ಯುವ ಸ್ಪಂದನದಿಂದ ಯುವಕರು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯಃ ಸಂಜಯ

ವಿಜಯಪುರ, ಡಿ.6-ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಸರಕಾರಿ ಬಾಲಕಿಯರ ಫ್ರೌಡ ಶಾಲೆಯಲ್ಲಿ ಶುಕ್ರವಾರದಂದು ಯುವ ಸ್ಪಂದನ ಕಾರ್ಯಕ್ರಮ ಜರುಗಿತು.
ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರ ಹಾಗೂ ನಿಮ್ಹಾನ್ಸ್‍ನ ಎಪಿಡಿಯಾಮಿಲಾಜಿ ವಿಭಾಗ ಜನ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವ ಪರಿವರ್ತಕರಾದ ಸಂಜಯ ಎಚ್ ಹರಿಜನ ಅವರು ಮಾತನಾಡಿ ಯುವ ಸ್ಪಂದನದಿಂದ ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯ ಎಂದರು.
ಅದರಂತೆ ವಿಧ್ಯಾರ್ಥಿಗಳು ಮತ್ತು ಯುವಜನತೆ ಯಾವುದೇ ರೀತಿಯ ಸಮಸ್ಯೆಗಳು ಎದುರಾದಾಗ ಭಯಪಡದೇ ಆತಂಕ್ಕೊಳಗಾಗದೆ. ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಿಕೂಂಡು ಎದುರಿಸುವ ಭಾತಿಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿಧ್ಯಾರ್ಥಿ ಇಂದಿನ ಆಧುನಿಕ ಯುಗದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಆತಂಕದಿಂದ ಹಾಗೂ ಭಯದಿಂದ ಜೀವಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ವಿಧ್ಯಾರ್ಥಿಗಳು ಪರೀಕ್ಷೆಯ ಆತಂಕದಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಯುವಜನತೆಗೆ ವೈಫಲ್ಯ ಎಂಬ ಪಡೆಂಭೂತ ಕಾಡುತ್ತಿದೆ. ಆದ್ದರಿಂದ ಹೊರಬರುವ ನಿಟ್ಟಿನಲ್ಲಿ ಯುವಸ್ಪಂದನ ಕೇಂದ್ರದಿಂದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇಂದಿನ ದಿನಗಳಲ್ಲಿ ಯುವಜನತೆ ಅನುಭವಿಸುತ್ತಿರುವ ಸಮಸ್ಯೆಗಳ ವಿಷಯಗಳು, ಸುರಕ್ಷತೆ, ಭಾವನಾತ್ಮಕ ಹತೋಟಿ, ಲಿಂಗ ಮತ್ತು ಲೈಂಗಿಕತೆ, ಆರೋಗ್ಯ, ಜೀವನ ಶೈಲಿ ಮತ್ತು ವರ್ತನೆ, ಶಿಕ್ಷಣ ಮತ್ತು ಪಠ್ಯ ವಿಷಯ, ವ್ಯಕ್ತಿತ್ವ ಬೆಳವಣಿಗೆ ನಿರ್ಧಾರ ತೆಗೆದುಕೊಳ್ಳುವಿಕೆ, ಉದ್ಯೋಗ ಈ ವಿಷಯಗಳಲ್ಲಿ ಯಾವುದೇ ಗೊಂದಲಗಳಿಗೆ ಉಚಿತವಾಗಿ ಆಪ್ತಸಮಾಲೋಚನೆ ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಯುವ ಸ್ಪಂದನ ಕೇಂದ್ರದ ದೂರವಾಣಿ ಸಂಖ್ಯೆ :08352223554/200101 ಯುವ ಸಮಾಲೋಚಕರ ರೇಣುಕಾ ಎಸ್ ಬೀಳಗಿ ಅವರ ಮೊ.ಸಂ 7349131488 ಸಂಪರ್ಕಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರು, ಪ್ರಾಚಾರ್ಯರು ಪಿ.ಎಚ್. ಢವಳಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.