ಯುವ ಮತದಾರರನ್ನು ಆಕರ್ಷಿಸುತ್ತಿರುವ ಬಿಜೆಪಿ ಅಭ್ಯರ್ಥಿ ಶ್ರವಣಕುಮಾರ್ ರೆಡ್ಡಿ

ಬಳ್ಳಾರಿ ಏ 24: ನಗರದ ಬಿಸಲಹಳ್ಳಿ, ವೆಂಕಟೇಶ್ವರನಗರ, ರಾಘವೇಂಧ್ರ ಕಾಲೋನಿ, ಮೊದಲಾದ ಪ್ರದೇಶಗಳನ್ನು ಹೊಂದಿರುವ 18 ನೇವಾರ್ಡಿನ ಬಿಜೆಪಿ ಅಭ್ಯರ್ಥಿ ಗಾಲಿ ಶ್ರವಣಕುಮಾರ್ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ಮಾಡುವ ವೇಳೇ ಯುವ ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಯುವ ಸಮೂಹ ರಾಜಕೀಯಕ್ಕೆ ಬಂದು ಸ್ವಚ್ಚ, ಪ್ರಮಾಣಿಕ ರಾಜಕಾರಣದ ಮೂಲಕ ದೇಶದ ಅಭಿವೃದ್ದಿಗೆ ಪೂರಕವಾಗಿ ದುಡಿಯಬೇಕು ಎಂಬುದನ್ನು ತಮ್ಮ ಪ್ರಚಾರದ ಭಾಷಣದಲ್ಲಿ ಉಲ್ಲೇಖಿಸುತ್ತ ಶ್ರವಣಕುಮಾರ ರೆಡ್ಡಿ. ರಾಜಕೀಯ ನಮಗೇಕೆ ಬೇಕು ಎನ್ನುವ ಯುವ ಸಮೂಹವನ್ನು ಸಹ ಹತ್ತಿರ ಬರುವಂತೆ ಮಾಡಿಕೊಂಡಿದ್ದಾರೆ. ಅವರ ನಡೆನುಡಿ ಮಾತುಗಳಿಂದ ಆಕರ್ಷಿತರಾದ ಯುವ ಸಮೂಹ ಅವರು ತಮ್ಮ ಪ್ರದೇಶಕ್ಕೆ ಬಂದಾಗ ಆತ್ಮೀಯವಾಗಿ ಸ್ವಾಗತಿಸಿ ಮತ ನೀಡುವ ಭರವಸೆ ನೀಡುತ್ತಿರುವುದು. ಶ್ರವಣಕುಮಾರ ರೆಡ್ಡಿ ಗೆಲುವಿನ ಹಾದಿ ಸುಲಭವಾಗಬಹುದು ಎನಿಸುತ್ತಿದೆ.