ಯುವ ಬ್ರಿಗೇಡ್ ಗೆ 7 ನೇ ವರ್ಷಾಚರಣೆ ಸಂಭ್ರಮ

ಬಾದಾಮಿ, ಜೂ9: ಯುವ ಬ್ರಿಗೇಡ್‍ನ 7 ನೇ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಗರದ ಯುವ ಬ್ರಿಗೇಡ್‍ನ ಸದಸ್ಯರು ಕೋವಿಡ್ ನಿಯಮವನ್ನು ಪಾಲಿಸಿ “ಕಣ ಕಣದಲ್ಲೂ ಶಿವ” ಎನ್ನುವ ಕಾರ್ಯಕ್ರಮವನ್ನು ಮಾಡಿ ಸಂಭ್ರಮಿಸಿದರು.
ಶಿಕ್ಷಕರಾದ ಎಸ್. ಬಿ. ಪವಾಡಶೆಟ್ಟಿ ಅವರು ಮಾತನಾಡಿ, ಬನಶಂಕರಿ ಹೊಂಡದ ಸುತ್ತಲಿನ ಪ್ರದೇಶದಲ್ಲಿ ಹಾಳಾಗಿ ಬಿದ್ದಿರುವ ದೇವರ
ಭಾವಚಿತ್ರಗಳನ್ನು, ಆಯ್ದುಕೊಂಡು ಅದರಲ್ಲಿರುವ ದೇವರ ಚಿತ್ರಪಟಗಳನ್ನು ಬೇರ್ಪಡಿಸಿ ವಿಲೇವಾರಿಗೆ ಮಾಡಿ, ಅವುಗಳನ್ನು ನೆಲದಲ್ಲಿ ಹೂತು ಅದರ ಮೇಲೆ ಗಿಡವನ್ನು ನೆಡಲಾಯಿತು. ನಾವೇ ಪೂಜಿಸಿದ ದೇವರ ಭಾವಚಿತ್ರಗಳನ್ನು, ಯಾವದೋ ಕಾರಣಕ್ಕೆ ಬಿಸಾಕಿರುವಂತಹ ಭಾವಚಿತ್ರಗಳನ್ನು, ಆಯ್ದು ಅವುಗಳಲ್ಲಿರುವ ದೇವರ ಚಿತ್ರ ಬಿಡಿಸಿಕೊಂಡು, ಅವುಗಳನ್ನು ನೆಲದಲ್ಲಿ ಹಾಕಿ ಅದರ ಮೇಲೆ ಗಿಡಗಳನ್ನು ನೆಡಲಾಯಿತು.
ಇದರ ಅರ್ಥ ನಮ್ಮ ಶಿವ ಸರ್ವ ವ್ಯಾಪಿ, ಮಣ್ಣಿನಲ್ಲಿ ಬೆರೆತು ಗಾಳಿಯಲ್ಲಿ ಸೇರಿಕೊಳ್ಳುತ್ತಾನೆ ಎನ್ನುವ ನಂಬಿಕೆಯಿಂದ ಈ ಕಾರ್ಯಕ್ರಮ ಮಾಡಲಾಯಿತು.
ಯುವಾ ಬ್ರಿಗೇಡ್ ಬಾಗಲಕೋಟೆ ಕಣಕಣದಲ್ಲೂ ಶಿವ ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ಬಿ. ಮುದಕನಗೌಡರ, ಸುಭಾಸ್ ಹಡಪದ್, ಚೇತನ್ ಚಿಚಡಿ , ಬಸವರಾಜ್, ಪಾಲ್ಗೊಂಡಿದ್ದರು.