ಯುವ ಪೀಳಿಗೆಗೆ ಮಾನಸಿಕ ಆರೋಗ್ಯ ಕಾರ್ಯಕ್ರಮ ತುಂಬಾ ಅವಶ್ಯ:ಪ್ರದೀಪ ಕೊಳ್ಳ

ಬೀದರ: ಅ 11: ಅಸಮಾನತೆ ಜಗತ್ತಿನಲ್ಲಿ ಮಾನಸಿಕ ಆರೋಗ್ಯ ಘೋಷಣೆಯಾಗಿದ್ದು, ಮಾನಸಿಕ ಆರೋಗ್ಯವು ಸಹ ಕಾಪಾಡಿಕೊಳ್ಳಲು ಪ್ರತಿ ಒಬ್ಬರಿಗೂ ಸಹ ಅವಶ್ಯಕವಾಗಿರುವ ಯುವ ಪೀಳಿಗೆಗೆ ಮಾನಸಿಕ ಆರೋಗ್ಯ ಕಾರ್ಯಕ್ರಮ ತುಂಬಾ ಅವಶ್ಯಕವಾಗಿದೆ ಎಂದು ಬೀದರ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಪ್ರದೀಪ ಕೊಳ್ಳ ಹೇಳಿದರು.

ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಬಿ.ವ್ಹಿ.ಬಿ. ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಪರೋಪಕಾರದ ಜೊತೆ ಸಂಗೀತ ಆಲಿಸುವುದು ಹಾಗೂ ವಿವಿಧ ವಿಜ್ಞಾನ ತಂತ್ರಜ್ಞಾನದ ಅವಶ್ಯಕವಾಗಿರುತ್ತದೆ ಎಂದು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನಿರಗುಡೆ ಮಾತನಾಡಿ, ಮನುಷ್ಯನಿಗೆ ದೈಹಿಕ ಕಾಯಿಲೆ ಕಾಪಾಡುವುದು ಎಷ್ಟು ಮುಖ್ಯವಾಗಿದೆಯೋ ಅದೇ ರೀತಿ ಮಾನಸಿಕ ಕಾಯಿಲೆಯು ಸಹ ತುಂಬಾ ಮುಖ್ಯವಾಗಿರುತ್ತದೆ. ನಗುವೇ ಜೀವನ ಎಂಬ ಧ್ಯೇಹ ವಾಕ್ಯದೊಂದಿಗೆ ಮನುಷ್ಯನ ಸುಖ ಅವರ ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಅಲ್ಲದೇ ತನ್ನ ಸ್ನೇಹಿತರ ಹಾಗೂ ತನ್ನಕ್ಕಿಂತ ಹಿರಿಯ ಜೊತೆ ತನ್ನ ಸಮಸ್ಯೆಗಳನ್ನು ಹೇಳಿಕೊಂಡಾಗ ಅವಾಗ ವ್ಯಕ್ತಿಯು ಮಾನಸಿಕ ಅಸ್ವಸ್ಥೆಯಿಂದ ಮಾನಸಿಕ ಸ್ವಸ್ಥೆತೆ ಕಡೆಗೆ ಹೋದಾಗ ಮಾತ್ರ ಮಾನಸಿಕ ಆರೋಗ್ಯ ನೆಮ್ಮದಿಯಾಗಿರುಲು ಸಾಧ್ಯವೆಂದು ಹೇಳಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ. ಕಿರಣ ಎಂ. ಪಾಟೀಲ್ ಮಾತನಾಡಿ, ಮಾನಸಿಕ ಆರೋಗ್ಯ ಕಾರ್ಯಕ್ರಮವು ಇಡೀ ಪ್ರಪಂಚದಲ್ಲಿಯೇ ಅತೀ ಹೆಚ್ಚು ಕಂಡು ಬರುವಂತಹ ರೋಗವಾಗಿದೆ ಅಲ್ಲದೇ ಭಾರತ ದೇಶದಲ್ಲಿ ಸುಮಾರು 145 ಕೋಟಿ ಜನಸಂಖ್ಯೆ ಹೊಂದಿದ್ದು, ಪ್ರತಿ ಐದು ಜನರಲ್ಲಿ ಒಬ್ಬರಿಗೆ ವಿದ್ಯಾರ್ಥಿ ಜೀವನದಲ್ಲಿ ಏಳು ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ ಈ ಮಾನಸಿಕ ರೋಗದಿಂದ ತುತ್ತಾಗುತ್ತಿದ್ದಾರೆ. ಇತ್ತೀಚಿನ ದಿನಮಾನದಲ್ಲಿ ಮೊಬೈಲ್ ಬಳಕೆ ಮುಖಾಂತರ ವಿದ್ಯಾರ್ಥಿಗಳ ಜೀವನ ಮಾನಸಿಕ ಅಸ್ವಸ್ಥೆಗೆ ಜಾರುತ್ತಿದ್ದಾರೆ. ಇದರಿಂದ ಮುಕ್ತಿ ಪಡೆಯಬೇಕಾದರೆ ಯೋಗ, ಧ್ಯಾನ, ಪ್ರಾಣಾಯಾಮ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಜೀವನ ಸುಗಮವಾಗಿ ನಡೆಸಲು ಸಾಧ್ಯವೆಂದರು. ಈ ಸಂದರ್ಭದಲ್ಲಿ ಮನೋವೈದ್ಯ ಡಾ.ಅಭಿಜೀತ ಎಸ್.ಪಾಟೀಲ್, ಬಸವೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಸಿ. ಕನಕಟ್ಟೆ, ಬಿ.ವ್ಹಿ ಭೊಮರೆಡ್ಡಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪಿ ವಿಠಲರೆಡ್ಡಿ, ಮನೋವೈದ್ಯ ಡಾ. ಅಮಲ್ ಶರೀಫ್, ಕುಷ್ಠರೋಗ ವಿಭಾಗದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ, ಬಿವ್ಹಿಬಿ ಕಾಲೇಜಿನ ರಾಸಾಯನ ಶಾಸ್ತ್ರ ವಿಭಾದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಕೋಟೆ, ಮನೋಶಾಸ್ತ್ರಜ್ಞ ಮಲ್ಲಿಕಾರ್ಜುನ ಎಸ್.ಗುಡ್ಡೆ, ಆಪ್ತ ಸಮಾಲೋಚಕ ಶೀಮಪ್ಪಾ ಬಿ ಸರಕುರೆ, ಸಾಮಾಜಿಕ ಕಾರ್ಯಕರ್ತರ ಪರಶುರಾಮ ಜಿ. ತಗನೂರ್, ಶೂಶ್ರೂಷಕ ಪ್ರಮೋದ, ಬಸವೇಶ್ವರ ಮಹಾವಿದ್ಯಾಲಯದ ಉಪನ್ಯಾಸಕರುಗಳಾದ ವೀಣಾ ಜಲಾದೆ, ಸಂತೋಷ ಸಜ್ಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.