ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕøತಿಯ ಅಂಧಾನುಕರಣೆಯ ಹೆಸರಿನಲ್ಲಿ ದಾರಿತಪ್ಪುತ್ತಿದ್ದಾರೆಃ ಮಾಲಿಪಾಟೀಲ್

ವಿಜಯಪುರ, ಜ.13-ನಗರದ ಶಾಂತಿನಿಕೇತನ ಅಂತರಾಷ್ಟ್ರೀಯ ಶಾಲೆಯಲ್ಲಿ ಸಿಡಿಲಮರಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 158 ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯ ಚಂದನಗೌಡ ಮಾಲಿಪಾಟೀಲ್ ಮಾತನಾಡಿ ಯುವಪೀಳಿಗೆ ಆಧುನಿಕತೆ ಮತ್ತು ಪಾಶ್ಚಿಮಾತ್ಯ ಸಂಸ್ಕøತಿಯ ಅಂಧಾನುಕರಣೆಯ ಹೆಸರಿನಲ್ಲಿ ದಾರಿತಪ್ಪುತ್ತಿದ್ದಾರೆ, ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ತಪ್ಪುದಾರಿಯ ಅರಿವು ಅವರಲ್ಲಿ ಮೂಡಿ ಸರಿದಾರಿಯನ್ನು ಆಯ್ದುಕೊಂಡು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿ ಎಂದು ಹೇಳಿದರು.
ಮಕ್ಕಳು ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು. ಅವರ ಘೋಷಣೆಗಳನ್ನು ಕೂಗಿ ಜಯಕಾರ ಹಾಕಿದರು. ಶಿಕ್ಷಕ ವೃಂದಸ್ಮೀತಾ ರಾಠೋಡ, ಜಯಶೀಲಾ ಸಂಖದ, ದೀಪಾ ಬಿರಾದಾರ, ಅಬುಬಕರ, ಪ್ರಭು ಮುದ್ದೇಬಿಹಾಳ, ತಹಶೀನ, ಐಶ್ವರ್ಯ, ಸಂಜೀವ ಟೆಂಕಲಿ, ವಿಶ್ವನಾಥ ಗೆಣ್ಣೂರ ಇತರರು ಉಪಸ್ಥಿತರಿದ್ದರು.