
ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ27: ದೇಶದ ಸ್ವಾತಂತ್ರ್ಯದಲ್ಲಿ ಹೋರಾಡಿ ತಮ್ಮ ತನು, ಮನ ಹಾಗೂ ಜೀವನವನ್ನೇ ಅರ್ಪಣೆಮಾಡಿದ ಲಕ್ಷಾಂತರ ವೀರರಲ್ಲಿ ಚಂದ್ರಶೇಖರ ಆಜಾದ್ ಸದಾ ಸ್ಮರಣೀಯರು ಹಾಗೂ ಯುವ ಜನಾಂಗಕ್ಕೆ ಅನುಕರಣೀಯರು ಎಂದು ಅನಂತ ಜೋಶಿ ಅಭಿಪ್ರಾಯಪಟ್ಟರು.
ಪತಂಜಲಿ ಯೋಗಸಮಿತಿ ಜನನಿ ವಿವಿದ್ದೋದೇಶ ಸಹಕಾರಿ ಸಂಘದ ಸಹಯೋಗದಲ್ಲಿ ಸೋಮವಾರ ಬೆಳಿಗ್ಗೆ ಸ್ಥಳೀಯ ಎಸ್‍ಕೆಎಂಪಿಎಲ್ ಸ್ವಾತಂತ್ರ ಉದ್ಯಾನವನ ಹಮ್ಮಿಕೊಂಡಿದ್ದ ‘ವೀರಯೋಧ ಚಂದ್ರಶೇಖರ ಆಜಾದ್’ ಬಲಿದಾನ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಇಸ್ಟ್ ಇಂಡಿಯಾ ಸರ್ಕಾರಕ್ಕೆ ಸಿಂಹಸ್ವಪ್ಪನವಾಗಿದ್ದ ಆಜಾದ್‍ರು ಅತ್ಯಂತ ಧೈರ್ಯಶಾಲಿಗಳಾಗಿದ್ದು ಅಂತಹ ತ್ಯಾಗಗಳು ಇಂದು ಅವಶ್ಯಕವಿಲ್ಲದಿದ್ದರೂ ನಮ್ಮ ನಮ್ಮ ವೈಯುಕ್ತಿಕ ಜೀವನದಲ್ಲಿ ಇಂತಹ ತ್ಯಾಗಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವು ಬದಲಾಗುವ ಮೂಲಕ ದೇಶಕ್ಕೆ ಇಂದು ಕೊಡುಗೆಯನ್ನು ನೀಡುವ ಮೂಲಕ ವೀರಯೋಧರಿಗೆ ಹೋರಾಟಗಾರರಿಗೆ ನಾವು ಕೃತಜ್ಞತೆ ಸಲ್ಲಿಸಬೇಕಾಗಿದೆ ಎಂದರು.
ರಾಜ್ಯ ಯುವ ಪ್ರಭಾರಿ ಕಿರಣ್ ಮಾತನಾಡಿ ಚಂದ್ರಶೇಖರ ಆಜಾದ್‍ರವರ ಜೀವನ ಶೈಲಿ, ಕಾರ್ಯವೈಖರಿ, ಆದರ್ಶಗಳ ಕೌತುಕವನ್ನು ವಿವರಿಸಿದರು ಇಂದು ಬೆಳ್ಳಿಗ್ಗೆ 5.30 ರಿಂದ 6.30 ರವರೆಗೂ ನಡೆದ ಯೋಗದಲ್ಲಿ ಜೀವನದ ಆದರ್ಶಗಳನ್ನು ವಿವರಿಸುವದರೊಂದಿಗೆ ಯೋಗಭ್ಯಾಸವನ್ನು ಮಾಡಿಸಿದರು.
ಕೇಂದ್ರದ ಉಸ್ತೂವಾರಿ ಶ್ರೀರಾಮ, ಮಾಜಿ ಸೈನಿಕರಾದ ಸತೀಶ್‍ರಾವ್ ಪಾವನಜೀ, ಅಶೋಕ ಚಿತ್ರಗಾರರು, ವಿಠೋಬ, ಗುರುರಾಜ ಭಟ್, ಪ್ರೇಮಿಳಮ್ಮ, ಮಂಗಳುಮ್ಮ ಸೇರಿದಂತೆ ಇತರರು ವಿವಿಧ ಕೇಂದ್ರಗಳ ಮುಖ್ಯಸ್ಥರು, ಯೋಗಸಾಧಕರು ಪಾಲ್ಗೊಂಡಿದ್ದರು.