ಯು.ಕೆ.ಪಿ 3ನೇ ಹಂತದ ಭೂಸ್ವಾಧಿನ ಪರಿಹಾರ ತಾರತಮ್ಯದಿಂದ ಕೂಡಿದೆ

ವಿಜಯಪುರ:ಮಾ.25: ಯು.ಕೆ.ಪಿ 3ನೇ ಹಂತದ ಭೂಸ್ವಾಧಿನ ಪರಿಹಾರ ತಾರತಮ್ಯದಿಂದ ಕೂಡಿದೆ. ವಿಜಯಪುರ ಜಿಲ್ಲೆಯ ರೈತರು ಕನ್ಸೆಂಟ್ ಪತ್ರ ಪಡೆದರೆ ಅನ್ಯಾಯಕ್ಕೆ ಒಳಗಾಗಲಿದ್ದಾರೆ ಎಂದು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ದೇವರಗೆಣ್ಣೂರಿನಲ್ಲಿ ಗೃಹ ಲಕ್ಷ್ಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬುದ್ಧಿವಂತ, ಮೇಧಾವಿ ಎಂದು ಕೊಂಡಿರುವ ಸಚಿವರೊಬ್ಬರು ಈ ತಾರತಮ್ಯಕ್ಕೆ ಕಾರಣರಾಗಿದ್ದಾರೆ. ಈ ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಸಚಿವರಾದ ಗೋವಿಂದ ಕಾರಜೋಳ ಮತ್ತು ಮುರಗೇಶ ನಿರಾಣಿ ರೈತರಿಗೆ ರೂ.40 ಲಕ್ಷ ಮತ್ತು ರೂ. 50 ಲಕ್ಷ ಪರಿಹಾರ ನೀಡಲು ಒತ್ತಾಯಿಸಿದ್ದರು. ಆದರೆ, ತಮ್ಮ ಈ ಅಧಿಕಾರ ಅವಧಿಯಲ್ಲಿ ತಾವೇ ಹೇಳಿದಷ್ಟು ಪರಿಹಾರ ಯಾಕೆ ನೀಡಲಿಲ್ಲ? ಎಂದು ಅವರು ಪ್ರಶ್ನಿಸಿದರು.

ಬೀಳಗಿ ಭಾಗದ ರೈತರಿಗೆ ಘೋಷಿಸಲಾಗಿರುವ ಭೂಸ್ವಾಧೀನ ಪರಿಹಾರದ ವಿರುದ್ಧ ಅಲ್ಲಿನ ರೈತರು ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ಆದರೆ, ವಿಜಯಪುರ ಜಿಲ್ಲೆಯ ರೈತರಿಗೆ ಕನ್ಸೆಂಟ್ ಹೆಸರಿನಲ್ಲಿ ಅನ್ಯಾಯ ಮಾಡಲಾಗಿದ್ದು, ಇಲ್ಲಿನ ರೈತರು ಕನ್ಸೆಂ???ಗೆ ಒಪ್ಪಿದರೆ ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಈ ಭಾಗದ ರೈತರು ಅದನ್ನು ಒಪ್ಪಿದರೆ ಮೋಸ ಹೋದಂತೆ ಎಂದು ಎಚ್ಚರಿಕೆ ನೀಡಿದ ಅವರು, ಈ ತಾರತಮ್ಯದ ಕುರಿತು ನಾನು ಬಹಿರಂಗ ಸಭೆಯಲ್ಲಿ ಸಿಎಂ ಗಮನಕ್ಕೆ ತಂದಿದ್ದೇನೆ. ಅವರು ಮಾಡದಿದ್ದರೆ, ನಮ್ಮ ಸರಕಾರ ಅಧಿಕಾರಿಕ್ಕೆ ಬಂದ ಮೇಲೆ ತಾರತಮ್ಯ ಸರಿಪಡಿಸುತ್ತೇವೆ ಎಂದು ಅವರು ಹೇಳಿದರು.

ಗೂಂಡಾಗಿರಿ ವರ್ಕೌಟ್ ಆಗದ ಹಿನ್ನೆಲೆಯಲ್ಲಿ ಆಪ್ತರ ಸಲಹೆ ಮೇರೆಗೆ ವಿರೋಧಿಗಳು ಹೊಸ ಸೋಂಗು ಹಾಕಿದ್ದಾರೆ. ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಹ್ಯಾಟ್ರಿಕ್ ಸೋಲುಂಡಿರುವ ಅವರು 30 ಸಲ ನಿಂತರೂ ಸೋಲುತ್ತಾರೆ. ಪಾರ್ಟಿ ಫಂಡ್ ಸಲುವಾಗಿ ಚುನಾವಣೆಗೆ ನಿಲ್ಲುವವರನ್ನು ನನ್ನನ್ನು ವಿರೋಧಿಸುವ ಕೆಲವರು ಹಣಕಾಸಿನ ನೆರವು ನೀಡುತ್ತಾರೆ. 2013ರಲ್ಲಿ ಪ್ರಧಾನಿ ಮೋದಿ, ಅಮಿತ ಶಾ ಅವರಂಥ ನಾಯಕರು ಬಂದು ಭರ್ಜರಿ ಪ್ರಚಾರ ಮಾಡಿದರೂ ನಾನು 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ತಮ್ಮ ಆರ್ಶೀವಾದದಿಂದ ಈ ಭಾರಿ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ. ತಾವೆಲ್ಲರೂ ವಿರೋಧಿಯ ಡೆಪಾಸಿಟ್ ಜಪ್ತಿ ಮಾಡಬೇಕು ಎಂದು ಎಂ. ಬಿ. ಪಾಟೀಲ ಹೇಳಿದರು.

