
ಕೆ.ಆರ್.ಪುರ,ಮೇ.೩-ಯುವ ಪೀಳಿಗೆಗೆ ಅಗತ್ಯವಾದ ಕ್ರೀಡಾಂಗಣ, ಶಿಕ್ಷಣ ಸೌಲಭ್ಯ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಹಲವು ದಿಟ್ಟ ಹೆಜ್ಜೆ ಇಟ್ಟಿದ್ದು ಯುವ ಪೀಳಿಗೆಯ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಹೂಡಿ, ವರ್ತೂರು, ಸೋರಹುಣಸೆ, ಸಾದರಮಂಗಳ,ಬಳಗೆರೆ, ಸಾದರಮಂಗಳ ಸ್ಲಂ ಬೋರ್ಡ್, ಹಳ್ಳಿ, ಅಯ್ಯಪ್ಪನಗರ, ಮಧುರಾನಗರ,ವಾಲೇಪುರ, ರಾಜಪಾಳ್ಯ, ತಿಗಳರಪಾಳ್ಯ, ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿ ಮಾತನಾಡಿದರು.
ಮಹದೇವಪುರ ಕ್ಷೇತ್ರದಲ್ಲಿ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಹೂಡಿ ಒಳಾಂಗಣ ಕ್ರೀಡಾಂಗಣ, ಗುಂಜೂರು ವಾಜಪೇಯಿ ಕ್ರೀಡಾಂಗಣ, ದೊಡ್ಡ ಕನ್ನಲ್ಲಿ, ಕಾಡುಗುಡಿ ಗ್ರಾಮಗಳಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.
ಸಾಮಾಜಿಕ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು,ಮಹದೇವಪುರ ಕ್ಷೇತ್ರದ ಉಜ್ವಲ ಭವಿಷ್ಯಕ್ಕಾಗಿ ಸಮಾಜಿಕ ಬದಲಾವಣೆ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಕೊರೊನಾ ಸಂದರ್ಭದಲ್ಲಿ ಪೌರಕಾರ್ಮಿಕರ, ಚಾಲಕರ ಹಾಗೂ ಸಹಾಯಕರ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಸರ್ವರ ಹಿತ ಕಾಯುವ ಕಾರ್ಯವನ್ನು ನಿರ್ವಹಿಸುತ್ತಿದ್ದೇವೆಂದು ತಿಳಿಸಿದರು.
ಜನಪರ ಯೋಜನೆಗಳನ್ನು ಜಾರಿಗೊಳಿಸಲು ಹಾಗೂ ಡಬಲ್ ಇಂಜಿನ್ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರೆಸಲು ಬಿಜೆಪಿಗೆ ಮತ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್, ನಗರ ಮಂಡಲ ಅಧ್ಯಕ್ಷ ಮನೋಹನ್ ರೆಡ್ಡಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಹೂಡಿ ಪಿಳ್ಳಪ್ಪ, ಕೇಂದ್ರ ಜಿಲ್ಲಾ ಅಧ್ಯಕ್ಷ ಎಚ್.ವಿ.ಮಂಜುನಾಥ್, ಹೂಡಿ ವಾರ್ಡ್ ಅಧ್ಯಕ್ಷ ಬಿ.ಟಿ.ಪಿ ಪ್ರಸಾದ್, ಮುಖಂಡರಾದ ಅನೂಪ್ ರೆಡ್ಡಿ, ವಿಶ್ವನಾಥ್, ಪವನ್ ಇದ್ದರು.
ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಹೂಡಿ ವಾರ್ಡ್‌ನ ವಿವಿಧೆಡೆ ಪ್ರಚಾರ ಮಾಡಿದರು.