ಯುವ” ರಾಜ ‘ರಣಧೀರ‌ ಕಂಠೀರವ’

  • ಚಿಕ್ಕನೆಟಕುಂಟೆ ಜಿ.ರಮೇಶ್

ವರನಟ ಡಾ.ರಾಜಕುಮಾರ್ ಅವರ ಕುಟುಂಬದಿಂದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪ್ರವೇಶ ಮಾಡಿದೆ. ಹಿರಿಯ ನಟ- ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವ ರಾಜ್ ಕುಮಾರ್” ಯುವ ರಣಧೀರ ಕಂಠೀರವ ” ಚಿತ್ರದ ಮೂಲಕ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮೊದಲ ಪ್ರಯತ್ನದಲ್ಲಿಯೇ ಐತಿಹಾಸಿಕ ಕಥೆಗೆ ಕಾಲ್ಪನಿಕ ದೃಶ್ಯ ವೈಭವವನ್ನು ಪಾತ್ರದ ಮೂಲಕ ಅನಾವರಣ ಮಾಡಲು ಎಲ್ಲ ಸಿದ್ಧತೆಗಳನ್ನು ಯುವ ರಾಜಕುಮಾರ್ ಮಾಡಿಕೊಂಡಿದ್ದಾರೆ.

ಐದು ನಿಮಿಷದ ಟೀಸರ್ ನಲ್ಲಿ ಭರ್ಜರಿ ಪೈಟ್‌ ಮತ್ತು ಪವರ್ ಫುಲ್ ಡೈಲಾಗ್ ಮೂಲಕ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಚಿತ್ರರಂಗಕ್ಕೆ ಮತ್ತೊಬ್ಬ ಭರವಸೆಯ ನಟ ಸಿಗುವ ನಿರೀಕ್ಷೆ ಹುಟ್ಟುಹಾಕಿದ್ದಾರೆ.

ಮನೆಯ ಮಗನನ್ನು ಆಶೀರ್ವಾದ ಮಾಡಲು ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ದಂಪತಿಗಳು,ಸಹೋದರ ವಿನಯ್ ರಾಜ್ ಕುಮಾರ್, ಶ್ರೀಮುರುಳಿ, ವಿಜಯ ರಾಘವೇಂದ್ರ ಸಹೋದರರು ಸೇರಿದಂತೆ ಕನ್ನಡ ಚಿತ್ರರಂಗದ ನಿರ್ದೇಶಕರು,ಗಣ್ಯರು ಆಗಮಿಸಿ ರಾಜಕುಮಾರ್ ಅವರಿಗೆ ಶುಭ ಹಾರೈಸಿ ಚಿತ್ರರಂಗದಲ್ಲಿ ಹೆಸರು ಮಾಡಲಿ ಎಂದರು.

ಚಿತ್ರದ ಪ್ರೋಮೋ ಮತ್ತು ಶೀರ್ಷಿಕೆ ಬಿಡುಗಡೆ ಮಾಡಿದ ಪುನೀತ್ ರಾಜಕುಮಾರ್ , ‘ಯುವ’ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾನೆ.‌ ಶೋ ರೀಲು ಚಿತ್ರೀಕರಣದ ಸಮಯದಲ್ಲಿ ಹೋಗಿದ್ದೆ. ಚೆನ್ನಾಗಿ ಮಾಡುವ‌ ಜೊತೆಗೆ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾನೆ.ಯುವನ ಮಾತುಗಳನ್ನು ಕೇಳಿದರೆ ಅಪ್ಪಾಜಿ ನೆನಪಾಗುತ್ತಾರೆ. ಯುವನಿಗೆ‌ ಒಳ್ಳೆಯದಾಗಲಿ ಪ್ರೊಮೊ ನೋಡಿದರೆ ಚಿತ್ರ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ರಾಘವೇಂದ್ರ ರಾಜಕುಮಾರ್, ‘ಯುವ ‘ಯಾವುದೇ ಕೆಲಸ ಮಾಡಿದರೂ ಅದಕ್ಕೆ ನಾನು ಬೇಡ ಅಂದಿಲ್ಲ . ಅದಕ್ಕೆ ಕಾರಣ ಆತ ಏನೇ ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾನೆ ಎನ್ನುವ ನಂಬಿಕೆ ನನ್ನದು. ಮದುವೆ ವಿಷಯದಿಂದ ಹಿಡಿದು ನಾಯಕನಾಗುವ ತನಕ ಆತನ ಪ್ರತಿಯೊಂದು ಕೆಲಸವನ್ನು ಪ್ರೀತಿಯಿಂದಲೇ ಹರಸಿ ಆತನನ್ನು ಹುರಿದುಂಬಿಸಿದ್ದೇನೆ ಎಂದು ಮೆಚ್ಚುಗೆಯ ಮಾತನಾಡಿದರು.

ನಮ್ಮ ಕುಟುಂಬದ ಮೇಲೆ ಮೊದಲಿನಿಂದಲೂ ಜನರ ಆಶೀರ್ವಾದವಿದೆ. ಇದೀಗ ಪುತ್ರನಿಗೂ ಸಹಕಾರ ಬೆಂಬಲ ಇರಲಿ ಎಂದು ಕೇಳಿಕೊಂಡರು ರಾಘಣ್ಣ.

ನಟ ಯುವ ರಾಜ್ ಕುಮಾರ್, ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಎಲ್ಲರ ಪ್ರೀತಿ ಸಹಕಾರ ಇರಲಿ ಎಂದು ಮನವಿ ಮಾಡಿಕೊಂಡರು. ಚಿತ್ರಕ್ಕೆ ಪುನೀತ್ ರುದ್ರನಾಗ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅಂದುಕೊಂಡಂತೆ ಆದರೆ ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ರವಿ ಬಸ್ರೂರ್ ಸಂಗೀತ ಚಿತ್ರಕ್ಕಿದೆ. ಟೀಸರ್ ಮೂಲಕವೇ ಸದ್ದು ಮಾಡಿದ್ದಾರೆ.ಸಂಕೇಶ್ ಛಾಯಾಗ್ರಹಣ ಚಿತ್ರಕ್ಕಿದೆ.


ಅಣ್ಣಾವ್ರ ಮೊಮ್ಮಗ ಪ್ರವೇಶ

ಅಣ್ಣಾವ್ರ ಮೊಮ್ಮಗ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ ಎನ್ನುವ ವಿಷಯ ಸಣ್ಣದಲ್ಲ .ಡಾ. ರಾಜಕುಮಾರ್ ಅವರ ಬೆಳೆಯುವ ಮತ್ತು ಹೆಸರು ಮಾಡುವ ಕನಸು ಕಟ್ಟಿಕೊಂಡಿದ್ದಾರೆ.ಯುವ ರಾಜ್ ಕುಮಾರ್. ಈ ಹಿನ್ನೆಲೆಯಲ್ಲಿ ಯುವ ಅವರನ್ನು ಹರಸಲು ನಾಯಕರಾದ ಕೃಷ್ಣ, ಬಹದ್ದೂರ್ ಚೇತನ್, ಮಹೇಶ್ ಕುಮಾರ್, ಸಂತೋಷ್ ಆನಂದ್ ರಾಮ್, ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಿ ಹರಸಿದರು.