2013ರಲ್ಲಿ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ರೈತರು, ಮಹಿಳೆಯರು, ಯುವಕರು ಮತ್ತು ದಿನದಲಿತರ ಪರ ಹಲವಾರು ಯೋಜನೆಗಳನ್ನು ರೂಪಿಸಿದ್ದೇವು. ಆದರೆ, ಬಿಜೆಪಿ ಡಬಲ್ ಎಂಜಿನ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ರೈತರ ಆದಾಯಕ್ಕಿಂತ ನಿರ್ವಹಣೆ ವೆಚ್ಚ ಹೆಚ್ಚಳವಾಗುತ್ತಿರುವುದು ಇವರ ಅಚ್ಚೆ ದಿನ್ ಕೊಡಿಗೆ ಆಗಿದೆ. ಮುಂದೆ ನಮ್ಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಜನರ ಬದುಕು ಹಸನಾಗಿಸಲು ಗೃಹ ಲಕ್ಷ್ಮಿ, 200 ವ್ಯಾಟ್ ಉಚಿತ ವಿದ್ಯುತ್, ಅನ್ನಭಾಗ್ಯ, ಯುವನಿಧಿ ಯೋಜನೆ ಜಾರಿ ಮಾಡುವ ಮೂಲಕ ಎಲ್ಲ ವರ್ಗದ ಜನರಿಗೆ ಅನುಕೂಲ ಕಲ್ಪಿಸುತ್ತದೆ ಎಂದು ಹೇಳಿದರು.

ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಮತದಾರರು ಅದರಲ್ಲೂ ತಾಯಂದಿರು ಮತ್ತು ಸಹೋದರಿಯರು ತಾವು ಸುಖ ಸಂಸಾರ ನಡೆಸಲು ಆರೋಗ್ಯ, ಶಿಕ್ಷಣ, ನೀರಾವರಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ನಾಯಕರು ತಮಗೆ ಬೇಕಾ? ಅಥವಾ ಮಧ್ಯ ಮಾರಾಟ ಮಾಡುತ್ತ ಮನೆಹಾಳು, ಮನೆ ಮುರಿಯುವ ಮತ್ತು ತಾಳಿ ಹರಿಯುವ ಜನ ಬೇಕಾ ಎಂಬುದನ್ನು ಈ ದೇವರಗೆಣ್ಣೂರ ಸುಕ್ಷೇತ್ರದಲ್ಲಿ ನಿರ್ಧರಿಸಬೇಕು ಎಂದು ಹೇಳಿದರು.

ವಿರೋಧಿಗಳಿಗೆ ಮತ ಹಾಕಿದರೆ ಓಣಿಗೊಂದು ಮದ್ಯ ಅಂಗಡಿ, ಪೆÇೀಲೀಸ್ ಠಾಣೆ ತೆರೆಯುತ್ತಾರೆ. ತಮ್ಮ ಸಂಸಾರ ಹಾಳು ಮಾಡಲು ಪೆÇೀಲೀಸ್ ಠಾಣೆಗಳಿಗೆ ಅಲೆದಾಡುವಂತೆ ಮಾಡುತ್ತಾರೆ. 4 ವರ್ಷ ಜನರ ಶೋಷಣೆ ಮಾಡಿರುವ ಅವರು ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಇಂಥ ಕಣ್ಣೀರ ಹಾಕುವ ಗಂಡಸರನ್ನು ನಂಬಬಾರದು. ನಾವು ಅಧಿಕಾರಕ್ಕೆ ಬಂದ ಮೇಲೆ ಬಬಲೇಶ್ವರ ಮತಕ್ಷೇತ್ರಾದ್ಯಂತ ಕಿರಾಣಿ ಅಂಗಡಿ ಸೇರಿದಂತೆ ನಾನಾ ಕಡೆ ಅಕ್ರಮವಾಗಿ ನಡೆಯುತ್ತಿರುವ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುತ್ತೇವೆ ಎಂದು ಹೇಳಿದರು.

