ಯುವ ಪೀಳಿಗೆಯಲ್ಲಿ ಧರ್ಮ ಜಾಗೃತಿ ಅಗತ್ಯ

ಬೈಲಹೊಂಗಲ,ಮಾ5: ಇಂದಿನ ಪೀಳಿಗೆಗೆ ಪ್ರಮುಖವಾಗಿ ಧರ್ಮದ ಜಾಗೃತಿ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು.
ಪಟ್ಟಣದ ಕುಲಕರ್ಣಿ ಗಲ್ಲಿಯಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಕಚೇರಿ ವತಿಯಿಂದ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಕ್ಕಳು ನಿರಂತರ ಮೊಬೈಲ್ ಗೆ ಅಂಟಿಕೊಂಡಿರುವುದರಿಂದ ಧರ್ಮ,ಆಚಾರ,ವಿಚಾರದ ಕುರಿತು ಮಾಹಿತಿಯ ಕೊರತೆ ಉಂಟಾಗಿದೆ.
ದೇಶದ ಮುಂದಿನ ಪ್ರಜೆಗಳಾಗಿ, ಸದೃಢ ದೇಶ ನಿರ್ಮಿಸುವಲ್ಲಿ ಧರ್ಮದ ಜಾಗೃತಿ ಅವಶ್ಯಕ ಎಂದರು.
ಮಾ.6,7, ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಮಾ.8 ರಂದು ಸಾಯಂಕಾಲ 4 ಘಂಟೆಗೆ ಮಹಾರಥೋತ್ಸವ ಜರುಗಲಿದೆ ಎಂದು ತಿಳಿಸಿದರು.
ವೇ. ಮೂ. ಮಹಾಂತೇಶ ತೆಗ್ಗಿನಮಠ,ವೇ. ಮೂ.ಸದಾಶಿವಯ್ಯ ತೆಗ್ಗಿನಮಠ ಶಾಸ್ತ್ರಿಗಳ ನೇತೃತ್ವದಲ್ಲಿ ಹಳೆ ಹನುಮಂತ ದೇವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಗುಡಿ ಓಣಿ,ಇಂಚಲ ಗಲ್ಲಿ, ಪಾಟೀಲ ಗಲ್ಲಿ, ಕುಲಕರ್ಣಿ ಗಲ್ಲಿ ಯ ಪ್ರಮುಖ ಬೀದಿಗಳಲ್ಲಿ ಧರ್ಮ ಜಾಗೃತಿ ಪಾದಯಾತ್ರೆ ನಡೆಸಲಾಯಿತು.
ಮಡಿವಾಳಪ್ಪ ಹೋಟಿ, ವಿಠ್ಠಲ ಅಂದಾನಿ, ಪುಂಡಲಿಕ ಹೋಟಿ, ಕುಮಾರ ಪಾಟೀಲ, ಸುಭಾಷ್ ತುರಮರಿ, ಅಶೋಕ ಸವದತ್ತಿ, ಸೋಮನಾಥ ಸೊಪ್ಪಿಮಠ, ಬಸವರಾಜ ದೊಡಮನಿ, ಕಿರಣ ಶಿರವಂತಿ, ವಿಠ್ಠಲ ಬಡ್ಡಿಮನಿ ಸೇರಿದಂತೆ ಶ್ರೀಮಠದ ಭಕ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.