ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭ


ಧಾರವಾಡ,ಜು.3: ರಸಾಯನ ಶಾಸ್ತ್ರ ವಿಭಾಗದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಧಾರವಾಡದ ಕೀರ್ತಿ ಹೆಚ್ಚಿಸದ ಸಾಧನೆಗೆ ವಿಜ್ಞಾನಿ ಡಾ. ಎಸ್.ಟಿ. ನಂದಿ ಬೇವೂರ ಅವರ ಪಾತ್ರ, ಕೊಡುಗೆ ಅಪಾರವಾಗಿದೆ. ಎಂದುಧಾರವಾಡ ಸಾಯಿ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕರು ಮತ್ತಅಧ್ಯಕ್ಷರಾದಡಾ. ವೀಣಾ ಬಿರಾದಾರಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಶರಣಪ್ಪತೋಟಪ್ಪ ನಂದಿಬೇವೂರದತ್ತಿಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ‘ಯುವ ವಿಜ್ಞಾನಿ ಪ್ರಶಸ್ತಿ-2023’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಸಿಂಧೂ ನಾಗರಿಕತೆ ಕಾಲದಿಂದಲೂ ವಿಜ್ಞಾನದಕ್ಷೇತ್ರದಲ್ಲಿಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ರಸಾಯನಶಾಸ್ತ್ರ ವಿಭಾಗದಲ್ಲಿ ನಮ್ಮದೇಶದಕೊಡುಗೆ ವಿಶೇಷವಾಗಿದೆ. ಭಾಸ್ಕರಾಚಾರ್ಯ, ಬ್ರಹ್ಮಗುಪ್ತ, ಆರ್ಯಭಟರಂಥಹ ವಿಜ್ಞಾನಿಗಳು ದಶಮಾಂಶ, ಚರಕ ಸಂಹಿತೆ, ಶೂಶ್ರುಕ ಸಂಹಿತೆಯಂತಹ ವಿಜ್ಞಾನ ಮತ್ತುತಂತ್ರಜ್ಞಾನದಲ್ಲಿ ವಿಶಿಷ್ಟ ರೀತಿಯ ಸಾಧನೆಯುಗುಪ್ತರ ಕಾಲದಿಂದ ಹಿಡಿದುಅಬ್ದುಲ್‍ಕಲಾಂರವರೆಗೂ ಮರೆಯುವಂತಿಲ್ಲಎಂದಅವರು ವಿಜ್ಞಾನದಕುರಿತು ಹಲವು ರೋಚಕ ವಿಷಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಶ್ರೀಸಾಮಾನ್ಯನ ಕೈಯಲ್ಲಿ ಮೊಬೈಲ್ ಬಂದಿದೆ. ಅದರ ಮೂಲಕ ಜಗತ್ತಿನಎಲ್ಲ ಕ್ಷೇತ್ರಗಳಲ್ಲಿಯೂ ಕ್ಷಣಾರ್ಧದಲ್ಲಿಯೇ ಓದಿ, ಕೇಳಿ, ತಿಳಿಯುವಂತಹ ತಂತ್ರಜ್ಞಾನಅಭಿವೃದ್ಧಿಆಗಿದ್ದು, ಸಂತಸಕರ ಸಂಗತಿಎಂದುಡಾ. ವೀಣಾ ಬಿರಾದಾರ ಹೇಳಿದರಲ್ಲದೇ, ಶಿಕ್ಷಕ ವೃತ್ತಿ ಮತ್ತುಅದರ ಮಹತ್ವಕುರಿತು ತಿಳಿಸಿಕೊಟ್ಟರು.
ರಸಾಯನ ಶಾಸ್ತ್ರ ವಿಭಾಗದಲ್ಲಿ 2023ನೇ ಸಾಲಿಗೆ ಆಯ್ಕೆಯಾದಧಾರವಾಡ ಕ.ವಿ.ವಿಯರಸಾಯನ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ, ಯುವ ವಿಜ್ಞಾನಿ ಕು. ಕರುಣಾಕೋರಗಾಂವಕರಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಕು. ಕರುಣಾಕೋರಗಾಂವಕರ ನನಗೆ ಅತೀವ ಸಂತಸವಾಗುತ್ತಿದೆ. ಈ ಪ್ರಶಸ್ತಿ ನನ್ನಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆಎಂದರು.
ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ವಿಜ್ಞಾನಿಗರಯುಗ. ಇನ್ನೂ ವಿಜ್ಞಾನಿಗಳಿಂದ ವಿಜ್ಞಾನಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಬೇಕಾದರೆ ವಿಜ್ಞಾನಿಗಳ ಪಾತ್ರ ಹಿರಿದಾಗಿದೆ. ಯುವ ವಿಜ್ಞಾನಿಗಳ ಪ್ರೇರಣೆಗೆ, ಸಾಧನೆಗೆ ಈ ಪ್ರಶಸ್ತಿಯಿಂದ ಸಾಧ್ಯ. ಪ್ರಪಂಚ ಸಾಕಷ್ಟು ಮುಂದೆ ಸಾಗುತ್ತಿದೆ. ಜಾತ್ಯಾತೀತವಾಗಿ ವಿಜ್ಞಾನದ ಬೆಳವಣಿಗೆ ನಂದಿಬೇವೂರಅವರಕೊಡುಗೆಅಪಾರವಾಗಿದೆಎಂದರು.
ಕು. ಶಿವಯೋಗಿ ಹಾವೇರಿ ಪ್ರಾರ್ಥಿಸಿದರು. ಶಂಕರ ಕುಂಬಿ ಸ್ವಾಗತಿಸಿದರು. ಡಾ. ಎಸ್.ಟಿ. ನಂದಿಬೇವೂರ ಪ್ರಶಸ್ತಿ ಪುರಸ್ಕøತರನ್ನು ಪರಿಚಯಿಸಿದರು. ಡಾ. ಆತ್ಮಾನಂದ ಬಾಗೋಜಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಅರುಣಾ ನಂದಿಬೇವೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಡಾ. ಧನವಂತ ಹಾಜವಗೋಳ, ಪ್ರೊ. ಸೀತಾರಾಮಪ್ಪ ಜೆ, ಪ್ರೊ. ಅರಳಗುಪ್ಪಿ, ರಮೇಶ ಸಿದ್ಧಾಂತಿ, ದೇಶಪಾಂಡೆ, ಎಂ.ಎಸ್.ಹೇಡೆ, ರಾಜಶೇಖರ ಸಿ. ಶ್ರೀಮತಿ ಬಳ್ಳಾರಿ, ಬಡಿಗಣ್ಣವರ, ಡಾ. ಗಾಡಿ, ಶ್ರೀಮತಿ ಅರ್ಚನಾ ನಂದಿಬೇವೂರ, ಶ್ರೀಮತಿ ಪ್ರಭಾ ಪಂಡಿತ, ಶ್ರೀಮತಿ ಶೈಲಜಾಜಡೆನವರ, ಸಿ.ಎಂ. ಅಂಗಡಿ, ಸಂತೋಜಿ ಬಿ. ಜಿ, ಮಂಜುನಾಥ ಮೇಗಲಮನಿ, ಶ್ರೀಮತಿ ಸಣ್ಣುಲಿ, ಡಾ. ಶಿವಕುಮಾರ ಪಾಟೀಲ ಉಪಸ್ಥಿತರಿದ್ದರು.