ಯುವ ವನಿತಾ ವೇದಿಕೆಯಿಂದ ವಿವೇಕಾನಂದ ಜಯಂತಿ 

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.೩೦; ವನಿತ ಸಮಾಜದ ಅಂಗ ಸಂಸ್ಥೆ ಯುವ ವನಿತಾದಿಂದ ಸ್ವಾಮಿ ವಿವೇಕಾನಂದ ಜಯಂತಿಯನ್ನು  ವನಿತಾ ಸಮಾಜದಲ್ಲಿ ಆಚರಿಸಲಾಯಿತು. ಮಾಜಿ ಶಿಕ್ಷಣ ಸಚಿವರು, ವನಿತಾ ಸಮಾಜದ ಗೌರವಾಧ್ಯಕ್ಷೆಯೂ ಆದ  ಡಾ. ಸಿ ನಾಗಮ್ಮ ಕೇಶವಮೂರ್ತಿ  ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಅಥಣಿ ಕಾಲೇಜಿನ ಪಿಜಿ ಮಕ್ಕಳಿಗೆ ಸ್ಪರ್ಧೆಗಳನ್ನ ಏರ್ಪಡಿಸಲಾಗಿತ್ತು.ಪ್ರಜಾಪ್ರಭುತ್ವದ ಸಂರಕ್ಷಣೆಯಲ್ಲಿ ಯುವ ಮತದಾರರ ಪಾತ್ರ ಎಂಬ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಥಣಿ ಕಾಲೇಜಿನ ಪಿಜಿ ಮಕ್ಕಳು ಭಾಗವಹಿಸಿ ಬಹುಮಾನಗಳನ್ನ ಪಡೆದರು.ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ತೀರ್ಪುಗಾರರಾಗಿ ಆಗಮಿಸಿದ ಮಮತಾ ನಾಗರಾಜ್  ವಿವೇಕಾನಂದರ ಪರಿಚಯವನ್ನು ನೀಡಿ ಮಕ್ಕಳಿಗೆ ಚರ್ಚಾ ಸ್ಪರ್ಧೆಯ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು.ಸಮಾಜದ ಅಧ್ಯಕ್ಷೆ  ಸೌಮ್ಯ ಸತೀಶ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯದರ್ಶಿ ಅಭಿಲಾಷ  ಸ್ವಾಗತಿಸಿದರು. ವಚನಾಮೃತ ಬಳಗದ ಸದಸ್ಯರಾದ ಮಧುಮತಿ ಗಿರೀಶ್, ಶಾಂತ ಶಿವಶಂಕರ್, ರೇಖಾ ಬೇತೂರ್ ,ಸುಮಾ ,ಜ್ಯೋತಿ  ಪ್ರಾರ್ಥಿಸಿದರು.  ಲಕ್ಷ್ಮಿ ನಿರೂಪಿಸಿದರು.ಸಹಕಾರ್ಯದರ್ಶಿ ಕೀರ್ತಿ, ಕಾರ್ಯದರ್ಶಿ ಸುಷ್ಮಾ ಹಾಗೂ ಸಮಿತಿಯ ಸದಸ್ಯರು, ಸಿಬ್ಬಂದಿ ವರ್ಗದವರು , ಹಾಗೂ ಅಥಣಿ ಕಾಲೇಜಿನ ಸಿಬ್ಬಂದಿ ವರ್ಗದವರು ಮಕ್ಕಳು ಭಾಗವಹಿಸಿದ್ದರು .