ಯುವ ಶಕ್ತಿ ದೇಶದ ದೊಡ್ಡ ಶಕ್ತಿ : ಜಾವೀದ ಜಮಾದಾರ

(ಸಂಜೆವಾಣಿ ವಾರ್ತೆ)
ವಿಜಯಪುರ : ಜು.22:ಮೌಲ್ಯಗಳನ್ನು ಬಿತ್ತುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಯುವಕರಲ್ಲಿ ಪ್ರತಿಭೆಯನ್ನು ಗುರುತಿಸುವ ಕಾರ್ಯ ಹಾಗೂ ಪ್ರಸ್ತುತ ಸನ್ನಿವೇಶದಲ್ಲಿ ದೆಶದಲ್ಲಿ ವಿದ್ಯಾರ್ತಿಗಳಿಗೆ ಮಾರ್ಗದರ್ಶನ ತರಬೇತಿ ನೀಡುವ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಬೇಕಾಗಿದೆ. ಯುವ ಶಕ್ತಿ ದೇಶದ ದೊಡ್ಡ ಶಕ್ತಿ ವಿಶ್ವದ ಎಲ್ಲ ರಾಷ್ಟ್ರಗಳು ಭಾರತವನ್ನು ಯುವ ರಾಷ್ಟ್ರವೆಂದು ಗುರುತಿಸುತ್ತಿವೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಹಾಗೂ ಕರ್ನಾಟಕ ರಾಜ್ಯ ಎನ್,ಎಸ್.ಎಸ್. ಸಲಹ ಸಮಿತಿ ಸದಸ್ಯರಾದ ಡಾ. ಜಾವೀದ ಜಮಾದಾರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಮುಗಳಖೋಡ ಮಹರಾಜರ ಮಠದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಎಸ್.ಬಿ.ಜೆ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 7 ದಿನಗಳ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ಜೀವನದಲ್ಲಿ ಜಾನಪದ ಕಲೆ ಸಂಸ್ಕೃತಿಯು ಕೂಡ ಅಳವಡಿಸಿಕೊಳ್ಳುವುದು ಹಾಗೂ ನಮ್ಮ ಪಾರಂಪರಿಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ತಾವೆಲ್ಲರೂ ಶ್ರಮಿಸಬೇಕು ಹಾಗೆ ವಿಶ್ವಕ್ಕೆ ಮಾದರಿಯಾಗಿರುವ ವ್ಯಕ್ತಿಗಳ ಹಾದಿಯಲ್ಲಿ ಸಾಗಬೇಕು ತಮಗಾಗಿ ಬದುಕಿದವರಿಗಿಂತ ಸಮಾಜಕ್ಕಾಗಿ ಬದುಕಿದವರ ಹೆಸರು ಶಾಶ್ವತ ಮಹಾತ್ಮ ಗಾಂಧೀಜಿಯವರು ಕಂಡ ಕನಸಿನಂತೆ ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ ಅಂತಹ ಎಲ್ಲ ವ್ಯಕ್ತಿತ್ವವು ಈ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ತಾವೆಲ್ಲರೂ ಬೆಳೆಸಿಕೊಂಡು ಭಾವಿ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿಜಯಪುರ ಜಿಲ್ಲೆಯಲ್ಲಿ ಎನ್.ಎಸ್.ಎಸ್. ಚಟುವಟಿಕೆಗಳು ಅತ್ಯಂತ ಪರಿಣಾಮಕಾರಿಯಾಗಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಎನ್.ಎಸ್.