ಯುವ ಮನಸ್ಸು ಉಲ್ಲಸಿತಗೊಂಡು ಸಮರ್ಥ ಮನಸ್ಕರಾಗಿ ಬೆಳೆಯಲಿ’-ಡಾ. ಚಂದ್ರಶೇಖರ ದಾಮ್ಲೆ

ಸುಳ್ಯ, ಜ.೧೪- ವಿವೇಕಾನಂದರು ಯುವಜನತೆಗೆ ಪ್ರೇರಣೆಯಾಗಿದ್ದಾರೆ. ಯುವ ಮನಸ್ಸು ಉಲ್ಲಸಿತಗೊಂಡು ಸಮರ್ಥ ಮನಸ್ಕರಾಗಿ ಬೆಳೆದಾಗ ಯುವ ದಿನಾಚರಣೆಯು ಅರ್ಥಪೂರ್ಣವಾಗುವುದು. ಸಾಧನೆಯ ದಾರಿಯನ್ನು ಹುಡುಕಿ, ಸ್ವಸಾಮರ್ಥ್ಯದಿಂದ ಬೆಳೆಯಬೇಕು. ವಿವೇಕಾನಂದರ ಬದುಕಿನ ಸಂದೇಶಗಳು ಎಲ್ಲರಿಗೂ ದಾರಿದೀಪವಾಗಲಿ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.
ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ’ಯುವ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಶಿಕ್ಷಕ ದೇವಿಪ್ರಸಾದ ಜಿ ಸಿ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ, ವಿದ್ಯಾರ್ಥಿಗಳಾದ ಗೌರಿ ಕೆ, ಸಂದೇಶ್ ಕೆ. ಆರ್, ಉದಿತ್ ಪಿ.ಪಿ, ಚಿನ್ಮಯಿ ಕೆ.ಜಿ ವಿವೇಕಾನಂದರ ಜೀವನಾದರ್ಶಗಳನ್ನು ವಿವರಿಸಿದರು. ವಿದ್ಯಾರ್ಥಿಗಳಾದ ವೈಷ್ಣವ್ ಕೆ.ಎಂ ಸ್ವಾಗತಿಸಿ, ಕಿಶನ್ ಎಸ್.ಆರ್ ವಂದಿಸಿದರು. ಹಯನ ಪಿ ಎ ನಿರೂಪಿಸಿದರು.