ಯುವ ಮಂಥನ: ‘ಮಾದರಿ ವಿಶ್ವಸಂಸ್ಥೆ’ ಅಣುಕು ಸಂಸತ್ ಅಧಿವೇಶನ

ವಿಜಯಪುರ,ಫೆ.23: ನಗರದ ಕರ್ನಾಟಕ ರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಯುಜಿಸಿ ಮತ್ತುಎನ್‍ಎಸ್‍ಎಸ್‍ಘಟಕ ಸಹಯೋಗದಲ್ಲಿ ವಿಕಸಿತ ಭಾರತ @2047 ಸಂಕಲ್ಪದಅಡಿಯಲ್ಲಿಯುವ ಮಂಥನ ಕಾರ್ಯಕ್ರಮದ ‘ಮಾದರಿ ವಿಶ್ವಸಂಸ್ಥೆ’ ಅಣುಕು ಸಂಸತ್ತು ಅಧಿವೇಶನವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಜಾಗತಿಕ ವಿಷಯವಾದ ಪರಿಸರ ಜೀವನ ಶೈಲಿ ಕುರಿತ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದ ವಿವಿಧ ಕ್ಷೇತ್ರಗಳಲ್ಲಿ ಆಗುವ ದುಷ್ಪರಿಣಾಮಗಳ ಕುರಿತು ಅಣಕು ಸಂಸತ್ತು ಅಧಿವೇಶನದಲ್ಲಿ ಚರ್ಚಿಸಲಾಯಿತು.
ವಿಶ್ವಸಂಸ್ಥೆಯ ಅಣುಕು ಸಂಸತ್ತು ಅಧಿವೇಶನದಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಪ್ರತಿನಿಧಿಸಿದ್ದರು. ಭಾರತದ ಪ್ರಧಾನಿಯಾಗಿ ಕೀರ್ತಿ ನಾಟಿಕರ, ಜಪಾನ ಪ್ರಧಾನಿಯಾಗಿ ಅಶ್ವಿನಿ ಅಕಲ್‍ವಾಡಿ, ಬಾಂಗ್ಲಾದೇಶದ ಪ್ರಧಾನಿಯಾಗಿ ರಾಧಿಕಾ ಕಾಂಬ್ಲೆ, ಪ್ರಾನ್ಸ್‍ನ ರಾಷ್ಟ್ರಪತಿಯಾಗಿ ಸವಿತಾ ತೆಗ್ಗಿ, ಇಂಗ್ಲೆಂಡ್‍ನ ಪ್ರಧಾನಿಯಾಗಿ ಮಲ್ಲಮ್ಮ ಕುಂಬಾರ, ಇಟಲಿಯ ಪ್ರಧಾನಿಯಾಗಿ ಮುಕ್ತಾಬಾಯಿ ಟಾಕೆ, ಕೆನಡಾದ ಪ್ರಧಾನಿಯಾಗಿ ಪವಿತ್ರಾ ವಡೆಯರ, ಇರಾಕ್ ರಾಷ್ಟ್ರಪತಿಯಾಗಿ ಪರ್ವಿನ್ ಅವರು ಆಯಾ ದೇಶದ ಜಾಗತಿಕ ತಾಪಮಾನ ಹಾಗೂ ಪರಿಸರ ಸಮಸ್ಯೆಗಳ ಕುರಿತು ಮತು ರಾಷ್ಟ್ರದ ಅಸ್ಮಿತೆಗೆ ಧಕ್ಕೆ ತರುವ ಕಾರಣಗಳು ಮತ್ತು ಅವುಗಳ ಪರಿಹಾರೋಪಾಯಗಳ ಕುರಿತು ಚರ್ಚಿಸಿದರು.
ಸಂಸತ್‍ನಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳಾಗಿ ನೇಹಾ ನಾಗಠಾಣ, ಶಾಹೀರಾ ಬೇಗುಮ್,ಗಾಯತ್ರಿ (ಬಿಜೆಪಿ), ಗೌರಾಬಾಯಿ, ಸುನಂದಾ (ಕಾಂಗ್ರೆಸ್), ಮಯೂರಿ (ಶಿವಸೇನೆ), ಶಾಂತಮ್ಮ (ಟಿಎಮ್‍ಸಿ), ಬಸಮ್ಮ (ಎಸ್‍ಪಿ), ಲಕ್ಷ್ಮೀ (ಎಎಪಿ), ವಿದ್ಯಾರ್ಥಿನಿಯರು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು.
ವಿಶ್ವ ಸಂಸ್ಥೆಯ ಸಂಸತ್ ಅಧೀವೇಶನದ ಅಧ್ಯಕ್ಷರಾಗಿ ವಿದ್ಯಾರ್ಥಿನಿ ವಿದ್ಯಾರಾಣಿ ಯಾದವ ಅವರು ಕಾರ್ಯನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಯುಜಿ ವಿದ್ಯಾರ್ಥಿನಿಯರು ತಯಾರಿಸಿರುವ ವ್ಯಂಗ್ಯ ಚಿತ್ರಗಳನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತು.
ವಿಜೇತರು: ಈ ಯುವ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿನಿಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿ ವಿಜೇತ ವಿದ್ಯಾರ್ಥಿನಿಯರ ವಿವರ ಈ ಕೆಳಗಿನಂತಿವೆ:
ಪ್ರಥಮ ಸ್ಥಾನ ಶಿಕ್ಷಣ ವಿಭಾಗದ ವಿದ್ಯಾರ್ಥಿನಿ ಪರ್‍ವಿನ (ಇರಾಕ್), ದ್ವಿತೀಯ ಸ್ಥಾನ ಇಂಗ್ಲಿಷ್ ವಿಭಾಗದ ವಿದ್ಯಾರ್ಥಿನಿ ಕೀರ್ತಿ ನಾಟಿಕರ್ (ಭಾರತ), ತೃತೀಯ ಸ್ಥಾನ ಶಿಕ್ಷಣ ವಿಭಾಗದ ವಿದ್ಯಾರ್ಥಿನಿ ಮುಕ್ತಾಬಾಯಿ ಟೋಕೆ (ಇಟಲಿ).
ಕಾರ್ಯಕ್ರಮದಲ್ಲಿ ಪ್ರೊ. ಶಾಂತಾದೇವಿ. ಪ್ರೊ. ವಿಷ್ಣು ಶಿಂದೆ, ಪ್ರೊ. ನಾಮದೇವಗೌಡ, ಡಾ. ತಹಮೀನಾ ನಿಗಾರ ಸುಲ್ತಾನಾ, ಡಾ. ಪ್ರಜಾಪತಿ, ಡಾ. ಕಲಾವತಿ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.