
ಹಿರಿಯ ನಿರ್ದೇಶಕ ಸತ್ಯ ಹೆಗಡೆ ಯುವ ಪ್ರತಿಭೆಗಳಿಗೆ ಸಾಥ್ ನೀಡುವ ಮೂಲಕ ಅವರ ಪ್ರತಿಭೆ ಅನಾವರಣ ಮಾಡುವ ಕೆಲಸ ಮಾಡುತ್ತಿದ್ದಾರೆ.ಅದರ ಸಾಲಿಗೆ ಇದೀಗ ಮತ್ತೆ ಮುರು ಕಿರುಚಿತ್ರಗಳು ಸೇರ್ಪಡೆಯಾಗಿವೆ.
‘ಕಥೆಗಾರನ ಕತೆ’ , ಗ್ರಾಚಾರ,ಹಾಗೂ ‘ಅಹಂ ಪರಂ’ ಕಿರುಚಿತ್ರ ಬಿಡುಗಡೆಯಾಗಿದ್ದು ಇದರೊಂದಿಗೆ ಯೂಟ್ಯೂಬ್ ಚಾನಲ್ ಮೂಲಕ ಪ್ರದರ್ಶನ ಕಂಡಿವೆ.
ಒಂಬತ್ತು ನಿಮಿಷಗಳ ‘ಕತೆಗಾರನ ಕಥೆ’ ಕಿರುಚಿತ್ರ ನಿರ್ದೇಶಕ ಕೌಶಿಕ ಕೂಡುರಸ್ತೆ ನಿರ್ದೇಶನ ಮಾಡಿದ್ದಾರೆ. ಹಾಸನ ಮೂಲದ ಕೌಶಿಕ ‘ಹೃದಯದ ಮಾತು’ ಸೇರಿದಂತೆ 8 ಕಾದಂಬರಿ ಬರೆದಿದ್ದಾರೆ. ಇಂಜಿನಿಯರಿಂಗ್ ಓದಿಕೊಂಡಿರುವ ಕೌಶಿಕಗೆ ಇದು ಮೊದಲ ಪ್ರಯತ್ನ.
‘ಗ್ರಾಚಾರ’ ಕಿರುಚಿತ್ರವನ್ನು ಅಜಯ್ ಪಂಡಿತ್ ನಿರ್ದೇಶನ ಮಾಡಿದ್ದು, ಮೂಲತಃ ಸಾಫ್ಟವೇರ್ ಇಂಜಿನಿಯರ್. ವಿಭಿನ್ನ ಪ್ರಯತ್ನದಂತೆ ‘ಅಹಂ ಪರಂ’ ಕಿರುಚಿತ್ರವನ್ನು ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ.
ನಿದರ್ಶಕರಾದ ಗಿರಿರಾಜ್, ಚೇತನ ಕುಮಾರ್, ನಟ ‘ಗುಲ್ಟು’ ನವೀನ ಶಂಕರ್ ಸೇರಿ ಹಲವು ಕಿರುಚಿತ್ರ ವೀಕ್ಷಿಸಿ ಹೊಸಬರ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ನಿರ್ದೇಶಕ ಗಿರಿರಾಜ್, ಯುವಕರಿಗೆ ಒಳ್ಳೆಯ ಅವಕಾಶವನ್ನು ಸತ್ಯ ಹೆಗಡೆ ಮಾಡಿಕೊಡುತ್ತಿದ್ದಾರೆ. ಮೂರು ಚಿತ್ರಗಳು ಚೆನ್ನಾಗಿ ಬಂದಿದ್ದು, ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಯುವ ಪ್ರತಿಭೆಗಳಿಗೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.
ನಟ ನವೀನ್‍ಶಂಕರ್ ‘ನಾನು ಕೂಡ ಕಿರುಚಿತ್ರದಲ್ಲಿ ಅಭಿನಯಿಸುತ್ತಾ ಬಂದವನು. ಆಗ ಸತ್ಯ ಹೆಗಡೆ ಅಂತವರು ಸಾಥ್ ನೀಡಲು ಯಾರೂ ಇರಲಿಲ್ಲಈಗಿನವರೆಗೆ ಒಳ್ಳೆಯ ಅವಕಾಶ ಸಿಗುತ್ತದೆ ಕಿರುಚಿತ್ರ ಬಿಡುಗಡೆ ಮಾಡಲು. ಇಂತಹ ಅವಕಾಶ ಇನ್ನಷ್ಟು ಯುವ ಜನರಿಗೆ ಸಿಗಲಿ ಎಂದರು.