ಆಶಾ ಎಂ. ಪಾಟೀಲ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರಗಳ ಜನ ವಿರೋಧಿ ನೀತಿಗಳಿಂದಾಗಿ ಸಾರ್ವಜನಿಕರು ಬೇಸತ್ತಿದ್ದಾರೆ. ಎಲ್ಲರಿಗೂ ಈಗ ಕಾಂಗ್ರೆಸ್ ಆಶಾಕಿರಣವಾಗಿ ಕಾಣಿಸುತ್ತಿದೆ. ಈ ಭಾಗದಲ್ಲಿ ಮುಂಚೆಯಿಂದಲೂ ಜನ ಕಾಂಗ್ರೆ???ನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದಾರೆ. ನಾವು 2300 ಮಹಿಳಾ ಸ್ವ-ಸಹಾಯ ಸಂಘಗಳ ನೋಂದಣಿ ಮಾಡಿಸಿದ್ದೇವೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಯೋಜನೆಗಳಿಗೆ ಹಣ ನೀಡಿಲ್ಲ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಂ. ಬಿ. ಪಾಟೀಲ ಮತ್ತು ನಮ್ಮ ಕುಟುಂಬ ಸದಸ್ಯರಿಗೆ ತಾವು ತೋರಿರುವ ಅದ್ಧೂರಿ ಸ್ವಾಗತ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿದೆ. ಮುಂದೆಯೂ ನಿಮ್ಮ ಮಗ ಮತ್ತು ಈ ಭಾಗದ ಅಳಿಯ ಎಂ. ಬಿ. ಪಾಟೀಲರಿಗೆ ತಮ್ಮೆಲ್ಲರ ಪ್ರೀತಿಯ ಬೆಂಬಲ ಮುಂದುವರೆಯಲಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಘೋಷಿಸಿರುವ ನಾಲ್ಕು ಗ್ಯಾರಂಟಿ ಸ್ಕಿಂಗಳ ಕಾರ್ಡುಗಳನ್ನು ಮಮದಾಪುರ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.

ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿ ಎಂ. ಬಿ. ಪಾಟೀಲ, ಸುನೀಲಗೌಡ ಪಾಟೀಲ ಮತ್ತು ಬಸನಗೌಡ ಎಂ. ಪಾಟೀಲ ಅವರನ್ನು ತೆರೆದ ವಾಹನದಲ್ಲಿ ಗ್ರಾಮಸ್ಥರು ಮೆರವಣಿಗೆ ಮೂಲಕ ಪುಷ್ಪಮಳೆಯೊಂದಿಗೆ ವೇದಿಕೆಗೆ ಕರೆತಂದರು.

ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಾ ಎಂ. ಪಾಟೀಲ ಸಸಿಗೆ ನೀರುಣಿಸಿದರು. ನಿವೃತ್ತ ಶಿಕ್ಷಕ ವೆಂಕಟೇಶ ಅರಕೇರಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಬಸನಗೌಡ ಎಂ. ಪಾಟೀಲ, ರೇಣುಕಾ ಎಸ್. ಪಾಟೀಲ, ಈರನಗೌಡ ಬಿರಾದಾರ, ವಿದ್ಯಾರಾಣಿ ತುಂಗಳ, ಕಲ್ಪನಾ ಪಾಟೀಲ, ಬಸವರಾಜ ದೇಸಾಯಿ, ಜ್ಯೋತಿ ಬಸವರಾಜ ದೇಸಾಯಿ, ಕುಮಾರ ದೇಸಾಯಿ, ಭಾಗೀರಥಿ ತೇಲಿ, ಜಂಗಮಶೆಟ್ಟಿ, ವಿ.ಎಸ್.ಪಾಟೀಲ, ಎಚ್.ಎಸ್.ಕೋರಡ್ಡಿ, ಲಕ್ಷ್ಮಣ ತೇಲಿ, ಎಚ್.ಎಸ್.ಬಿರಾದಾರ, ವಿ.ಎಚ್.ಬಿದರಿ, ಶೋಭಾ ಬಿದರಿ, ಪ್ರಶಾಂತ ದೇಸಾಯಿ, ಹರನಟ್ಟಿ, ಮುಂತಾದವರು ಉಪಸ್ಥಿತರಿದ್ದರು.

ಅಲ್ಲದೇ, ದೇವರಗೆಣ್ಣೂರ, ಹಂಗರಗಿ, ಬೆಳ್ಳುಬ್ಬಿ, ಜೈನಾಪುರ, ಮಂಗಳೂರು, ಉಪ್ಪಲದಿನ್ನಿ, ಕೊಡಬಾಗಿ, ತಾಜಪುರ, ಲಿಂಗದಳ್ಳಿ, ಸುತಗುಂಡಿ, ದೇವಾಪುರ, ಹೊಸೂರ, ಜಂಬಗಿ ಎಚ್, ಚಿಕ್ಕಗಲಗಲಿ, ಕಣಬೂರ, ಶಿರಬೂರ, ಬಬಲಾದಿ, ಕೆಂಗಲಗುತ್ತಿ, ಗುಣದಾಳ, ದೂಡಿಹಾಳ, ಮಮದಾಪುರ, ಹಂಚನಾಳ, ಖಿಲಾರಹಟ್ಟಿ, ಬೋಳಚಿಕ್ಕಲಕಿ ಮುಂತಾದ ಗ್ರಾಮದ ಹಿರಿಯರು, ಮಹಿಳೆಯರು ಮತ್ತು ಯುವಕರು ಉಪಸ್ಥಿತರಿದ್ದರು.