ಯುವ ಪೀಳಿಗೆ ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಬೇಕು: ಜಿ.ಆರ್.ಅಶ್ವಥ್‍ನಾರಾಯಣ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.20:- ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿ ಸುಸಜ್ಜಿತವಾದ ಟೌನ್ ಕ್ಲಬ್ ಇದ್ದು, ಯುವಕರು ಕ್ರೀಡೆಯ ಬಗ್ಗೆ ಆಸಕ್ತಿಯನ್ನು ಹೊಂದಿ ತರಬೇತಿ ಪಡೆದು ದೈಹಿಕ ಸಾಮಥ್ರ್ಯವನ್ನು ವೃದ್ದಿಸಿಕೊಳ್ಳಬೇಕು ಎಂದು ಚಾಮರಾಜನಗರ ಟೌನ್ ಅಸೋಷಿಯೇಷನ್ ಗೌರವ ಅಧ್ಯಕ್ಷ ಜಿ.ಆರ್. ಅಶ್ವಥ್ ನಾರಾಯಣ್ ತಿಳಿದರು.
ನಗರದ ಟೌನ್ ಕ್ಲಬ್‍ನಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ಪ್ರಶಸ್ತಿ ಪಡೆದಿರುವ ಕ್ಲಬ್‍ನ ಸದಸ್ಯರಾದ ಮಂಜುನಾಥ್, ಮಹೇಶ್ ಕುದರ್, ಸಿ.ಎನ್. ಸತ್ಯನಾರಾಯಣ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
1977ರಲ್ಲಿಯೇ ಚಾಮರಾಜನಗರದಲ್ಲಿ ಟೌನ ಕ್ಲಬ್ ಆರಂಭವಾಗಿದೆ. ಇಲ್ಲಿ ತರಬೇತಿ ಪಡೆದು ಬಹಳಷ್ಟು ಮಂದಿ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇಂಥ ಚಾಮರಾಜನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರೀಡೆಯ ಬಗ್ಗೆ ಮಕ್ಕಳಿಗೆ ಆಸಕ್ತಿ ಕಡಿಮೆಯಾಗಿದೆ. ಮೊಬೈಲ್ ಹಾಗೂ ಆನ್‍ಲೈನ್ ಗೇಮ್‍ಗಳಲ್ಲಿ ಮಕ್ಕಳು ತಲ್ಲಿನರಾಗಿದ್ದಾರೆ. ಇಂಥ ಸಂದರ್ಭದಲ್ಲಿ ಟೆನಿಸ್, ಟೇಬಲ್ ಟೆನಿಸ್ ಹಾಗೂ ಷೆಟಲ್ ಬ್ಯಾಂಡ್ಮಿಟನ್‍ನಲ್ಲಿ ತರಬೇತಿ ಪಡೆದು ಜಿಲ್ಲೆಯನ್ನು ಪ್ರತಿನಿಧಿಸುವರು ಕಡಿಮೆಯಾಗುತ್ತಿದ್ದಾರೆ. ಓದಿನ ಜೊತೆಗೆ ಇಂಥ ಕ್ರೀಡೆಗಳಲ್ಲಿ ಮಕ್ಕಳು ಆಸಕ್ತಿ ವಹಿಸುವಂತೆ ಮಾಡಬೇಕು. ಸದಸ್ಯತವನ್ನು ಪಡೆದು, ತರಬೇತಿ ಪಡೆಲು ಮುಂದಾಗಬೇಕು ಎಂದು ತಿಳಿಸಿದರು.
ಟೌನ್ ಕ್ಲಬ್ ಅಧ್ಯಕ್ಷ ಜಿ. ನಾರಾಯಣ್ ಪ್ರಸಾದ್ ಮಾತನಾಡಿ, ನಮ್ಮ ಕ್ಲಬ್ ಸದಸ್ಯರಾದ ಮಂಜುನಾಥ್ ಅವರು 35 ವರ್ಷ ಮೇಲ್ಪಟ್ಟವರ ಡಬಲ್ಸ್‍ನಲ್ಲಿ ಪ್ರಥಮ ಸ್ಥಾನ, ಮಹೇಶ್ ಕುದರ್ ಅವರು 50 ವರ್ಷಧ ಮೇಲ್ಪಟ್ಟವರ ಡಬಲ್ಸ್‍ನಲ್ಲಿ ಎರಡನೇ ಸ್ಥಾನ, ಸಿಂಗಲ್ಸ್‍ನಲ್ಲಿ ಮೂರನೇ ಸ್ಥಾನ ಹಾಗೂ ಸಿ.ಎನ್. ಸತ್ಯನಾರಾಯಣ 75 ವರ್ಷ ಮೇಲ್ಪಟ್ಟವರ ಡಬಲ್ಸ್‍ನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರ ಸಾಧನೆ ಇನ್ನು ಎತ್ತರಕ್ಕೆ ಸಾಗಲಿ. ಅದೇ ರೀತಿ ಯುವ ಪೀಳಿಗೆಗೆ ಕ್ಲಬ್ ಸದಸ್ಯತ್ವವನ್ನು ಪಡೆದು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಡಿ.ಪಿ. ಉಲ್ಲಾಸ್, ಖಜಾಂಚಿ ಹರೀಶ್, ನಿರ್ದೇಶಕರಾದ ಸುರೇಶ್, ಸುಭಾಷ್, ಎಸ್. ಸೋಮನಾಯಕ, ಸುಮನ್, ಸಂಜಯ್, ನಾಗೇಂದ್ರ ಮೊದಲಾದವರು ಇದ್ದರು.