ಎಸ್. ಸ್ವಯಂ ಸೇವಕರ ತಂಡ ರಚಿಸಿ ತುರ್ತು ಪರಿಸ್ಥಿತಿ ಹಾಗೂ ಸಮಾಜಿಕ ಕಾರ್ಯದಲ್ಲಿ ಬಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಯು. ಕೆ. ಕುಲಕರ್ಣಿ ಪ್ರಾಧ್ಯಾಪಕರು ಹಾಗೂ ಶೈಕ್ಷಣಿಕ ಉಪ ಕುಲ ಸಚಿವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಮಾತನಾಡುತ್ತಾ, ವಿದ್ಯಾರ್ಥಿಗಳು ಸಮಾಜದ ಪ್ರಗತಿಯನ್ನು ಸಾಧಿಸಬೇಕಾದರೆ ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳಬೇಕು ಹಾಗೆ ಕೂಡಿ ಕೆಲಸ ಮಾಡುವ ಪ್ರೇರಣೆ, ನಾಗರಿಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಗ್ರಾಮೀಣ ಪ್ರದೇಶದ ಸರಳ ಸಂಸ್ಕøತಿ ಅನುಭವಿಸುವುದು ನಮಗಾಗಿ ಸಮಾಜ ಅಲ್ಲ ಸಮಾಜಕ್ಕಾಗಿ ನಾವು ಎಂಬ ನಾನುಡಿಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಪ್ರಕಾಶ್ ರಾಥೋಡ್ ಜಿಲ್ಲಾ ನೋಡಲ್ ಎನ್.ಎಸ್.ಎಸ್. ಅಧಿಕಾರಿಗಳು ವಿಜಯಪುರ ರವರು ಮಾತನಾಡಿ, ವಿದ್ಯಾರ್ಥಿಗಳು ನಕಾರಾತ್ಮಕ ಚಿಂತನೆಗಳಿಂದ ಹೊರಬಂದು ಸಕಾರಾತ್ಮಕ ಚಿಂತನೆಗಳನ್ನ ಬೆಳೆಸಿಕೊಳ್ಳಬೇಕು ಸಜ್ಜನರ ಸಂಗ ಹೆಜ್ಜೆನು ಸವಿದಂತೆ ಎಂಬ ಮಾತಿನಂತೆ ಉತ್ತಮರ ಸಂಘ ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಮನದಾಳ ಮಾಡಿಕೊಟ್ಟರು.
ಅದೇ ರೀತಿಯಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಪೆÇ್ರ.ಬಿ.ಎಚ್.ಅವಟಿ ಪ್ರಾಧ್ಯಪಕರು ಎಸ್.ಎಮ್.ಆರ್‍ಕೆ ಶಿಕ್ಷಣ ಮಹಾವಿದ್ಯಾಲಯದ ವಿಜಯಪುರ ಅವರು ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ಇಂತಹ ಅವಕಾಶಗಳು ಬಳಸಿಕೊಂಡು ಹಲವಾರು ಉಪನ್ಯಾಸಕರ ಮಾರ್ಗದರ್ಶನದಂತೆ ಮುನ್ನಡೆದರೆ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಗುರುತಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅದೇ ರೀತಿ ಸಾನಿಧ್ಯವನ್ನು ವಹಿಸಿರುವ ರೇವಣಸಿದ್ದಯ್ಯ ಕೆಳಗಿನಮಠ ಶ್ರೀಮಠದ ಅರ್ಚಕರು ವಿದ್ಯಾರ್ಥಿಗಳಿಗೆ ಆಶೀರ್ವಚನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪೆÇ್ರಫೆಸರ್ ಜಿಜೆ ಹತ್ತಳ್ಳಿರವರು ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ಇದೊಂದು ವಿಶೇಷ ಅವಕಾಶ ಈ ಅವಕಾಶವನ್ನು ತಾವೆಲ್ಲರೂ ಏಳು ದಿನಗಳವರೆಗೆ ಎಲ್ಲ ರೀತಿಯಲ್ಲಿ ಭಾಗವಹಿಸುವಿಕೆ ಉತ್ತಮ ಮಾರ್ಗದರ್ಶನಗಳೊಂದಿಗೆ ಮುಂದೆ ಸಾಗಿದರೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಅಭಿಷೇಕ್ ಶೇಗುಣಸಿ, ಸಂಘಡಿಗರು ರಾಷ್ಟ್ರೀಯ ಸೇವಾ ಯೋಜನೆಯ ಗೀತೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕ ಬಳಗ ಹಾಗೂ ಎನ್.ಎಸ್.ಎಸ್.ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ಅರ್ಚನಾ ಮಾಲಿ ಸೌಂದರ್ಯಇಟ್ಟಪ್ಪಗೋಳ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಕೊಟ್ಟರು.