ಯುವ ಸಂಸದ ಕಾರ್ಯಕ್ರಮ

ಕಲಬುರಗಿ: ಜ.15:ನಗರದ ಎಂ. ಎಸ್. ಇರಾನಿ ಪದವಿ ಮಹಾವಿದ್ಯಾಲಯದಲ್ಲಿ ಎಂ. ಎಸ್. ಇರಾನಿ ಪದವಿ ಮಹಾವಿದ್ಯಾಲಯ, ಆಜಾದಿ ಕಾ ಅಮೃತ ಮಹೋತ್ಸವ, ರಾಷ್ಟ್ರೀಯ. ಸೇವಾ. ಯೋಜನೆ. ಮತ್ತು ಗ್ರಾಮೀಣ ಅಭಿವೃದ್ಧಿ, ಜಿಲ್ಲಾ ಪಂಚಾಯತ ಇಲಾಖೆ ಇವರುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ 159ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ಸಪ್ತಾಹದ ಅಡಿಯಲ್ಲಿ ಯುವ ಸಂಸದ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಜಿಲ್ಲಾ ಗ್ರಾಮೀಣ ಅಭಿವೃದ್ದಿ ಕೋಶ ಯೋಜನಾ ನಿರ್ದೇಶಕರಾದ ಜಗದೇವ ಬಿ, ಅವರು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ರಾಜಶೇಖರ ಬಿರನಳ್ಳಿ ಅವರು ವಹಿಸಿಕೊಂಡಿದ್ದರು, ರಾಷ್ಟ್ತ್ರೀಯ ಸೇವಾ ಯೋಜನಾ ಅಧಿಕಾರಿ ಡಾ. ಪ್ರಾಣೇಶ ಎಸ್ ಅವರು ಗಣ್ಯರಿಗೆ ಸ್ವಾಗತಿಸಿದರು, ಡಾ. ಶಂಕರಪ್ಪ ವಂದಿಸಿದರು. ಪ್ರೋ ಜಗದೇವಿ ಹಿರೇಮಠ ಇದ್ದರು. ಅಂಬಿಕಾ ಅವರು ನಿರೂಪಿಸಿದರು. ಹಾಗೂ ಮಹಾವಿದ್ಯಾಲಯದ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯರ್ಥಿ ಗಳು ಪಾಲ್ಗೊಂಡಿದ್ದರು.