ಯುವ ಪೀಳಿಗೆಗೆ ರಾಮಾನುಜನ್ ರವರು ಸ್ಫೂರ್ತಿ

ಬಳ್ಳಾರಿ, ಡಿ.23: ಇಂದಿನ ಯುವ ಪೀಳಿಗೆ ಹಾಗೂ ಸಂಶೋಧನಾರ್ಥಿಗಳಿಗೆ ರಾಮಾನುಜನ್‍ರವರು ಸ್ಪೂರ್ತಿ, ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯವನ್ನು ಅಧ್ಯಯನ ಮತ್ತು ಸಂಶೋಧನೆಗೆ ಮೀಸಲಿಡಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಿ ಕೆ ತುಳಸಿಮಾಲ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಮತ್ತು ಗಣಕ ವಿಜ್ಞಾನ ವಿಭಾಗದಿಂದ ಮಂಗಳವಾರ ಗಣಿತಜ್ಞ ರಾಮಾನುಜನ್ ರವರ 133ನೇ ಜನ್ಮ ದಿನಾಚರಣೆಯನ್ನು ರಾಮಾನುಜನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಲಸಚಿವರು (ಮೌಲ್ಯಮಾಪನ) ಪ್ರೊ. ಶಶಿಕಾಂತ ಉಡಿಕೇರಿರವರು ಮಾತನಾಡಿ, ರಾಮಾನುಜನ್‍ರವರು ನಡೆದು ಬಂದ ದಾರಿಯನ್ನು ಸ್ಮರಿಸುತ್ತ, ಅವರ ಆದರ್ಶ ಮತ್ತು ಅವರ ಬದುಕ್ಕಿದ ಅಲ್ಪ ಸಮಯದಲ್ಲೇ ಗಣಿತಶಾಸ್ತ್ರದ ಸಂಶೋಧನೆಗೆ ಕೊಟ್ಟ ಕೊಡುಗೆ ಅಪಾರ ಎಂದು ನೆನಪಿಸಿದರು.
ಉದ್ಘಾಟನಾ ಭಾಷಣಕಾರರಾದ ಕಾರ್ಯಕ್ರಮದಲ್ಲಿದ್ದ ಮದ್ರಾಸ್ ವಿಶ್ವವಿದ್ಯಾಲಯದಿಂದ ರಾಮಾನುಜನ್ ಪ್ರಶಸ್ತಿ ಪುರಸ್ಕೃತರಾದ .ಪ್ರೋ. ಮಹದೇವ ನಾಯ್ಕ ವಿಶ್ರಾಂತ ವಿಶೇಷಾಧಿಕಾರಿಗಳು ಮಂಡ್ಯ ವಿಶ್ವವಿದ್ಯಾಲಯ ಇವರು ರಾಮಾನುಜನ್‍ರವರು ಕೈಗೊಂಡ ಸಂಶೋಧನ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ಆನ್‍ಲೈನ್ ಮೂಲಕ ಭಾಷಣ ಮಾಡಿದರು.
ವಿದ್ಯಾರ್ಥಿನಿಯರಾದ ಕುಸುಮ ಮತ್ತು ಪೂಜಾರವರು ರಾಮಾನುಜನ್‍ರವರ ಜೀವನ ಚರಿತ್ರೆಯನ್ನು ಮತ್ತು ಅವರ ಕೊಡುಗೆಗಳನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದ ಸಂಚಾಲಕರು ಮತ್ತು ವಿಭಾಗದ ಅಧ್ಯಕ್ಷರಾದ ಪ್ರೋ. ಕೆ.ವಿ. ಪ್ರಸಾದ, ಪ್ರೊ. ಲೋಕೇಶ್, ಪ್ರೊ. ಹನುಮೇಶ ವೈದ್ಯ, ಪ್ರೊ. ಸಂತೋಷ್ ಪಾಟೀಲ್ ಹಾಗೂ ವಿಭಾಗದ ಎಲ್ಲಾ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.