೋರಣಗಲ್ಲು ಗ್ರಾಮ ಪಂಚಾಯತಿಯ ಯು.ಭೂಪತಿ ಸಭಾಂಗಣದಲ್ಲಿ ಆಯೋಜಿಸಲಾದ ಯು-ವಿನ್ ಪೋರ್ಟಲ್ ಅಂತರ್ಜಾಲ ಆಧಾರಿತ ದಾಖಲಾತಿ ಕುರಿತು ತಾಲೂಕಿನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ತರಬೇತಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ದನ್ ಅವರು ಯು- ವಿನ್ ಪೋರ್ಟಲ್ ನ ಮಹತ್ವದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ಮತ್ತು ಮೊಬೈಲ್ ಆಪ್ ನಲ್ಲಿ ಅವರೇ ನೊಂದಣಿ ಮಾಡಿಕೊಂಡು ಹತ್ತಿರದ ಲಸಿಕಾ ಕೇಂದ್ರಕ್ಕೆ ಬಂದು ಮಕ್ಕಳಿಗೆ ಲಸಿಕೆ ಪಡೆಯುವ ಅವಕಾಶ ಒದಗಿಸಲಾಗಿದೆ, ಹಾಗೇ ಅದರ ಪ್ರತಿಯನ್ನು ಡೌನ್‍ಲೋಡ್ ಮಾಡುವ ಅವಕಾಶ ಇದ್ದು ಮುಂದಿನ ಲಸಿಕೆ ಯಾವ ದಿನಾಂಕಕ್ಕೆ ಪಡೆಯ ಬೇಕು ಎಂಬ ಮಾಹಿತಿ ದೊರೆಯುವುದರೊಂದಿಗೆ ಮೆಸೇಜ್ ಮೂಲಕ ಎಚ್ಚರಿಕೆಯನ್ನು ಸೂಚಿಸುವುದು ಇತ್ಯಾದಿ ವಿಷಯಗಳ ಬಗ್ಗೆ ತಾಯಂದಿರಿಗೆ ತಿಳಿಸಿ ಎಂದು ಅವರು ತಿಳಿಸುತ್ತಾ,ಇದರಿಂದ ಪೂರ್ಣ ಮಾಹಿತಿ ಪಡೆಯಲು ಇಲಾಖೆಗೆ ಸಹಕಾರಿಯಾಗಲಿದೆ, ಮುಂದಿನ ತಿಂಗಳ ಮೊದಲ ವಾರದಿಂದ ತೀವ್ರತರ ಇಂದ್ರಧನುಷ 5.0 ಪ್ರಾರಂಭ ವಾಗಲಿದ್ದು ಲಸಿಕೆ ವಂಚಿತ ಮಕ್ಕಳನ್ನು ಗುರುತಿಸಿ ಪಟ್ಟಿ ಮಾಡಿ ಪೋರ್ಟಲ್ ನಲ್ಲಿ ಎಂಟ್ರಿ ಮಾಡುವಂತೆ ಅವರು ತಿಳಿಸುತ್ತಾ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಮಕ್ಕಳಿಗೆ ಸಿಗಬೇಕಾದ ಲಸಿಕಾ ಹಕ್ಕನ್ನು ಕೊಡಿಸೋಣ ಎಂದು ತಿಳಿಸಿದರು,
 ಪೂರ್ಣ ತರಬೇತಿಯನ್ನು ಪ್ರಭಾರ ಡಿ.ಎನ್.ಒ ಗಿರೀಶ್ ಕುಮಾರ್, ಎಮ್ ಆಂಡ್ ಇ ವಿಭಾಗದ ಜಯಲಕ್ಷ್ಮಿ, ಎ.ಎಸ್.ಒ ಮಾದೇವಿ, ವಿ.ಸಿ.ಪಿ.ಎಮ್ ಶಿವ ಪ್ರಸಾದ್ ಅವರು ನಡೆಸಿ ಕೊಟ್ಟರು,
 ಈ ಸಂದರ್ಭದಲ್ಲಿ ಟಿ.ಹೆಚ್.ಒ ಡಾ.ಭರತ್ ಕುಮಾರ್, ಡಾ.ಕುಶಾಲ್ ರಾಜ್,ಡಾ.ಹರೀಶ್,ಡಾ.ಅಕ್ಷಯ್ ಶಿವಪುರ್,ಡಾ.ಸಾಯಿರಾಂ, ಡಿ.ಹೆಚ್.ಇ.ಒ ಈಶ್ವರ್ ದಾಸಪ್ಪನವರ್, ಹಾಗೂ ತಾಲೂಕಿನ ಆರೋಗ್ಯ ಸುರಕ್ಷಾಧಿಕಾರಿಗಳು,ನಿರೀಕ್ಷಣಾಧಿಕಾರಿಗಳು,ಸಿ.ಹೆಚ್.ಒ, ಡಾಟ ಎಂಟ್ರಿ ಸಹಾಯಕರು ಇತರರು ತರಬೇತಿಯಲ್ಲಿ ಹಾಜರಿದ್ದರು