ಯುವ ಪೀಳಿಗೆಯಲ್ಲಿ ವೈಜ್ಞಾನಿಕ ಮನೋಭಾವನೆ ಅವಶ್ಯ: ಡಾ. ಆರ್.ಎಸ್. ಕಲ್ಲೂರಮಠ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.29:ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಐ.ಕ್ಯೂ.ಎ.ಸಿ. ಹಾಗೂ ವಿಜ್ಞಾನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಆಚರಿಸಲಾಯಿತು.
ಈ ಕಾರ್ಯಕ್ರಮ ಉದ್ಘಾಟಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆರ್.ಎಸ್. ಕಲ್ಲೂರಮಠ ಮಾತನಾಡಿ, ಇಂದಿನ ಯುಗದಲ್ಲಿ ಎಲ್ಲ ಜನಸಾಮಾನ್ಯರಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ವಿಜ್ಞಾನಿಗಳ ಕೊಡುಗೆಗಳನ್ನು ಗುರುತಿಸಿ, ಅವರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕÀ ಡಾ. ಚಿದಾನಂದ ಎಸ್. ಆನೂರ, ಆಧುನಿಕ ಜಗತ್ತಿನಲ್ಲಿ ವೈಜ್ಞಾನಿಕ ಸಂಶೋಧನೆಗಳಿಗೆ ಹೆಚ್ಚು ಪ್ರೋತ್ಸಾಹ ದೊರೆತಾಗ ಮಾತ್ರ ದೇಶ ತೀವ್ರ ಗತಿಯಲ್ಲಿ ಅಭಿವೃದ್ಧಿ ಹಾಗೂ ವಿಕಸನ ಹೊಂದಲು ಸಾಧ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿದ ಡಾ. ಎಮ್.ಆರ್. ಕೆಂಭಾವಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ. ಆಸೀಫ್ ರೋಜಿನದಾರ, ಪ್ರೊ. ಅಸಾದುಲ್ಲಾ, ಡಾ. ಎಮ್.ಆರ್. ಕೆಂಭಾವಿ, ಡಾ. ದಾವಲಸಾ ಪಿಂಜಾರ, ಪ್ರೊ. ಪಿ.ಬಿ. ಬಿರಾದಾರ, ಪ್ರೊ. ಸವಿತಾ ಪಾಟೀಲ, ಪ್ರೊ. ನಿಲೋಫರ ಕಲಾದಗಿ, ಡಾ. ಆರ್.ಡಿ. ಬೆನಕನಹಳ್ಳಿ, ಪ್ರೊ. ಲಕ್ಷ್ಮೀ ಮೋರೆ, ಡಾ. ಭಾರತಿ ಹೊಸಟ್ಟಿ, ಪ್ರೊ. ಎಮ್.ಆರ್.ಜೋಶಿ, ಪ್ರೊ. ರಶ್ಮಿ ರೊಟ್ಟಿ, ಪ್ರೊ. ಮಂಜುನಾಥ ಗಾಣಿಗೇರ, ಪ್ರೊ. ರಶ್ಮಿ ಹೊನಕೇರಿ, ಪ್ರೊ. ತನವೀರ ಅಬ್ಬಾಸ, ಪ್ರೊ. ಸೃತಿ ಕದಮ್, ಶಿವಾನಂದ ಸಾಂಗೋಲಿ, ರಮೇಶ ಬಳ್ಳೊಳ್ಳಿ, ನವೀನಗೌಡ ಬಿರಾದಾರ, ವೀರನಗೌಡ ಪಾಟೀಲ, ಸುಜಾತಾ ಬಿರಾದಾರ ಹಾಗೂ ಇತರ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರೊ. ಆಸೀಫ್ ರೊಜಿನದಾರ ಸ್ವಾಗತಿಸಿದರು. ಪ್ರೊ. ಅಸಾದುಲ್ಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಸೃತಿ ಕದಮ್ ನಿರೂಪಿಸಿದರು ಹಾಗೂ ಪ್ರೊ. ರಶ್ಮಿ ರೊಟ್ಟಿ ವಂದಿಸಿದರು.