ಯುವ ಸ್ಪಂದನ ಕಾರ್ಯಕ್ರಮ

ಕಲಬುರಗಿ ಏ 17: ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಲ್ಬುರ್ಗಿಯ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಯುವ ಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯರಾದ ಶ್ರೀಮತಿ ಸುಜಾತ ಬಿರಾದಾರ್ ವಿದ್ಯಾರ್ಥಿಗಳು ಇಂದಿನ ಯುವಕರಾಗಿದ್ದು ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಇಂಥ ಯುವಪೀಳಿಗೆ ದುಶ್ಚಟಗಳಿಗ ಬಲಿಯಾಗುತ್ತಿರುವುದು ವೇದನೆಯ ವಿಷಯವಾಗಿದೆ. ಮೊಬೈಲ್ ಗೀಳು ಹೆಚ್ಚಿಸಿಕೊಂಡು ಓದು ಬರಹದಿಂದ ದೂರ ಇದ್ದು ಭವಿಷ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂಥ ದುಶ್ಚಟಗಳಿಂದ ದೂರವಾಗಲು ಯುವ ಸ್ಪಂದನ ಸರಕಾರದ ಮಹತ್ತರ ಕಾರ್ಯಕ್ರಮವಾಗಿದೆ ಯುವ ಸ್ಪಂದನಕ್ಕೆ ಭೇಟಿಕೊಟ್ಟು ತಮ್ಮ ಸಮಸ್ಯೆಗಳನ್ನು ವೇದನೆಗಳನ್ನು ಹೇಳಿಕೊಂಡು ಪರಿಹಾರ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಆಗಾಗ ಇಂಥ ಕಾರ್ಯಕ್ರಮಗಳು ಹಮ್ಮಿಕೊಂಡಾಗ ವಿದ್ಯಾರ್ಥಿಗಳ ಮನೋಚೈತನ್ಯ ಹೆಚ್ಚಾಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ
ಎನ್ ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಪಾಂಡು ಎಲ್ ರಾಠೋಡ್ ಸ್ವಯಂಸೇವಕರು
ದೇಶದ ಸೇವಕ ರಾಗಿದ್ದು ತಮ್ಮನ್ನು ತಾವು ಅರಿತುಕೊಂಡು ರಾಷ್ಟ್ರದ ಸೇವೆಗೆ ಸಮರ್ಪಣೆ ಮಾಡಿಕೊಳ್ಳಬೇಕೆಂದರು. ಈ ನಿಟ್ಟಿನಲ್ಲಿ ಎನ್ಎಸ್ಎಸ್ ಘಟಕ ವಿದ್ಯಾರ್ಥಿಗಳ ಕೇವಲ ಶ್ರಮದಾನ ಮಾಡಿಸುವುದು ಮಾತ್ರವಲ್ಲ , ಆಯ್ದ ವಿಷಯಗಳ ಮೇಲೆ ಉಪನ್ಯಾಸಮಾಲೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಮಾಡಲು ಘಟಕ ಬದ್ಧವಾಗಿದೆ ಎಂದರು.
ಈ ನಿಟ್ಟಿನಲ್ಲಿ ಕರೋನಾ ಮಹಾಮಾರಿ ಇಂದ ಬಚಾವಾಗಲು ವಿದ್ಯಾರ್ಥಿಗಳು ಸ್ವತಃ ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಜೊತೆಗೆ ಕುಟುಂಬದವರನ್ನು, ಸಮಾಜವನ್ನು ಭಯದ ವಾತಾವರಣದಿಂದ ದೂರ ಮಾಡಲು ರಾಯಭಾರಿಗಳಂತೆ ಸೇವೆ ಮಾಡಬೇಕೆಂದರು ಈ ನಿಟ್ಟಿನಲ್ಲಿ
ಸ್ವಯಂಸೇವಕರು ಮಹತ್ತರ ಪಾತ್ರ ಮಹತ್ವದ್ದಾಗಿದೆ ಎಂದರು.ಯುವ ಸ್ಪಂದನದ ಯುವ ಪರಿವರ್ತಕ ರಾದ ಮಮತಾ ಎ ಆರ್
ವಿಶೇಷ ಚಟುವಟಿಕೆಗಳು ಮೂಲಕ ಉಪನ್ಯಾಸ ನೀಡಿದರು. ಆಶಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.