ಯು ಟಿ ಖಾದರ್ ಅವರಿಗೆ ಸಭಾಪತಿ ಸ್ಥಾನ: ಹಿಂದುಳಿದ ಅಲ್ಪಸಂಖ್ಯಾತರಿಗೆ ಸಂದ ಗೌರವ ಬಂದೇನವಾಜ ಸಾಸನೂರ

ಶಹಾಪುರ : ಮೇ.26: ವಿಧಾನಸಭೆ ಸಭಾರತಿಗಳಾಗಿ ಆಯ್ಕೆಯಾಗಿರುವ ಅವರು ರಾಜ್ಯದ ಅಲ್ಪಸಂಖ್ಯಾತರ ಮೊದಲ ಸಭಾಪತಿಗಳಾಗಿ ಆಯ್ಕೆಯಾಗಿರುವುದು ಆಭಿನಂದನಾರ್ಹರು ಎಂದು ಕಾಂಗ್ರೆಸ್ ಪಕ್ಷದ ಶಹಾಪುರ ತಾಲೂಕ ಸಂಯೋಜಕರಾದ ಶ್ರೀ ಬಂದೇನವಾಜ ಸಾಸನೂರ್ ಸಂತಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಯುಟಿ ಖಾದರ ಅವರ ಪ್ರತಿಭೆಯನ್ನು ಗುರ್ತಿಸಿ ಇಡಿ ಸದನವನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುವ ಸಾಮಥ್ರ್ಯ ಯುಟಿ ಖಾದರ್ ಅವರಿಗೆ ಗುರುತರ ಜವಾರಿ ವಹಿಸಿಕೊಟ್ಟಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.ಅಲ್ಪಸಂಖ್ಯಾತ ಸಮುದಾಯವು
ಮುಖ್ಯವಾಹಿನಿಗೆ ಬಂದಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಇದು ನಾಡಿನ ಎಲ್ಲ ಕನ್ನಡಿಗೆ ಅಲ್ಪಸಂಖ್ಯಾತರಿಗೆ ಹಿಂದುಳಿದವರಿಗೆ ಸಂದ ಗೌರವವಾಗಿದೆ ಎಂದು ಹೇಳಿರುವ ಅವರು ಅವರಿಗೆ ಇನ್ನು ಹೆಚ್ಚಿನ ಜವಬ್ದಾರಿಗಳು ಸ್ಥಾನ ಮಾನ ನಿರ್ವಹಿಸುವ ಶಕ್ತಿ ದೇವರು ನೀಡಲಿ ಎಂದು ಬಂದೇ ನವಾಜ್ ಸಾಸನೂರ ವಿನಂತಿಸಿದ್ದಾರೆ