ಯುಸಿಸಿಗೆ ಮುಸ್ಲಿಂರ ಆಕ್ಷೇಪ

(ಸಂಜೆವಾಣಿ ಪ್ರತಿನಿಧಿಯಿಂದ)
ನವದೆಹಲಿ,ಜು.೮- ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ಎಲ್ಲಾ ಮುಸ್ಲಿಂ ಸಂಘಟನೆಗಳು ಯುಸಿಸಿ ವಿರೋದಿಸಿ, ಕಾನೂನು ಆಯೋಗಕ್ಕೆಕ್ಕೆ ಇದೇ ೧೪ರ ಒಳಗೆ ಆಕ್ಷೇಪಣೆ ಸಲ್ಲಿಸಲು ಮುಂದಾಗಿದ್ದಾರೆ.ಏಕರೂಪ ನಾಗರಿಕ ಸಂಹಿತೆ ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ದೇಶದ ಎಲ್ಲಾ ಮುಸ್ಲಿಂ ಸಮುದಾಯ ಈ ಸಂಹಿತೆಯನ್ನು ವಿರೋಧಿಸಬೇಕು ಎಂದು ಮುಸ್ಲಿಂ ಸಂಘಟನೆಗಳು ಕರೆ ನೀಡಿವೆ.ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಕರೂಪ ನಾಗರಿಕ ಸಂಹಿತೆ ಜಾರಿ ವಿಷಯದ ಚರ್ಚೆಗೆ ಮುನ್ನುಡಿ ಬರೆದ ಹಿನ್ನೆಲೆಯಲ್ಲಿ ಈ ವಿಷಯ ಹೆಚ್ಚು ಚಾಲ್ತಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಾರದೊಳಗೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಲು ಸರ್ವಾನುಮತದಿಂದ ನಿರ್ಧರಿಸಿವೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ, ಅಹ್ಲೆ ಹದೀಸ್ ಅಧ್ಯಕ್ಷ ಮೊಹಮ್ಮದ್ ಅಸ್ಗರ್ ಅಲಿ ಇಮಾಮ್ ಮೆಹಂದಿ, ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ, ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ, ಜಮಾತೆ ಇಸ್ಲಾಮಿ ಅಧ್ಯಕ್ಷ ಸಾದತುಲ್ಲಾ ಹುಸೇನಿ, ಮೌಲಾನಾ ಸೈಯದ್ ಅಹ್ಮದ್ ವಾಲಿ ರಹಮಾನಿ, ಅಮೀರ್-ಎ-ಶರಿಯತ್ ಸೇರಿದಂತೆ ವಿವಿಧ ಮುಸ್ಲಿಂ ಸಮುದಾಯದ ಅಧ್ಯಕ್ಷರು ಏಕರೂಪ ನಾಗರಿಕ ಸಂಹಿತೆಗೆ ತೀವ್ರ ವಿರೋದ ವ್ಯಕ್ತಪಡಿಸಿದ್ದಾರೆ.ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವು ಮುಸ್ಲಿಂ ಸಂಘಟನೆಗಳು ಜಂಟಿ ಹೇಳಿಕೆ ನೀಡಿರುವ ಹಲವು ಮುಸ್ಲಿಂ ಸಂಘಟನೆಗಳು ಏಕರೂಪ ನಾಗರಿಕ ಸಂಹಿತೆ ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲೆ ಪರಿಣಾಮ ಬೀರಲಿವೆ. ಸಮುದಾಯದ ಮೇಲೆ ತೊಂದರೆ ನೀಡಬಹುದಾದ ಕಾನೂನನ್ನು ವಿರೋದಿಸಬೇಕು ಎಂದು ಹೇಳಿದ್ದಾರೆ.ಹಲವು ಮುಸ್ಲಿಂ ಸಂಘಟನೆಗಳು. ಮುಸ್ಲಿಂ ವೈಯಕ್ತಿಕ ಕಾನೂನಿನ ಅನ್ವಯ ೧೯೩೭ ರ ಶರಿಯತ್ ಕಾಯ್ದೆಗೆ ವಿರುದ್ದವಾಗಿದೆ ದೇಶದ ಮುಸ್ಲಿಮರ ಧಾರ್ಮಿಕ ಗುರುತಿಗೆ ನೇರವಾಗಿ ಸಂಬಂಧಿಸಿದೆ.ಹೀಗಾಗಿ ಎಲ್ಲ ಮುಸ್ಲಿಂ ಸಮುದಾಯ ವಿರೋದಿಸಬೇಕು ಎಂದಿದ್ದಾರೆ.ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲೆ ಪರಿಣಾಮ ಬೀರುವ ಏಕರೂಪ ನಾಗರಿಕ ಸಂಹಿತೆಯ ಉದ್ದೇಶವನ್ನು ಕೈಬಿಡುವಂತೆ ಎಲ್ಲಾ ಮುಸ್ಲಿಂ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದು ಸಂವಿಧಾನದಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಸರಕಾರ
ಗೌರವಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆಗೆ ಮುಸ್ಲಿಂ ಸಂಘಟನೆಗಳು ವಿರೋಧ
ಇದೇ ೧೪ ರ ಒಳಗೆ ಕಾನೂನು ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ
ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲೆ ಪರಿಣಾಮ ಬೀರುವ ಆರೋಪ
ಹಲವು ಮುಸ್ಲಿಂ ಸಂಘಟನೆಗಳೂ ಯುಸಿಸಿ ವಿರೋಧಿಸಲು ಕರೆ
ಪ್ರಧಾನಿ ನರೇಂದ್ರ ಮೋದಿ ಚರ್ಚೆ ಹಿನ್ನೆಲೆಯಲ್ಲಿ ಯುಸಿಸಿ ಮುನ್ನೆಲೆಗೆ