ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು: ಥೈತುಯಿಂಗ್ ಫಮೈ

ಬೀದರ್;ಮೇ.5: ಜಿಲ್ಲೆಯಲ್ಲಿರುವ ಪ್ರತಿಯೊಬ್ಬ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ನಿಮ್ಮಿಂದಲೇ ಮತದಾನ ಪ್ರಮಾಣ ಹೆಚ್ಚಳಕ್ಕೆ ನಾಂದಿಯಾಗಬೇಕು ಎಂದು ಸಾಮಾನ್ಯ ವೀಕ್ಷಕ ಥೈತುಯಿಂಗ್ ಫಮೈ ಹೇಳಿದರು.

ಅವರು ಬುಧವಾರ ನಗರ ಪಾಪನಾಶ ಕೆರೆಯ ಬಳಿ ಹಮ್ಮಿಕೊಂಡಿದ ಕ್ಯಾಂಡಲ್ ಮಾರ್ಚ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದ ಸಂವಿಧಾನದ ಅಡಿ ಸಾರ್ವತ್ರಿಕ ಚುನಾವಣಾ ಪದ್ದತಿ ಅಳವಡಿಸಿಕೊಂಡಿದ್ದು ನಮ್ಮೆಲರ ಸೌಭಾಗ್ಯ. ಆದರಿಂದಲೇ ನಮಗೆ ಮತದಾನ ಮಾಡಲು ಅವಕಾಶ ದೊರಕಿದೆ ಇದರ ಸದುಪಯೋಗ ನಾವು ಪಡೆಯಲು ಮತದಾನ ಮಾಡಬೇಕು ಎಂದರು.

ಜಿಲ್ಲಾ ಸ್ವೀಪ್ ಸಮಿತಿ ನೂಡಲ್ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೀಲ್ಪಾ ಎಂ. ಮಾತನಾಡಿ ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ನಿಸ್ಪಕ್ಷಪಾತದಿಂದ ಚುನಾವಣೆ ನಡೆಸಲು ಜಿಲ್ಲಾಡಳಿತ ಈಗಾಗಲೇ ತಯ್ಯಾರಿ ಮಾಡಿಕೊಂಡಿದೆ ಹಾಗೂ ಸ್ವೀಪ್ ಸಮಿತಿ ಸಹ ಮತದಾನ ಪ್ರಮಾಣ ಹೆಚ್ಚಳಕ್ಕೆ ಸಾಕಷ್ಟು ಜಾಗೃತಿ ಮೂಡಿಸಿದೆ ಎಂದು ಹೇಳಿದರು.

ಮೇ 10 ಮತದಾನ ಮಾಡುವುದನ್ನು ಯಾರು ಮರೆಬಾರದು. ಎಲ್ಲ ಸೇರಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೊಣ ಎಂದರು

ಈ ಸಂದರ್ಭದಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕ ಹೊಂಗಾಯ ವಷರ್ಂಗ್ ರಾಜ್ಯಮಟ್ಟ ಚುನಾವಣಾ ತರಬೇತಿದಾರ ಡಾ.ಗೌತಮ ಅರಳಿ, ಯೋಜನಾ ನಿರ್ದೇಶಕ ಎಸ್.ಎಸ್.ಮಠಪತಿ, ನರೇಗಾ ಅಭಿವೃದ್ದಿ ಸಹಾಯಕ ಕಾರ್ಯದರ್ಶಿ ಜೆ.ಪಿ ಚೌಹಾಣ್, ಜಿಲ್ಲಾ ಪಂಚಾಯತ ಎಪಿಓ ರಾಜಕುಮಾರ ಪಾಟೀಲ್, ಬೀದರ ತಾಲ್ಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಮಾಣಿಕರಾವ ಪಾಟೀಲ್, ತಾಲ್ಲೂಕ ಪಂಚಾಯತ ಸಹಾಯಕ ನಿರ್ದೇಶಕರು ಸಂಜುವಕುಮಾರ,ಜಿಲ್ಲಾ ಪಂಚಾಯತ ವ್ಯವಸ್ಥಾಪಕ ಉಮೇಶ್ ಪಾಟೀಲ್, ಸಹಾಯಕ ಲೆಕ್ಕಿಗ ಪ್ರಾವೀಣ ಸ್ವಾಮಿ, ಪಂಡಿತ್, ತಾಲ್ಲೂಕ ಪಂಚಾಯತ ಸಿಬ್ಬಂದಿಗಳಾದ ,ರಮೇಶ್ ಚಟ್ನಳ್ಳಿ, ಸುನಿತಾ ರೆಡ್ಡಿ, ಯೊಗೀನಿ ಲದ್ದೆ, ಪ್ರಣಿತಾ, ಪ್ರೀಯಾ,ಐಇಸಿ ಸಂಯೋಜಕ ಸತ್ಯಜಿತ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.