ಯುವ ಮುಖಂಡ ಸಿದ್ಧಾರ್ಥಸಿಂಗ್ ಹುಟ್ಟುಹಬ್ಬ ಸಂಭ್ರಮಿಸಿದ ಅಭಿಮಾನಿಗಳು.

ಸಂಜೆವಾಣಿ ವಾರ್ತೆಹೊಸಪೇಟೆ ಆ11: ಬಿಜೆಪಿಯ ಯುವ ಪ್ರತಿಭೆ ಯುವ ಮುಖಂಡ ಸಿದ್ಧಾರ್ಥಸಿಂಗ್ ರವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು.ವಿಜಯನಗರ ನಗರ ಕ್ಷೇತ್ರದಲ್ಲಿ ಚುನಾವಣೆಯ ನಂತರ ಒಂದೆರಡು ಬಾರಿ ಕಾಣಿಸಿಕೊಂಡ ಸಿದ್ಧಾರ್ಥಸಿಂಗ್ ಸಹ ಈವರೆಗೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲಾ, ಗುರುವಾರ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರತ್ಯಕ್ಷವಾಗುವ ಮೂಲಕ ಅಭಿಮಾನ ಹಾಗೂ ಪ್ರೀತಿಗೆ ಚಿರ ಋಣಿಯಾಗಿರುವೆ ಎಂದು ಅಭಿಮಾನಿಗಳ ಪ್ರೀತಿಯ ಹಾರೈಕೆ ಸ್ವೀಕರಿಸಿದರು,ಸಿದ್ಧಾರ್ಥಸಿಂಗ್ ಹುಟ್ಟುಹಬ್ಬದ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಕೇಕ್ ಕತ್ತರಿಸುವ ಮೂಲಕ ಸಿಹಿ ಹಂಚಿಕೆ, ವಿವಿಧಡೆ ಅನ್ನ ಸಂತರ್ಪಣೆಯೂ ಸೇರಿದಂತೆ ನಾಯಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಹಂಪಿ ವಿರೂಪಾಕ್ಷನ ದರ್ಶನ ಆರ್ಶಿವಾದ ಸೇರಿದಂತೆ ಅಭಿಮಾನಿಗಳನ್ನು ಖುದ್ಧಾಗಿ ಭೇಟಿ ಮಾಡಿ ಹಾರೈಕೆಗಳನ್ನು ಸ್ವೀಕರಿಸಿದ ಸಿದ್ಧಾರ್ಥಸಿಂಗ್ ಸಹ ಹೊಸಪೇಟೆ ನಗರದ ಬಿಜೆಪಿ ಜಿಲ್ಲಾ ಕಚೇರಿ, ದೇವಸ್ಥಾನಗಳು ಅಭಿಮಾನಿಗಳು ಕಮಲಾಪುರ ಹಾಗೂ ವಿವಿಧ ಪ್ರದೇಶಗಳು ಹಾಗೂ ಕರೆದಲ್ಲಿಗೆ ಬಂದು ಸಂಭ್ರಮವನ್ನು ಇಮ್ಮಡಿಗೊಳಿಸಿದರು ಇದೆ ಅಭಿಮಾನ ಇರಲಿ ನಾನು ನಿಮ್ಮೊಂದಿಗೆ ಇರುವೆ ಎಂದು ಹಾರೈಕೆ ಸ್ವೀಕರಿಸಿದರು.