ಯುವ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಿಜಲಿಂಗ ರಗಟೆ ಆಯ್ಕೆ

ಬೀದರ :ಜ.10:ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೆ ಜನವರಿ 19 ರಂದು ಡಾ ಚನ್ನಬಸವ ಪಟ್ಟದ್ದೆವರ ರಂಗಮಂದಿರದಲ್ಲಿ ಯುವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಸಮ್ಮೇಳನಾಧ್ಯಕ್ಷರಾಗಿ ಯುವ ಸಾಹಿತಿ ನಿಜಲಿಂಗ ರಗಟೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಎಂ ಎಸ್ ಮನೊಹರ ಅವರು ತಿಳಿಸಿದ್ದಾರೆ. ಇದುವರೆಗೆ ತಾಲ್ಲೂಕು ಕಸಾಪದಿಂದ 3 ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು ಅದರಲ್ಲಿ ಒಬ್ಬರು ಮಹಿಳೆಗೂ ಅವಕಾಶ ನೀಡಿದ ಪ್ರಯುಕ್ತ ಈ ಬಾರಿ ಯುವಕರಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.

ನಿಜಲಿಂಗ ರಗಟೆ : ಯುವ ಸಾಹಿತಿಗಳಾದ ನಿಜಲಿಂಗ ರಗಟೆ (04/11/1978) ಬಿ.ಕಾಂ,ಎಮ್.ಬಿಎ .ಡಿ.ಸಿ.ಎ ಪದವಿಧರರು. ವೃತ್ತಿಯಿಂದ ಡಿ.ಸಿ.ಸಿ ಬ್ಯಾಂಕ್ ಉದ್ಯೋಗಿಯಾಗಿದ್ದು ಪ್ರವೃತ್ತಿಯಿಂದ ಸಾಹಿತಿಗಳಾಗಿ ಕವನಕಣಜ 2005, ಕನ್ನಡ ಒಡಲು2009, ನನ್ನ ಕವನ 2011 ಮೊದಲಾದ ಕವನ ಸಂಕಲಗಳನ್ನು ಹೊರತಂದಿದ್ದು, ಕಥಾ ಗುಚ್ಚ2011 ಕಧಾಸಂಕಲನ, ಸಿರಿವಂತನ ದರ್ಪ2011 ನಾಟಕವನ್ನು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ, ಪ್ರಬಂಧ ಮಂಡನೆ ಮಾಡಿದ್ದಾರೆ. ಕಾಸರಗೋಡಿನ ರಾಜ್ಯಮಟ್ಟದ ಕವಿ ಸಮ್ಮೇಳನದಲ್ಲಿ ಕವಿರತ್ನ ಪ್ರಶಸ್ತಿ ಸೇರಿದಂತೆ ಅನೇಕ ರಾಜ್ಯ ಮಟ್ಟದ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕೋವಿಡ ಕಾರಣವಾಗಿ ಸಮ್ಮೇಳನದಲ್ಲಿ ಮೆರವಣಿಗೆಯನ್ನು ಮಾತ್ರ ಕೈಬಿಟ್ಟು ಉಳಿದಂತೆ ವಿಶೇಷಉಪನ್ಯಾಸ, ಗೋಷ್ಠಿ, ಕವಿಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನಿಯರ ಸನ್ಮಾನ ಕಾಯ9ಕ್ರಮ ಆಯೋಜಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.