ಬೀದರ್:ಜೂ.22: ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಯುವ ಉತ್ಸವ ಯುವ ಪ್ರತಿಭೆಗಳಿಗೆ ವೇದಿಕೆಯಾಯಿತು.
ಸಾಂಪ್ರದಾಯಿಕ ನೃತ್ಯ, ಚಿತ್ರಕಲೆ, ಭಾಷಣ, ಕವನ ರಚನೆ ಹಾಗೂ ಮೊಬೈಲ್ ಫೆÇಟೊಗ್ರಫಿ ಸ್ಪರ್ಧೆಗಳಲ್ಲಿ ಯುವ ಜನರು ಉತ್ಸಾಹದಿಂದ ಪಾಲ್ಗೊಂಡರು. ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಕವನ ರಚನೆ ಸ್ಪರ್ಧೆಯಲ್ಲಿ ಚಂದ್ರಕಾಂತ ಗಿರಿ (ಪ್ರಥಮ), ಪವನಕುಮಾರ (ದ್ವಿತೀಯ), ಪ್ರಿಯಾಂಕಾ (ತೃತೀಯ), ಭಾಷಣ ಸ್ಪರ್ಧೆಯಲ್ಲಿ ಮಹಮ್ಮದ್ ಸೊಹೇಲ್ (ಪ್ರಥಮ), ಸಂಜನಾ ಸುನೀಲಕುಮಾರ (ದ್ವಿತೀಯ), ಆಕಾಶ ಪಾಟೀಲ (ತೃತೀಯ), ಚಿತ್ರಕಲೆ ಸ್ಪರ್ಧೆಯಲ್ಲಿ ದೀಪಿಕಾ ಸೋಮಶೇಖರ(ಪ್ರಥಮ), ಡಿಂಪಲ್ ಕೆ (ದ್ವಿತೀಯ), ಅವಿನಾಶ ಉಜಳಂಬೆ (ತೃತೀಯ), ಮೊಬೈಲ್ ಫೆÇಟೊಗ್ರಫಿಯಲ್ಲಿ ಸುದೀಪಕುಮಾರ ವಿ (ಪ್ರಥಮ), ಶಿವಕಾಂತ ಮಸ್ಕಲೆ (ದ್ವಿತೀಯ), ವೀರೇಶ (ತೃತೀಯ), ಸಾಂಪ್ರದಾಯಿಕ ನೃತ್ಯ ಸ್ಪರ್ಧೆಯಲ್ಲಿ ಶಿವಕುಮಾರ ಮತ್ತು ತಂಡ (ಪ್ರಥಮ), ಲಕ್ಷ್ಮಿ ಮೋಹನ್ ರಾಠೋಡ್ ಹಾಗೂ ತಂಡ (ದ್ವಿತೀಯ), ನಂದಿನಿ ಮತ್ತು ತಂಡ (ತೃತೀಯ) ಬಹುಮಾನ ಪಡೆದುಕೊಂಡರು.
ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿಯ ಮಳಿಗೆಗಳನ್ನು ತೆರೆಯಲಾಗಿತ್ತು. ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.
ಜಿಲ್ಲೆಗೆ ಕೀರ್ತಿ ತನ್ನಿ: ಯುವಜನರು ಪ್ರತಿಭಾ ಪ್ರದರ್ಶನಕ್ಕೆ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಜಿಲ್ಲಾ ಯುವ ಉತ್ಸವದ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶರಣಯ್ಯ ಮಠಪತಿ ಹೇಳಿದರು.
ಯುವಜನರ ಪ್ರತಿಭೆ ಗುರುತಿಸಿ, ಪೆÇ್ರೀತ್ಸಾಹಿಸುವುದೇ ಯುವ ಉತ್ಸವಗಳ ಆಯೋಜನೆ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ನುಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವಕರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘಗಳ ಮೂಲಕ ಯುವಕರಿಗೆ ಕೌಶಲ ತರಬೇತಿ ಹಾಗೂ ಸ್ವಾವಲಂಬಿ ಬದುಕಿಗೆ ಧನ ಸಹಾಯ ಮಾಡಲಾಗುತ್ತಿದೆ. ಯುವಕರು ಇವುಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ನಿರ್ದೇಶಕ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ, ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ರಾಜಕುಮಾರ ಪಾಟೀಲ, ಜಿಲ್ಲಾ ಪಂಚಾಯಿತಿ ಲೆಕ್ಕ ಸಹಾಯಕ ಪ್ರವೀಣ್ ಸ್ವಾಮಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಓಂಪ್ರಕಾಶ ರೊಟ್ಟೆ ಮಾತನಾಡಿದರು.
ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಪ್ರಾಚಾರ್ಯ ಡಾ. ಪಿ. ವಿಠ್ಠಲರೆಡ್ಡಿ, ಉಪ ಪ್ರಾಚಾರ್ಯ ಅನಿಲಕುಮಾರ ಆಣದೂರೆ, ನಿವೃತ್ತ ಪ್ರಾಚಾರ್ಯ ಬಸವರಾಜ ಸ್ವಾಮಿ ಹೆಡಗಾಪುರ, ಉಪನ್ಯಾಸಕಿ ರೇಣುಕಾ ಮಳ್ಳಿ ಇದ್ದರು. ಎಸ್.ಬಿ. ಕುಚಬಾಳ್, ಮಹಾರುದ್ರ ಡಾಕುಳಗಿ, ಯೋಗೀಶ್ ಮಠದ, ಕವಿತಾ ಶಿವದಾಸ, ಮಹೇಶ ಮಜಗೆ, ಸುನಿತಾ ಕೂಡ್ಲಿಕರ್, ಜಗದೀಶ್ವರ ಬಿರಾದಾರ ಸ್ಪರ್ಧೆಗಳ ನಿರ್ಣಾಯಕರಾಗಿದ್ದರು.
ನಾಗಯ್ಯ ಸ್ವಾಮಿ ಸ್ವಾಗತಿಸಿದರು. ಜಯಶ್ರೀ ನಿರೂಪಿಸಿದರು. ಸೋಮನಾಥ ವಂದಿಸಿದರು.
ನೆಹರೂ ಯುವ ಕೇಂದ್ರ, ಶ್ರೀ ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಬಿ.ವಿ. ಭೂಮರಡ್ಡಿ ಕಾಲೇಜು ಹಾಗೂ ಜಿಲ್ಲೆಯ ಆಯ್ದ ಸಂಘಗಳ ಸಹಯೋಗದಲ್ಲಿ ಯುವ ಉತ್ಸವ ಸಂಘಟಿಸಲಾಗಿತ್ತು.