ಯುವ ಪೀಳಿಗೆಗೆ ಕ್ರೀಡೆ ಉತ್ತಮ ಆಯಾಮ

ಕೆಆರ್ ಪುರ,ಏ.೮- ಕ್ರೀಡೆ ಸಮಾಜಕ್ಕೆ ಮತ್ತು ಯುವ ಪೀಳಿಗೆಗೆ ಉತ್ತಮ ಆಯಾಮವಾಗಿದ್ದು ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಯುವಕರು ದೇಶಕ್ಕೆ ಕೀರ್ತಿ ತರುವ ಕಾರ್ಯ ಮಾಡಬೇಕೆಂದು ಆಯೋಜಕ ಲಯನ್ಸ್ ಸ್ಪೋರ್ಟ್ಸ್ ಅಕಾಡೆಮಿಯ ಪುರುಷೋತ್ತಮ್ ತಿಳಿಸಿದರು

ಕೆಆರ್‌ಪುರದ ಡಾ. ಅಂಬೇಡ್ಕರ್ ಮೈದಾನದಲ್ಲಿ ನಡೆದ ಕೃಷ್ಣರಾಜಪುರ ಪ್ರೀಮಿಯರ್ ಲಿಗ್ – ೨೦೨೧ ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿದರು.
ಯುವ ಪೀಳಿಗೆಗೆ ಉತ್ತಮವಾದ ಆಯಟಮವಾಗಿದ್ದು, ಕ್ರೀಡೆಯಿಂದ ಸದೃಢ ಆರೋಗ್ಯ ಪಡೆಯಬಹುದೆಂದು ನುಡಿದರು.
ಕ್ರೀಡಾ ಪಂದ್ಯಾಗಳಿಗೆ ಹೆಚ್ಚು ವತ್ತು ನೀಡುವ ಮೂಲಕ ಯುವಕರಿಗೆ ಉತ್ತಮ ಆರೋಗ್ಯದ ಜೊತೆಗೆ ರಾಜ್ಯ ಹಾಗೂ ರಾಷ್ಟ್ರದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗುವಂತೆ ಕಿವಿಮಾತು ಹೇಳಿದರು.


ಕ್ರೀಡಾ ಸ್ಪೋರ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕ್ರೀಡಾ ಕೂಟವನ್ನು ಆಯೋಜಿಸಿದೆ, ಕೋವೀಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ೫ ದಿನಗಳ ಕಾಲ ಹತ್ತು ಓವರ್‌ಗಳ ಪಂದ್ಯಾವಳಿ ಆಯೋಜಿಸಲಾಗಿದ್ದು,
ಒಟ್ಟಾರೆ ಹದಿನೆಂಟು ಟೀಮ್ ಗಳನ್ನು ಒಳಗೊಂಡ ಕ್ರೀಡಾಕೂಟದಲ್ಲಿ ಮೀಡಿಯಾ ಪರ್ಸನ್ಸ್ ಹಾಗೂ ಚಿತ್ರರಂಗದ ನಟರೂ ಸೇರಿದಂತೆ ೧೬ ನುರಿತ ತಂಡಗಳು.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಫಾಲ್ಕಾನ್ ಮತ್ತು ರಾಯಲ್ ಇಂಡಿಯನ್ಸ್ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗಿ ಫಾಲ್ಕಾನ್ ತಂಡ ೨೦೨೧ ಕೃಷ್ಣರಾಜಪುರ ಪ್ರೀಮಿಯರ್ ಲೀಗ್‌ನ ವಿಜೇತರಾಗಿದ್ದಾರೆ. ಗೆದ್ದಂತಹ ತಂಡಕ್ಕೆ ಫ್ರೈಸ್ ಮನಿಯಾಗಿ ೧ಲಕ್ಷ ನಗದು ಬಹುಮಾನ ಹಾಗೂ ರನ್ನರ್ ಅಪ್ ತಂಡಕ್ಕೆ ಐವತ್ತು ಸಾವಿರ ನಗದು ಬಹುಮಾನ ನೀಡಲಾಗಿದೆ .
ಅತಿ ಹೆಚ್ಚು ರನ್ ಗಳನ್ನು ಗಳಿಸುವ ಪಂದ್ಯ ಪುರುಷೋತ್ತಮ ಪ್ರಶಸ್ತಿ ಅನಿಲ್ ಅವರಿಗೆ ದ್ವಿಚಕ್ರ ವಾಹನ ಗೆಲ್ಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿನಾಯಕ ಮಳಿಗೆ ಮಾಲೀಕ ಚಿದಂಬರಂ ಮುಖಂಡರಾದ ಶಿವಪ್ಪ, ಗಿರೀಶ್ ಇದ್ದರು.

ಸುದ್ದಿಚಿತ್ರ: ಕೆ.ಆರ್.ಪುರ ಪ್ರೀಮಿಯರ್ ಲೀಗ್ ವಿಜೇತ ಫಾಲ್ಕನ್ ತಂಡಕ್ಕೆ ಆಯೋಜಕ ಪುರುಷೋತ್ತಮ್ ಅವರು ಪ್ರಶಸ್ತಿ ವಿತರಿಸಿದರು.